ಸಿಎಂಎಸ್‌-ಇಡಿ, ಪ್ಯಾರಾಮೆಡಿಕಲ್ ಮಾಡಿದವರು ಕ್ಲಿನಿಕ್‌ ತೆರೆಯಲು ಅರ್ಹರಲ್ಲ: ಹೈಕೋರ್ಟ್ ಮಹತ್ವದ ಆದೇಶ!

By Sathish Kumar KH  |  First Published Jan 2, 2024, 10:54 PM IST

ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‌ ಮಾಡಿಕೊಂಡವರು ಜನರ ಚಿಕಿತ್ಸೆಗಾಗಿ ಕ್ಲಿನಿಕ್‌ ತೆರೆಯುವುದಕ್ಕೆ ಅರ್ಹರಲ್ಲ ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ.


ಬೆಂಗಳೂರು (ಜ.02): ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಮಾಡಿಕೊಂಡವರು ಸ್ಥಳೀಯವಾಗಿ ಗ್ರಾಮೀಣ ಮಟ್ಟದಲ್ಲಿ ಕ್ಲಿಕಿನ್ ಆರಂಭಿಸಲು ಅನುಮತಿ ನೀಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರನಿಗೆ ತರಾಟೆ ತೆಗೆದುಕೊಂಡು ನ್ಯಾಯಾಲಯ, ಪ್ಯಾರಾಮೆಡಿಕಲ್ ಮಾಡಿದವರಿಗೆ ಕ್ಲಿನಿಕ್ ಆರಂಖಭಿಸುವ ಅರ್ಹತೆಯಿಲ್ಲ. ನೀವು ಸರ್ಕಾರದ ಮಾನದಂಡದಂತೆ ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿ ಕ್ಲಿನಿಕ್ ಆರಂಭಿಸಿ ಎಂದು ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

ರಾಜ್ಯ ಆರೋಗ್ಯ ಇಲಾಖೆಯಿಂದ ಪ್ಯಾರಾ ಮೆಡಿಕಲ್ ಕೋರ್ಸ್‌ ಓದಿದ್ದ ವ್ಯಕ್ತಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಅವರು ಕ್ಲಿನಿಕ್‌ ತೆರೆಯಲು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನಿರಾಕರಣೆ ಮಾಡಲಾಗಿತ್ತು. ಇದರಿಂದ ತಾವು ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಒದಗಿಸಲು ಅನುಮತಿ ಕೋರಿದ್ದರೂ ಸರ್ಕಾರ ಅರ್ಜಿ ವಜಾ ಮಾಡಿದೆ. ತಾವು ಪ್ಯಾರಾ ಮೆಡಿಕಲ್ ಕೋರ್ಸ್‌ ಮಾಡಿಕೊಂಡಿದ್ದರೂ ಸರ್ಕಾರದಿಂದ ಕ್ಲಿನಿಕ್ ತೆರೆಯಲು ಅವಕಾಶ ನೀಡುತ್ತಿಲ್ಲ. ತಮಗೆ ನ್ಯಾಯ ಒದಗಿಸಿ ಕ್ಲಿನಿಕ್ ತೆರೆಯಲು ಸರ್ಕಾರರದಿಂದ ಅನುಮತಿ ಕೊಡುಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

Latest Videos

undefined

ಪೆಟ್ರೋಲ್‌, ಡೀಸೆಲ್ ಖಾಲಿಯಾಗುತ್ತೆಂದು ಬಂಕ್‌ಗಳ ಮುಂದೆ ಎಣ್ಣೆಗೆ ಮುಗಿಬಿದ್ದ ವಾಹನ ಸವಾರರು!

ಈ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು, ನಿಗದಿತ ಅರ್ಹತೆ ಪಡೆಯದೇ ವೈದ್ಯಕೀಯ ಚಿಕಿತ್ಸೆ ನೀಡುವ ಪ್ರಕರಣಗಳು ಹೆಚ್ಚಾಗಿವೆ. ಗ್ರಾಮೀಣ ಭಾಗಗಳಲ್ಲಿ ಅನಧಿಕೃತವಾಗಿ ಚಿಕಿತ್ಸೆ ನೀಡಿ ವಂಚಿಸುವವರಿಗೆ ಕಡಿವಾಣ ಹಾಕಬೇಕಿದೆ. ಮುಗ್ಧ ಜನರಿಗೆ ವಂಚಿಸುವ ಪ್ರಕರಣಗಳಿಗೆ ಅಂತ್ಯ ಹಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಮೂಲಕ ಪ್ಯಾರಾ ಮೆಡಿಕಲ್ ಪೂರ್ಣಗೊಳಿಸಿದವರಿಗೆ ಕ್ಲಿನಿಕ್ ತೆರೆಯಲು ಅನುಮತಿ ನಿರಾಕರಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿಯಲಾಗಿದೆ.

ಅಪ್ರಾಪ್ತ ಸಹೋದರನಿಂದ ಗರ್ಭಿಣಿಯಾದ 12 ವರ್ಷದ ಬಾಲಕಿ,ಗರ್ಭಪಾತ ನಿರಾಕರಿಸಿದ ಕೋರ್ಟ್!

ಇನ್ನು ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಗಳು/ಸಿಎಂಎಸ್-ಇಡಿ (Community Medical Service & Essential Drugs- CMS ED) ಎಂಬ ವಿಷಯದಲ್ಲಿ ಡಿಪ್ಲೋಮ ಪಡೆದವರನ್ನು ವೈದ್ಯರೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ನೀವು ವೈದ್ಯಕೀಯ ಕೋರ್ಸ್‌ ಪೂರ್ಣಗೊಳಿಸಿದಲ್ಲಿ ಮಾತ್ರ ಕ್ಲಿನಿಕ್ ಆರಂಭಿಸಬಹುದು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಈ ಮೂಲಕ ಕೋಲಾರದ ವ್ಯಕ್ತಿ ಸಲ್ಲಿಕೆ ಮಾಡಿದ್ದ ಕ್ಲಿನಿಕ್ ತೆರೆಯುವ ಅರ್ಜಿಯನ್ನು ವಜಾಗೊಳಿಸಿದೆ.

click me!