
ಬೆಂಗಳೂರು(ಆ.11): ಸಾಮಾಜಿಕ ಮಾಧ್ಯಮ ಟ್ವೀಟರ್‌ಗೆ (ಈಗ ‘ಎಕ್ಸ್’ ಕಾಪ್‌ರ್) 50 ಲಕ್ಷ ರು. ದಂಡ ವಿಧಿಸಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ತೀರ್ಪಿಗೆ ವಿಭಾಗೀಯ ಪೀಠ ಆ.30ರವರೆಗೆ ತಡೆಯಾಜ್ಞೆ ನೀಡಿ ಗುರುವಾರ ಮಧ್ಯಂತರ ಆದೇಶ ಮಾಡಿದೆ.
ಕೇಂದ್ರ ಸರ್ಕಾರ 2021 ಮತ್ತು 2022ರ ಅವಧಿಯಲ್ಲಿ ಕೆಲವೊಂದು ಆಯ್ದ ವೈಯಕ್ತಿಕ ಟ್ವೀಟರ್ ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿದ್ದ ಆದೇಶವನ್ನು ಕಾಲಮಿತಿಯೊಳಗೆ ಪಾಲಿಸಲು ವಿಫಲವಾದ ಆರೋಪದ ಮೇಲೆ ಏಕಸದಸ್ಯ ಪೀಠ 50 ಲಕ್ಷ ರು. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ‘ಎಕ್ಸ್’ ಕಾಪ್‌ರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ತಡೆ ಆದೇಶ ಮಾಡಿತು. ಜತೆಗೆ, ಏಕ ಸದಸ್ಯ ನ್ಯಾಯಪೀಠ ವಿಧಿಸಿರುವ ದಂಡದ ಮೊತ್ತದ ಪೈಕಿ 25 ಲಕ್ಷ ರು.ಗಳನ್ನು ಒಂದು ವಾರದಲ್ಲಿ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಮೇಲ್ಮನವಿದಾರ ಕಂಪನಿಗೆ ನಿರ್ದೇಶಿಸಿ ವಿಚಾರಣೆಯನ್ನು ಆ.30ಕ್ಕೆ ಮುಂದೂಡಿತು.
ಸಮೀಕ್ಷೆಯಿಂದ ಅಂಗವಿಕರನ್ನು ಕೈಬಿಟ್ಟ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ದಂಡ ಕಟ್ಟದೇ ಸುಮ್ಮನಿದ್ದ ಟ್ವಿಟರ್:
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಸೂಚನೆ ಪ್ರಶ್ನಿಸಿದ್ದ ಟ್ವೀಟರ್ ಅರ್ಜಿ ವಜಾಗೊಳಿಸುವ ಸಂದರ್ಭದಲ್ಲಿ 50 ಲಕ್ಷ ರು. ದಂಡ ವಿಧಿಸಿದ್ದ ಏಕ ಸದಸ್ಯ ನ್ಯಾಯಪೀಠ, ಆ.14ರೊಳಗೆ ಆ ದಂಡ ಮೊತ್ತ ಪಾವತಿಸಬೇಕು ಎಂದು ಹೇಳಿತ್ತು. ಅದರಂತೆ ಈವರೆಗೆ ದಂಡ ಪಾವತಿಸಿಲ್ಲ. ಮೇಲ್ಮನವಿ ವಿಚಾರಣೆ ನಡೆಸುವ ಮುನ್ನ ಅದರ ವಿಚಾರಣಾ ಮಾನ್ಯತೆ ನಿರ್ಧರಿಸಬೇಕಿದೆ ಎಂದು ವಿಭಾಗೀಯ ಪೀಠ ಮೌಖಿಕವಾಗಿ ನುಡಿಯಿತು.
ಅದಕ್ಕೆ ಉತ್ತರಿಸಿದ ಎಕ್ಸ್ ಕಾಪ್‌ರ್ ಪರ ವಕೀಲರು, ಪ್ರಕರಣದಲ್ಲಿ ನಮ್ಮ ಮೇಲಿನ ನಂಬಿಕೆ ಸಾಬೀತುಪಡಿಸುವ ನಿಟ್ಟಿನಲ್ಲಿ ದಂಡದಲ್ಲಿ ಅರ್ಧಭಾಗ ಅಂದರೆ 25 ಲಕ್ಷ ರು. ಅನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, 25 ಲಕ್ಷ ರು. ರೇವಣಿ ಇಡುವಂತೆ ಸೂಚಿಸಿರುವ ಈ ಆದೇಶವನ್ನು ಟ್ವಿಟರ್ ಪರವಾಗಿ ನ್ಯಾಯವಿದೆ ಎಂಬುದಾಗಿ ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿತು .ಹಾಗೆಯೇ, ಪ್ರತಿವಾದಿಯಾಗಿರುವ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ನ್ಯಾಯಪೀಠ, ಮೇಲ್ಮನವಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಒಂದೊಮ್ಮೆ ಮಧ್ಯಂತರ ತಡೆಯಾಜ್ಞೆ ತೆರವು ಮಾಡಲು ಕೇಂದ್ರ ಸರ್ಕಾರ ಬಯಸಿದಲ್ಲಿ ಆ ಸಂಬಂಧವೂ ಸೂಕ್ತ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತು.
ಕಪ್ಪು ಎಂದು ಪತಿಯನ್ನು ನಿಂದಿಸುವುದು ಕ್ರೌರ್ಯ: ಹೈಕೋರ್ಟ್
ಪ್ರಕರಣದ ಹಿನ್ನೆಲೆ:
ಅನೇಕರು ಆಕ್ಷೇಪಾರ್ಹ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಒಟ್ಟು 1,474 ವ್ಯಕ್ತಿಗತ ಖಾತೆಗಳು ಮತ್ತು 175 ಟ್ವೀಟ್‌ಗಳನ್ನು ನಿರ್ಬಂಧಿಸಲು ಟ್ವೀಟರ್ ಕಂಪನಿಗೆ ಕೇಂದ್ರ ಸರ್ಕಾರದ ಹತ್ತು ನಿರ್ಬಂಧ ಆದೇಶ ಹೊರಡಿಸಿತ್ತು. 2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್ ಲಿಂಕ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಟ್ವೀಟರ್‌ಗೆ ನಿರ್ದೇಶಿಸಿತ್ತು. ಈ ಪೈಕಿ 39 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿರುವ ಆದೇಶವನ್ನು ಪ್ರಶ್ನಿಸಿ ಟ್ವೀಟರ್ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದೆ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಳೆದ ಒಂದು ವರ್ಷದಿಂದ ಕೋರ್ಚ್‌ನ ಅಮೂಲ್ಯ ಸಮಯ ವ್ಯರ್ಥ ಮಾಡಿದ ಟ್ವೀಟರ್ ನಡೆ ನ್ಯಾಯಸಮ್ಮತವಾಗಿಲ್ಲ ಎಂದು ಹೇಳಿದ್ದ ಏಕ ಸದಸ್ಯ ಪೀಠ, 50 ಲಕ್ಷ ರು. ದಂಡ ವಿಧಿಸಿ 2023ರ ಜು.30ರಂದು ಆದೇಶಿಸಿತ್ತು.
25 ಲಕ್ಷ ರು ದೊಡ್ಡ ಮೊತ್ತವೆ?: ಟ್ವಿಟರ್‌ಗೆ ಹೈಕೋರ್ಟ್
ಒಂದು ವಾರದಲ್ಲಿ 25 ಲಕ್ಷ ರು. ಠೇವಣಿ ಇಡಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಟ್ವಿಟರ್ (ಎಕ್ಸ್ ಕಾಪ್‌ರ್) ವಕೀಲರ ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ ಪ್ರತಿಕ್ರಿಯಿಸಿ, ದೈತ್ಯ ಕಂಪೆನಿಯಾದ ನಿಮಗೆ ಇದು ದೊಡ್ಡ ಮೊತ್ತವೇನಲ್ಲ. ಎಕ್ಸ್ ಕಾಪ್‌ರ್ ವಾರಕ್ಕೆ ಹಲವು ಕೋಟಿ ವ್ಯವಹಾರ ನಡೆಸುತ್ತಿದೆ. ಈ ಹಣವನ್ನು ಒಂದೇ ದಿನದಲ್ಲಿ ಪಾವತಿಸಬಹುದು. ಒಂದು ವಾರ ಸಾಕು ಎಂದು ಮೌಖಿಕವಾಗಿ ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ