ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?

Published : Nov 03, 2025, 08:29 PM IST
CM siddaramaiah

ಸಾರಾಂಶ

ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿಎಂ ಸಿದ್ದರಾಮಯ್ಯ ಹೇಳಿದ್ದು ಯಾರಿಗೆ? 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಭಾಷಣದಲ್ಲಿ ಆಡಿದ ಮಾತುಗಳು ಇದೀಗ ಚರ್ಚೆಯಾಗುತ್ತಿದೆ.

ಮೈಸೂರು (ನ.03) ಹೀರೋ ಪದೆ ಮೇಲೆ ಹೇಗೆ ಇರುತ್ತಾರೋ, ಅದೇ ರೀತಿ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು. ಪರದೇ ಮೇಲೆ ಒಂದು ರೀತಿ, ನಿಜನ ಜೀವನದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಇರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೀರೋಗಳ ಆದರ್ಶವಾಗಿದ್ದರೆ ಉತ್ತಮ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚ್ಯವಾಗಿ ಹೆಸರು ಹೇಳದೆ, ನಟನ ಕಿವಿ ಹಿಂಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿದೆ.

ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೀರೋಗಳ ಕುರಿತು ಆಡಿದ ಮಾತು ಚರ್ಚೆಯಾಗುತ್ತಿದೆ. ತೆರೆ ಮೇಲೆ ಹೀರೋಗಳಾಗಿ, ನಿಜ ಜೀವನದಲ್ಲಿ ವಿಲನ್‌ಗಳಾಗಿರುವ ನಟರ ಕುರಿತು ಸಿದ್ದರಾಮಯ್ಯ ಭಾಷಣದಲ್ಲಿ ಉಲ್ಲೇಖಿಸಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ನಟ-ನಟಿಯರು ಆದರ್ಶರಾಗಿರಬೇಕು ಎಂದು ಸಿದ್ದರಾಮಯ್ಯನವರು ಕಿವಿ ಮಾತು ಹೇಳಿದ್ದಾರೆ.

ಡಾ.ರಾಜ್‌ಕುಮಾರ್ ಸಿನಿಮಾ, ನಿಜ ಜೀವನದಲ್ಲಿ ಆದರ್ಶವಾಗಿದ್ದರು

ಈಗ ಸಿನಿಮಾ ಹೀರೋ ನೋಡಿ ಜನ ಬದಲಾವಣೆ ಆಗುವುದು ಕಡಮೆ ಆಗಿದೆ. ಹಿಂದೆ ಸಿನಿಮಾ ಹೀರೋ ನೋಡಿ ಜನ ಬದಲಾಗುತ್ತಿದ್ದರು. ಹಲವರು ಸಿನಿಮಾ ನೋಡಿ ಹೊಸ ಜೀವನ ಕಟ್ಟಿಕೊಂಡಿದ್ದಾರೆ. ಡಾ. ರಾಜಕುಮಾರ್ ಸಿನಿಮಾದಲ್ಲಿ ಹೇಗೆ ಇರುತ್ತಿದ್ದರ, ನಿಜ ಜೀವನದಲ್ಲೂ ಅದೇ ರೀತಿ ಇದ್ದರು. ಹೀಗಾಗಿ ಡಾ.ರಾಜ್‌ಕುಮಾರ್ ಅವರನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ

ಕನ್ನಡ ಸಿನಿಮಾ ಬೆಳವಣಿಗೆ, ಅನುದಾನ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ ಸಿದ್ದರಾಮಯ್ಯ, ಕನ್ನಡ ಸಿನಿಮಾಗಳಿಗೆ ಬಾಕಿ ಇರುವ ಸಬ್ಸಿಡಿಯನ್ನು ಒಟ್ಟಿಗೆ ಕೊಡುತ್ತೇವೆ. ಸಬ್ಸಿಡಿ ಗಾಗಿ ಸಿನಿಮಾ ತಯಾರು ಮಾಡಬೇಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಜನ ನೋಡುವ ಸಿನಿಮಾ ಮಾಡಿ. ಅಂತಹ ಸಿನಿಮಾಕ್ಕೆ ಸಬ್ಸಿಡಿ ಕೊಟ್ಟೆ ಕೊಡುತ್ತೇವೆ‌ ಎಂದು ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ಸಿನಿಮಾ ನಗರಿ ನಿರ್ಮಾಣ

ಕನ್ನಡ ಚಿತ್ರರಂಗಕ್ಕೆ ಮಹತ್ತರ ಕೊಡುಗೆ ನೀಡಲು ಸಿನಿಮಾ ನಗರಿ ನಿರ್ಮಾಣದ ಅಪ್‌ಡೇಟ್ ನೀಡಿದ್ದಾರೆ. ಮೈಸೂರಿನಲ್ಲಿ 160 ಏಕರೆಯಲ್ಲಿ ಸಿನಿಮಾ ನಗರಿ ನಿರ್ಮಾಣ ಮಾಡುತ್ತೇವೆ. 160 ಏಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ. ಡಿಸೆಂಬರ್ ಅಂತ್ಯಕ್ಕೆ ಡಿಪಿ ಆರ್ ಕೂಡ ತಯಾರಾಗುತ್ತದೆ. ನಂತರ ಬೇಗ ಟೆಂಡರ್ ಕರೆದು ಪಿಪಿ ಮಾಡೆಲ್ ನಲ್ಲಿ ಸಿನೆಮಾ ‌ನಗರಿ ಬೇಗ ಮಾಡುತ್ತೇವೆ. ಹೈದರಾಬಾದ್ ನಲ್ಲಿ ಇರುವಂತೆ ಸಿನಿಮಾ ನಗರಿ ಮೈಸೂರು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌