ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಆಧರಿಸಿ ವಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದಲ್ಲಿ 8 ಹಾಟ್ ಸ್ಪಾಟ್, 11 ಆರೆಂಜ್ ಜೋನ್ ಮತ್ತು 11 ಗ್ರೀನ್ ಸ್ಪಾಟ್ ಜಿಲ್ಲೆಗಳು ಇವೆ. ಹಾಗಾದ್ರೆ, ಯಾವ ಜಿಲ್ಲೆ ಯಾವ ಜೋನ್‌ನಲ್ಲಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಏ.15): ಕೇಂದ್ರ ಆರೋಗ್ಯ ಇಲಾಖೆ ಕೊರೋನಾ ಸೋಂಕಿತ ಪ್ರದೇಶಗನ್ನು ಮೂರು ವಲಯಗಳಾಗಿ ಪಟ್ಟಿ ಮಾಡಿದ್ದು, ದೇಶಾದ್ಯಂತ 170 ಹಾಟ್ ಸ್ಪಾಟ್ ಜಿಲ್ಲೆಗಳನ್ನಾಗಿ ಗುರುತಿಸಿದೆ. ಈ ಪಟ್ಟಿಯಲ್ಲಿ ರಾಜ್ಯದ 8 ಜಿಲ್ಲೆಗಳು ಇರುವುದು ಆಘಾತಕಾರಿ ಸಂಗತಿ.
ಆರೋಗ್ಯ ಇಲಾಖೆ ದೇಶದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಆಧರಿಸಿ ವಲಯಗಳ ಪಟ್ಟಿ ಬಿಡುಗಡೆ ಮಾಡಿದೆ. ಸೋಂಕು ಇರುವ ಮತ್ತು ಇಲ್ಲದಿರುವ ಜಿಲ್ಲೆಗಳನ್ನ ಒಟ್ಟು 3 ವಲಯಗಳಾಗಿ ವಿಂಗಡಿಸಿದೆ. ಇದರಲ್ಲಿ ಒಂದು ಹಾಟ್‌ಸ್ಪಾಟ್, ಎರಡನೆಯದ್ದು ನಾನ್ ಹಾಟ್‌ಸ್ಪಾಟ್ ಜಿಲ್ಲೆಗಳು ಮತ್ತು ಮೂರನೆಯದ್ದು ಹಸಿರು ವಲಯದ ಜಿಲ್ಲೆಗಳಾಗಿ ವಿಭಜಿಸಲಾಗಿದೆ.
ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳು ಹಾಟ್‌ಸ್ಪಾಟ್ (ರೆಡ್ ಜೋನ್), ನಾನ್ ಹಾಟ್‌ಸ್ಪಾಟ್ (ಆರೇಂಜ್ ಜೋನ್) ಹಾಗೂ ಹಸಿರುವ ವಲಯ (ಗ್ರೀನ್ ಜೋನ್) ಎನ್ನುವುದನ್ನು ನೋಡುವುದಾದರೇ ರಾಜ್ಯದ 8 ಜಿಲ್ಲೆಗಳು ಕೊರೋನಾ ರೆಡ್ ಜೋನ್‌ನಲ್ಲಿದ್ರೆ, 11 ಜಿಲ್ಲೆಗಳು ಆರೇಂಜ್ ಜೋನ್‌ನಲ್ಲಿವೆ. ಇನ್ನು ಯಾವುದೇ ಕೊರೋನಾ ಕಾಟವಿಲ್ಲದೇ ಸೇಫ್ ಆಗಿರುವ 11 ಜಿಲ್ಲೆಗಳು ಗ್ರೀನ್ ಜೋನ್‌ನಲ್ಲಿವೆ.
"
ಹಾಟ್‌ಸ್ಪಾಟ್ ಜಿಲ್ಲೆಗಳು (ರೆಡ್ ಜೋನ್) ಎಂದರೇನು? ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿರುವ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳು ದಟ್ಟವಾಗಿರುವ ಜಿಲ್ಲೆಗಳನ್ನ ಹಾಟ್‌ಸ್ಪಾಟ್ ಜಿಲ್ಲೆಗಳು ಅಂತ ಪರಿಗಣಿಸಲಾಗಿದೆ. ಹಾಟ್ಸ್ಪಾಟ್ನಲ್ಲಿ ಒಟ್ಟು 170 ಜಿಲ್ಲೆಗಳಿವೆ. ಇಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ಲಸ್ಟರ್ ಲಾಕ್ಡೌನ್ ಮಾದರಿ ಸೇರಿದಂತೆ ಎಲ್ಲಾ ಅಗತ್ಯ ಕಠಿಣ ಕ್ರಮಗಳನ್ನೂ ಕೈಗೊಳ್ಳಲಾಗುತ್ತೆ.
ಆರೇಂಜ್ ಜೋನ್ ಜಿಲ್ಲೆಗಳು (ನಾನ್ ಹಾಟ್‌ಸ್ಪಾಟ್) ಎಂದರೇನು..? ಸದ್ಯ ಕೊರೊನಾ ಸೋಂಕು ದೃಢಪಟ್ಟಿರುವ ಪ್ರಕರಣಗಳಿದ್ದು, ಕೆಲ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ ಅಂದರೆ ಈ ಜಿಲ್ಲೆಗಳನ್ನ ನಾನ್ ಹಾಟ್‌ಸ್ಪಾಟ್ ಜಿಲ್ಲೆಗಳು ಅಂತ ಪರಿಗಣಿಸಲಾಗಿದೆ. ಇಲ್ಲೂ ಸಹ ನಿರ್ಬಂಧಗಳು ಇರುತ್ತದೆ, ಆದರೆ ಒಂದಷ್ಟು ವಿನಾಯಿತಿಯೂ ಇರುತ್ತೆ. ದೇಶದ ಒಟ್ಟು 207 ಜಿಲ್ಲೆಗಳು ನಾನ್ ಹಾಟ್ಸ್ಪಾಟ್ನಲ್ಲಿ ಬರುತ್ತವೆ.
ಹಸಿರು ವಲಯಗಳು ಎಂದರೇನು..? ಇಲ್ಲಿವರೆಗೂ ಒಂದೂ ಕೊರೊನಾ ಪ್ರಕರಣಗಳು ಪತ್ತೆಯಾಗದೇ ಇರುವ ಜಿಲ್ಲೆಗಳನ್ನ ಹಸಿರು ವಲಯದಲ್ಲಿರುವ ಜಿಲ್ಲೆಗಳು ಅಂತ ಪರಿಗಣಿಸಲಾಗಿದೆ. ಈ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತದೆ. ಆದ್ರೆ, ಆಯಾ ರಾಜ್ಯ ಸರ್ಕಾರಗಳು ಯಾವ ರೀತಿಯ ವಿನಾಯಿತಿಯನ್ನ ನೀಡುತ್ತವೆಯೋ ಅವು ಮಾತ್ರ ಇಲ್ಲಿ ಜಾರಿಯಲ್ಲಿ ಇರುತ್ತವೆ. ಹಾಟ್‌ಸ್ಪಾಟ್ ಹಾಗೂ ನಾನ್ ಹಾಟ್‌ಸ್ಪಾಟ್ ಜಿಲ್ಲೆಗಳನ್ನ ಹೊರತುಪಡಿಸಿ ಮಿಕ್ಕೆಲ್ಲಾ ಜಿಲ್ಲೆಗಳೂ ಹಸಿರು ವಲಯದ ಅಡಿಯಲ್ಲಿ ಬರುತ್ತವೆ.
ರಾಜ್ಯದ 8 ಹಾಟ್ ಸ್ಪಾಟ್ ಜಿಲ್ಲೆಗಳು (ರೆಡ್ ಜೋನ್) 1. ಬೆಂಗಳೂರು ನಗರ, 2. ಮೈಸೂರು, 3. ಬೆಳಗಾವಿ, 4. ದಕ್ಷಿಣ ಕನ್ನಡ, 5. ಬೀದರ್, 6. ಕಲಬುರಗಿ, 7. ಬಾಗಲಕೋಟೆ, 8 ಧಾರವಾಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ