ಬೆಂಗಳೂರು, (ಏ.15): ಕೊರೋನಾ ವೈರಸ್ ಬಿಸಿ ರಂಜಾನ್ ಹಬ್ಬಕ್ಕೂ ತಟ್ಟಿದ್ದು, ಮುಸ್ಲಿಂ ಸಮುದಾಯದವರು ಕಡ್ಡಾಯವಾಗಿ ಲಾಕ್ ಡೌನ್ ಪಾಲಿಸುವಂತೆ ಧಾರ್ಮಿಕ ಮುಖಂಡರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನತೆಯಲ್ಲಿ ಧಾರ್ಮಿಕ ಮುಖಂಡರು ಮನವಿ ಮಾಡಿದ್ದು, ಮನೆಯಲ್ಲಿಯೇ ರಂಜಾನ್ ಆಚರಿಸಲು ಹೇಳಿದ್ದಾರೆ.
ACಯಿಂದ ಕೊರೋನಾ ಹರಡದಂತೆ ತಡೆಯಲು ಇದೆ ಮಾರ್ಗ, ಇಲ್ಲಿದೆ ಸಂಶೋಧಕರ ಟಿಪ್ಸ್!
ಕ್ಯಾಲೆಂಡರ್ ಪ್ರಕಾರ ಇದೇ ಏಪ್ರಿಲ್ 23ರಿಂದ ಮೇ 24ರ ವರಗಿನ ಈ ಪವಿತ್ರ ಕಡ್ಡಾಯ ನಮಾಜ್‌ಗಳನ್ನು ಮಸೀದಿಗೆ ಹೋಗದೇ ಮನೆಯಲ್ಲಿಯೇ ಮಾಡಬೇಕು. ಒದರ ಜತೆಗೆ ಕೆಲವು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಮುದಾಯದ ಜನರಲ್ಲಿ ಕೋರಲಾಗಿದೆ.
ಹಿಂದೂಗಳು ಸಹ ಯುಗಾದಿ ಹಬ್ಬವನ್ನು ಆಚರಿಸಲಿಲ್ಲ. ಜಾತ್ರೆ-ಉತ್ಸವಗಳನ್ನು ರದ್ದು ಮಾಡಿದ್ದಾರೆ. ಅದರಂತೆ ಮುಸ್ಲಿಂ ಬಾಂಧವರೂ ಸಹ ಪವಿತ್ರಾ ರಂಜಾನ್ ಹಬ್ಬವನ್ನು ಆಚರಿಸಿ ಆದ್ರೆ ಅದು ಮನೆಗೆ ಸೀಮಿತವಾಗಿರಲಿ.
ಪ್ರಾರ್ಥನೆಗೆಂದು ಮಸೀದಿಗೆ ಬರಬೇಡಿ, ಮನೆಯಲ್ಲಿಯೇ ರಂಜಾನ್ ಆಚರಿಸಿ ಇಫ್ತಾರ್ ಕೂಟ ಆಯೋಜಿಸಿವುದು ಬೇಡ, ಕಡ್ಡಾಯವಾಗಿ ಲಾಕ್ ಡೌನ್ ಪಾಲಿಸಿ , ಮನೆಯಲ್ಲಿಯೇ ಕುಟುಂಬದವರ ಜೊತೆ ರಂಜಾನ್ ಆಚರಿಸಿ ಅಂತೆಲ್ಲಾ ನಿರ್ದೇಶನಗಳನ್ನು ನೀಡಲಾಗಿದೆ.
ನಿರ್ದೇಶನಗಳು
* ಅನವಶ್ಯಕ ವಸ್ತುಗಳ ಖರೀದಿ ವಿಷಯದಲ್ಲಿ ಸರ್ಕಾರ ವಿಧಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು,
* ಮನೆಗಳಲ್ಲಾಗಲಿ ಬೇರೆಲ್ಲೇ ಆಗಲಿ ಖತಮ್ ಎ ಕುರ್‌ಆನ್ ಮಾಡುವ ಕಾರ್ಯಕ್ರವನ್ನು ಏರ್ಪಡಿಸಬಾರದು.
* ಇಫ್ತಾರ್ ಕೂಟ ಏರ್ಪಡಿಸಬಾರದು.
* ಪ್ರಾರ್ಥನೆಗೆಂದು ಮಸೀದಿಗೆ ಬರಬೇಡಿ
* ನಮಾಜ್‌ಗಳನ್ನು ಮಸೀದಿಗೆ ಹೋಗದೇ ಮನೆಯಲ್ಲಿಯೇ ಮಾಡಬೇಕು.
* ಸಮಾಜದ ಬಡವರು, ನಿರ್ಗತಿಕರ ಬಗ್ಗೆ ಗಮನವಿರಲಿ. ಸಾಧ್ಯವಾದಷ್ಟು ನೆರವು ನೀಡಬೇಕು.
* ಮಾನವ ಸಮಾಜದ ಹಿತಕ್ಕಾಗಿ ಪ್ರಾರ್ಥೆಗಳನ್ನು ಸಲ್ಲಿಸಿ.
* ಅಪ್ರಬುದ್ಧ ಮಕ್ಕಳು ಅನುಚಿತ ಚುಟುವಟಿಕೆಗಳಲ್ಲಿ ಭಾಗವಹಿಸದಂತೆ ಪೋಷರು ಎಚ್ಚರ ವಹಿಸಬೇಕು.
* ಹದಿಹರೆಯದ ಯುವಕರು ಬೈಕುಗಳಲ್ಲಿ ತಿರುಗಾಡುವುದರಿಂದ ದೂರವಿರಬೇಕು.
* ತರಾವೀಹ್ ನಮಾಜ್ ಕೂಡ ಮನೆಯೊಳಗೇ ಸಲ್ಲಿಸಬೇಕು. ನಮಾಜ್‌ಗಾಗಿ ನೆರೆಹೊರೆಯವರನ್ನು ಮನೆಯಲ್ಲಿ ಸೇರಿಸಿಕೊಳ್ಳಬಾರದು.
* ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ತಿರುಗಾಡಬಾರದ. ಜನರನ್ನು ಬೆಳಗ್ಗೆ ಎಬ್ಬಿಸಲು ಧ್ವನಿವರ್ಧಕಗಳನ್ನು ಬಳಸಬಾರದು.