ಕರ್ನಾಟಕದಲ್ಲಿ ಸೋಮವಾರದವರೆಗೂ ಭಾರೀ ಮಳೆ..!

By Kannadaprabha NewsFirst Published Oct 2, 2022, 1:30 AM IST
Highlights

ಭಾನುವಾರ ಬೆಳಗ್ಗೆ 8.30ರ ತನಕ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ.

ಬೆಂಗಳೂರು(ಅ.02): ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದು, ಸೋಮವಾರದವರೆಗೆ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಭಾನುವಾರ ಬೆಳಗ್ಗೆ 8.30ರ ತನಕ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಆ ಬಳಿಕ ಸೋಮವಾರ ಬೆಳಗ್ಗೆ 8.30ರ ತನಕ ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗುಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಉಳಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

Chitradurga: ಅಕಾಲಿಕ ಮಳೆಗೆ ಸುಮಾರು 71153 ಹೆಕ್ಟೇರ್ ಬೆಳೆ ನಾಶ: ಕಂಗಾಲಾದ ಅನ್ನದಾತ

ರಾಜ್ಯದ ಒಳನಾಡಿನಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ಮುಂಗಾರು ಚುರುಕಾಗಿತ್ತು. ಕರಾವಳಿ ಕರ್ನಾಟಕದ ಹಲವೆಡೆ ಮಳೆಯಾಗಿದೆ. ಗದಗದ ಶಿರಹಟ್ಟಿಯಲ್ಲಿ 10 ಸೆಂ.ಮೀ, ಬಳ್ಳಾರಿಯ ಕಂಪ್ಲಿ 6, ಗದಗದ ಶಿರಾಲಿ, ಲಕ್ಷ್ಮೇಶ್ವರ, ರಾಯಚೂರು, ಮಸ್ಕಿಯಲ್ಲಿ ತಲಾ 5, ದಕ್ಷಿಣ ಕನ್ನಡದ ಪಣಂಬೂರು, ಸುಬ್ರಹ್ಮಣ್ಯ, ಉತ್ತರಕನ್ನಡದ ಮಂಕಿ, ಹೊನ್ನಾವರ, ಹಳಿಯಾಳ, ಬೆಳಗಾವಿಯ ಬೈಲಹೊಂಗಲ, ಧಾರವಾಡದ ಕುಂದಗೋಳ, ಹಾವೇರಿಯ ಶಿಗ್ಗಾಂವ್‌, ದಾವಣಗೆರೆಯ ಹರಪ್ಪನಹಳ್ಳಿ, ತುಮಕೂರಿನ ಹೆಬ್ಬೂರಿನಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.
 

click me!