Karnataka| ರಾಜ್ಯದ ಹಲವೆಡೆ ಇನ್ನೂ ಎರಡು ದಿನ ಭಾರೀ ಮಳೆ

By Kannadaprabha News  |  First Published Nov 14, 2021, 6:16 AM IST

*  ಕರಾವಳಿ, ದಕ್ಷಿಣ ಒಳನಾಡಿನಲ್ಲಿ  ಮಳೆಯಹಬ್ಬರ
*  ನವೆಂಬರ್‌ 17ರ ಬಳಿಕ ಮಳೆ ಕಡಿಮೆ ಆಗುವ ನಿರೀಕ್ಷೆ
*  ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ 4 ಸೆಂ.ಮೀ. ಮಳೆ
 


ಬೆಂಗಳೂರು(ನ.14):  ರಾಜ್ಯದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನವೆಂಬರ್‌ 16ರವರೆಗೂ ಮಳೆಯ ಅಬ್ಬರ ಇರಲಿದೆ. ಹವಾಮಾನ ಇಲಾಖೆಯ(Department of Meteorology) ಸದ್ಯದ ಮಾಹಿತಿಯ ಪ್ರಕಾರ ನವೆಂಬರ್‌ 17ರ ಬಳಿಕ ಮಳೆ ಕಡಿಮೆ ಆಗುವ ನಿರೀಕ್ಷೆಯಿದೆ. 

ತಮಿಳುನಾಡಿನ(Tamil Nadu) ಚೆನ್ನೈ9Chennai) ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಗೆ(Rain) ಕಾರಣವಾಗಿದ್ದ ವಾಯುಭಾರ ಕುಸಿತ ದುರ್ಬಲಗೊಂಡಿದೆ. ಆದರೆ ಮೇಲ್ಮೈ ಸುಳಿಗಾಳಿ ಮತ್ತು ಆಂಧ್ರಪ್ರದೇಶ(Andhra Pradesh), ಒಡಿಶಾ ಮೂಲಕ ಪಶ್ಚಿಮ ಬಂಗಾಳದ ತನಕ ಹಾದುಹೋಗಿರುವ ಟ್ರಫ್‌ ಹಾಗು ಆಗ್ನೇಯ ಅರಬ್ಬಿ ಸಮುದ್ರದಲ್ಲಿನ(Arabian Sea) ಮೇಲ್ಮೈ ಸುಳಿಗಾಳಿಯ ಪ್ರಭಾವ ರಾಜ್ಯದ(Karnataka)  ಮೇಲೆ ನವೆಂಬರ್‌ 16ರವರೆಗೆ ಉಂಟಾಗಲಿದೆ. ಭಾನುವಾರ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ಗಾಳಿ, ಸಿಡಿಲು, ಮಿಂಚು ಸಹಿತ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ‘ಯೆಲ್ಲೊ ಅಲರ್ಟ್‌’(Yellow Alert) ಎಚ್ಚರಿಕೆ ನೀಡಲಾಗಿದೆ.

Latest Videos

undefined

ನವೆಂಬರ್‌ 15ಕ್ಕೆ ಚಾಮರಾಜನಗರವನ್ನು ಹೊರತುಪಡಿಸಿ ಈ ಎಲ್ಲ ಜಿಲ್ಲೆಗಳೊಂದಿಗೆ ಚಿಕ್ಕಮಗಳೂರು ಮತ್ತು ಶಿವಮೊಗ್ಗಕ್ಕೂ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ನವೆಂಬರ್‌ 16ಕ್ಕೆ ಕರಾವಳಿಯಲ್ಲಿ ಮಳೆ ಕಡಿಮೆ ಆಗಲಿದೆ. ಆದರೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಪ್ರಕಟಿಸಲಾಗಿದೆ. ನವೆಂಬರ್‌ 17ಕ್ಕೆ ರಾಜ್ಯಾದ್ಯಂತ ಮಳೆಯ ಅಬ್ಬರ ಕಡಿಮೆ ಆಗುವ ನಿರೀಕ್ಷೆಯಿದೆ. ಆದರೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ.

ಜಿಟಿಜಿಟಿ ಮಳೆ, ಮೈ ನಡುಗಿಸುವ ಚಳಿ, ಬೆಚ್ಚನೆ ಮಲಗಿದೆ ಸಿಲಿಕಾನ್ ಸಿಟಿ!

ಚಿಕ್ಕಬಳ್ಳಾಪುರದಲ್ಲಿ ಗರಿಷ್ಠ 4 ಸೆಂ.ಮೀ. ಮಳೆ:

ಶನಿವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ 24 ಗಂಟೆ ಅವಧಿಯಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಕಡೆ ಮಳೆಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 4 ಸೆಂ.ಮೀ, ತುಮಕೂರಿನಲ್ಲಿ 3 ಸೆಂ.ಮೀ , ಮೈಸೂರು, ಗೌರಿಬಿದನೂರಿನಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಬೆಂಳೂರಲ್ಲಿ ಮತ್ತೆ ಮುಂದುವರಿದ ಮಳೆಯ ಆರ್ಭಟ, ಚಳಿ

ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಶನಿವಾರ 9 ಗಂಟೆಯ ಬಳಿಕ ಮತ್ತೆ ತನ್ನ ಅಬ್ಬರ ಪ್ರದರ್ಶಿಸಿತು. ಶನಿವಾರ ಬೆಳಗ್ಗೆಯಿಂದ ಕಡಿಮೆಯಾಗಿದ್ದ ಮಳೆ ರಾತ್ರಿಯ ಹೊತ್ತಿಗೆ ಭರ್ಜರಿಯಾಗಿ ಸುರಿಯಿತು.
ಬುಧವಾರದಿಂದ ಶುಕ್ರವಾರ ರಾತ್ರಿ ತನಕ ನಿರಂತರವಾಗಿ ಸೋನೆ ಮಳೆ ಸುರಿದಿತ್ತು. ಶನಿವಾರ ಹಗಲು ಆಗಾಗ ತುಂತುರು ಮಳೆ ಅಥವಾ ಒಂದೆರಡು ಹನಿ ಮಳೆಗೆ ಸೀಮಿತವಾಗಿತ್ತು. ಮಳೆ ಮಾಯವಾಗಿದ್ದು, ಮೋಡದ ದಟ್ಟಣೆ ಕಡಿಮೆ ಆಗಿ ಸೂರ್ಯನೂ ಆಗಾಗ ದರ್ಶನ ಕೊಡುತ್ತಿದ್ದ. ಹೀಗಾಗಿ ಚಳಿಯ ತೀಕ್ಷ್ಣತೆ ಗಮನಾರ್ಹವಾಗಿ ಕಡಿಮೆ ಆಗಿತ್ತು.

ಆದರೆ ರಾತ್ರಿ 9 ರ ಬಳಿಕ ಜೋರಾಗಿ ಮಳೆ ಸುರಿದಿದೆ. ಮಲ್ಲೇಶ್ವರ, ಶೇಷಾದ್ರಿಪುರ, ರಾಜಾಜಿನನರ, ಮೆಜೆಸ್ಟಿಕ್‌, ಶಿವಾಜಿನಗರ, ವಿಜಯನಗರ ಪರಿಸರದಲ್ಲಿ ಮಳೆ ಸುರಿದಿದೆ. ರಾತ್ರಿ 10-30ರ ಹೊತ್ತಿಗೆ ದೊಡ್ಡಬೊಮ್ಮಸಂದ್ರದಲ್ಲಿ 2.85 ಸೆಂ.ಮೀ., ಶೆಟ್ಟಿಹಳ್ಳಿ 2.25 ಸೆಂ.ಮೀ., ಆರ್‌ಆರ್‌ ನಗರದ ಎಚ್‌ಎಂಟಿ ವಾರ್ಡ್‌ 2.2 ಸೆಂ.ಮೀ., ನಾಗಪುರ 1.65 ಸೆಂ.ಮೀ., ಹೆಗ್ಗನಹಳ್ಳಿ 1.5 ಸೆಂ.ಮೀ, ಬಾಗಲಕುಂಟೆ 1.2 ಸೆಂ.ಮೀ ಮಳೆ ಸುರಿದಿದೆ. ಭಾನುವಾರವೂ ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಮಳೆಯ ಸಾಧ್ಯತೆಯಿದೆ.

ಬೆಂಗ್ಳೂರಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಸುಕಿದ ವಾತಾವರಣ

ನಗರದಲ್ಲಿ ಒಂದೆಡೆ ಜಿಟಿಜಿಟಿ ಮಳೆ, ಇನ್ನೊಂದೆಡೆ ಮೈ ನಡುಗುವ ಚಳಿಯ ವಾತಾವರಣ ಕಂಡು ಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ಬಿಸಿಲಿನ ದರ್ಶನವೇ ಆಗಿಲ್ಲ. ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಚಳಿ ಶಾಲಾ, ಕಾಲೇಜು, ಕಚೇರಿಗೆ ತೆರಳಲು ನಿರುತ್ತಸಾಹ ಕಂಡು ಬಂದಿತು. 

ಚಳಿಯಿಂದ ಪಾರಾಗಲು ಜನರು ಸ್ವೇಟರ್‌, ಬೆಚ್ಚನೆಯ ಬಟ್ಟೆಧರಿಸುವುದರ ಜೊತೆ ಜೊತೆಗೆ ಬಿಸಿಬಿಸಿ ಕಾಫಿ, ಚಹಾ ಮತ್ತು ಕುರುಕಲು ತಿಂಡಿಯ ಮೊರೆ ಹೋದರು. ಜನರ ಓಡಾಟ ಸಹ ಗಣನೀಯವಾಗಿ ಕಡಿಮೆಯಾಗಿತ್ತು. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು(Bengaluru) ನಗರದ ಮಾಪಕದಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ನಗರದಲ್ಲಿ ಇದೇ ರೀತಿಯ ಮಳೆ, ಚಳಿ, ಮೋಡ ಮತ್ತು ಮಂಜು ಕವಿದ ವಾತಾವರಣ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
 

click me!