ರಾಜ್ಯದಲ್ಲಿ ಮುಂಗಾರು ಮಳೆ ಆಗಮನದ ಮೊದಲೇ ಅಬ್ಬರ ಹೆಚ್ಚಾಗಿದ್ದು, ಮಂಗಳವಾರ ಸಂಜೆ ಸುರಿದ ಮಳೆಗೆ ಅಥಣಿಯಲ್ಲಿ ಸಿಡಿಲು ಹೊಡೆದು ಇಬ್ಬರು ಅಸುನೀಗಿದ ಘಟನೆ ನಡೆದಿದೆ.
ಬೆಳಗಾವಿ (ಮೇ.31) : ರಾಜ್ಯದಲ್ಲಿ ಮುಂಗಾರು ಮಳೆ ಆಗಮನದ ಮೊದಲೇ ಅಬ್ಬರ ಹೆಚ್ಚಾಗಿದ್ದು, ಮಂಗಳವಾರ ಸಂಜೆ ಸುರಿದ ಮಳೆಗೆ ಅಥಣಿಯಲ್ಲಿ ಸಿಡಿಲು ಹೊಡೆದು ಇಬ್ಬರು ಅಸುನೀಗಿದ ಘಟನೆ ನಡೆದಿದೆ.
ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಅಮೂಲ… ಜಯಸಿಂಗ ಕಾನಡೆ (24) ಹಾಗೂ ದೇಸಾರಹಟ್ಟಿಗ್ರಾಮದಲ್ಲಿ ವಿಠ್ಠಬಾಯಿ ಮಹದೇವ ಕಾಮಕರ (50) ಮೃತ ದುರ್ದೈವಿಗಳು. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ತಗಡಿನ ಶೀಟ್‌ಗಳು ಕಿತ್ತು ಬಿದ್ದಿವೆ. ಅದೂ ಹೊಸದಾಗಿ ನಿರ್ಮಿಸುತ್ತಿರುವ ವಿದ್ಯುತ್ ಲೈನ್ ಮೇಲೆಯೇ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಮನೆ ಗೋಡೆ ಬಿದ್ದು ವೃದ್ಧೆಗೆ ಗಾಯ:
ಕಬ್ಬೂರ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಭಾರೀ ಮಳೆ ಗಾಳಿಗೆ ಮನೆ ಗೋಡೆಗಳು ಕುಸಿದಿವೆ, ಮರಗಳೂ ಉರುಳಿ ಬಿದ್ದು ಹಾನಿಯಾಗಿದೆ. ಪಟ್ಟಣದ ಹೊರವಲಯದ ಶರಣಿಕ ಎಂಬ ರೈತರ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತೋಟದ ಮನೆಗಳ ತಗಡು, ದನ-ಕರುಗಳ ಮನೆಗಳಿಗೆ ಹಾಕಲಾಗಿದ್ದ ಶೆಡ್ ಹಾರಿ ಹೋಗಿವೆ. ಸಂಜೆ ಇದ್ದಕ್ಕಿದ್ದಂತೆ ಭಾರಿ ಗಾಳಿ ಜನರಲ್ಲಿ ಆತಂಕ ಮೂಡಿಸಿತು. ಜನರು ಹೊರಗಡೆ ಬರಲು ಭಯಪಡುವಂತಾಯಿತು. ಹಲವು ಕಡೆ ವಿದ್ಯುತ್ ಕಂಬ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿದೆ.
ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ಹಾರಿ ಬಿದ್ದ ಶೀಟ್:
ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಇಲ್ಲಿಯ ಹಳೇ ರೈಲು ನಿಲ್ದಾಣದ ಕಟ್ಟಡ ಮೇಲೆ ಹಾಕಲಾಗಿದ್ದ ಬೃಹತ್ ತಗಡಿನ ಶೀಟ್‌ಗಳು ಕಿತ್ತು ಬಿದ್ದಿದ್ದು, ದೊಡ್ಡ ಅನಾಹುತ ತಪ್ಪಿದೆ.
ಘಟಪ್ರಭಾ ರೈಲು ನಿಲ್ದಾಣಕ್ಕೆ ನೂತನ ಕಟ್ಟಡ ನಿುರ್‍ಸಲಾಗಿದ್ದು, ಸೋರುತ್ತಿರುವ ಹಳೆಯ ಕಟ್ಟಡದ ಹಂಚಿನ ಮೇಲೆ ತಾತ್ಕಾಲಿಕವಾಗಿ ತಗಡಿನ ಶೀಟ್ ಹಾಕಲಾಗಿತ್ತು. ಆದರೆ ಸದರಿ ತಗಡಿಗೆ ಯಾವುದೇ ಸುರಕ್ಷತೆ ಕ್ರಮ ಕೈಗೊಳ್ಳದೇ ನಾಮಕೆ ವಾಸ್ತೆ ಎಂಬಂತೆ ತಗಡುಗಳನ್ನು ಹಾಕಿ ಕಳಪೆ ಕಾಮಗಾರಿ ಮಾಡಲಾಗಿದೆ.
ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಹಂಚಿನ ಮೇಲೆ ಹಾಕಲಾದ ಪತ್ರಾಸಗಳು ಕಿತ್ತು ಹೋಗಿದ್ದು, ಹೊಸದಾಗಿ ನಿರ್ಮಿಸುತ್ತಿರುವ ವಿದ್ಯುತ್ ಲೈನ್ ಮೇಲೆ ಬಿದ್ದಿವೆ. ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವ ರೈಲು ನಿಲ್ದಾಣದಲ್ಲಿ ಆಗುವ ದೊಡ್ಡ ಅನಾಹುತ ತಪ್ಪಿದೆ. ರೈಲು ನಿಲ್ದಾಣ ಪಕ್ಕದಲ್ಲಿ ಮುಖ್ಯ ಮಾರ್ಕೇಟ್ ಇದ್ದು, ಈ ಪತ್ರಾಸಗಳು ಹಾರಿ ಹೊರಗೆ ಬಂದಿದ್ದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು.
ರೈಲು ನಿಲ್ದಾಣ ಹಳೆಯ ಕಟ್ಟಡದ ಮೇಲೆ ಮಾಡಲಾದ ಕಾಮಗಾರಿಗಳು ತೀರಾ ಕಳಪೆ ಮಟ್ಟದಾಗಿದ್ದು, ಯಾವುದೇ ಭದ್ರತೆ ಇಲ್ಲದೆ ಕಾಮಗಾರಿಗಳನ್ನು ನಾಮಕೆ ವಾಸ್ತೆ ಮಾಡಲಾಗಿದೆ ಎಂದು ಸಾರ್ವಜನಿಕರ ಹಾಗೂ ಪ್ರಯಾಣಿಕರ ಆರೋಪವಾಗಿದೆ. ಘಟನೆ ಕುರಿತು ಘಟಪ್ರಭಾ ರೈಲ್ವೆ ಸ್ಟಷನ್ ಮಾಸ್ಟರ್ ಅವರಿಗೆ ವಿಚಾರಿಸಿದರೆ. ಸದರಿ ಕಾಮಗಾರಿ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕಾಗಿ ನಮ್ಮ ಇಲಾಖೆಯಲ್ಲಿ ಎಸ್‌ಎಸ್‌ಐ ಎಂದು ಬೇರೆ ವಿಭಾಗವಿದೆ. ಇದು ಅವರಿಗೆ ಸಂಬಂಧಿಸಿದ್ದು ಎಂದು ಹೇಳಿ ಜಾರಿಕೊಂಡರು.
9 ಜಿಲ್ಲೆಗಳಲ್ಲಿಯೆಲ್ಲೋ ಅಲರ್ಟ್!9 ಜಿಲ್ಲೆಗಳಲ್ಲಿಯೆಲ್ಲೋ ಅಲರ್ಟ್!
ಮುಂದಿನ 48 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 9 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಚ್’ ಎಚ್ಚರಿಕೆ ನೀಡಲಾಗಿದೆ. ಸದ್ಯ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರದಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಲಕ್ಷಣವಿದ್ದು, ‘ಯೆಲ್ಲೋ ಅಲರ್ಚ್’ ಎಚ್ಚರಿಕೆ ಘೋಷಿಸಲಾಗಿದೆ.
ಜೂ.2 ರಿಂದ ಮಳೆ ಕ್ಷೀಣ:
ಜೂನ್ 1ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಇರಲಿದೆ. ಜೂ.2 ರ ನಂತರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಜೂ.4ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, ಹಾವೇರಿಯ ಹಿರೇಕೆರೂರು. ವಿಜಯನಗರದ ಹಡಗಲಿಯಲ್ಲಿ ತಲಾ 8 ಸೆಂ.ಮೀ ಮಳೆಯಾಗಿದೆ. ಕೊಪ್ಪಳದ ಯಲಬುರ್ಗಾ ಹಾಗೂ ಹಾಸನದಲ್ಲಿ 7, ವಿಜಯನಗರದ ಹರಪನಹಳ್ಳಿಯಲ್ಲಿ 6, ಕುಷ್ಟಗಿ, ಹಗರಿಬೊಮ್ಮನಹಳ್ಳಿ ಹಾಗೂ ಶಿವಮೊಗ್ಗದ ತ್ಯಾಗರ್ತಿಯಲ್ಲಿ ತಲಾ 5 ಸೆಂ.ಮೀ ಮಳೆಯಾದ ವರದಿಯಾಗಿದೆ. ಕಲಬುರಗಿಯಲ್ಲಿ 41.5 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೋಡ ಕವಿದ ವಾತಾವರಣ:
ಮಂಗಳವಾರ ಬೆಂಗಳೂರು ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾದ ವರದಿಯಾಗಿದೆ.

Chikkamagaluru rains: ವರುಣನ ರುದ್ರ ನರ್ತನಕ್ಕೆ ನಲುಗಿದ ಕಾಫಿನಾಡು: ಅಪಾರ ಬೆಳೆ ನಷ್ಟ!
ಮೋಡ ಕವಿದ ವಾತಾವರಣ:
ಮಂಗಳವಾರ ಬೆಂಗಳೂರು ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾದ ವರದಿಯಾಗಿದೆ.