ಕರ್ನಾಟಕದಲ್ಲಿ ಬೇಸಿಗೆ ಮಳೆಯಬ್ಬರ: ಸಿಡಿಲು ಬಡಿದು ರೈತರಿಬ್ಬರು ಸಾವು

Published : Apr 15, 2022, 07:43 AM IST
ಕರ್ನಾಟಕದಲ್ಲಿ ಬೇಸಿಗೆ ಮಳೆಯಬ್ಬರ: ಸಿಡಿಲು ಬಡಿದು ರೈತರಿಬ್ಬರು ಸಾವು

ಸಾರಾಂಶ

*  ಉತ್ತರಹಳ್ಳಿ ವಾಟರ್‌ ಸಪ್ಲೈ ಬಡಾವಣೆಯ ಮನೆಗಳಿಗೆ ಮಳೆ ನೀರು *  ಹಲವೆಡೆ ಬಿದ್ದ ಮರ, ಮುರಿದ ಕೊಂಬೆಗಳು *  ವಿದ್ಯಾಪೀಠದಲ್ಲಿ ಅತ್ಯಧಿಕ 7.3 ಸೆಂ.ಮೀ. ಮಳೆ  

ಬೆಂಗಳೂರು(ಏ.14):  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ(Karnataka) ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಮಳೆಯ(Rain) ಅಬ್ಬರ ಮುಂದುವರೆದಿದ್ದು, ಬೆಳಗಾವಿ ಮತ್ತು ವಿಜಯಪುರದಲ್ಲಿ ಸಿಡಿಲು ಬಡಿದು ರೈತರಿಬ್ಬರು(Farmers) ಮೃತಪಟ್ಟಿದ್ದಾರೆ(Death). ಬೆಳಗಾವಿ ಜಿಲ್ಲೆಯ ತುಮ್ಮರಗುದ್ದಿ ಗ್ರಾಮದ ಭೀಮಪ್ಪ ಅಡಿವೆಪ್ಪ ಬಸರಿಮರದ(25) ಎಮ್ಮೆ ಮೇಯಿಸಲು ಹೋದಾಗ ಸಿಡಿಲು(Lightning Strikes) ಬಡಿದು ಅಸುನೀಗಿದ್ದರೆ, ಈತನ ತೆಗೆದುಕೊಂಡು ಹೋಗಿದ್ದ ಎಮ್ಮೆ ಕೂಡ ಸಿಡಿಲಿಗೆ ಬಲಿಯಾಗಿದೆ. 

ವಿಜಯಪುರ(Vijayapura) ತಾಲೂಕಿನ ಮದಭಾವಿ ಗ್ರಾಮದಲ್ಲಿ ಜಮೀನಿನಿಂದ ವಾಪಸ್‌ ಮನೆಗೆ ಬರುವಾಗ ಸಿಡಿಲು ಬಡಿದು ಮರೆಮಸಾಬ ಸಾಹೇಬಲಾಲ ಜಾತಗಾರ(42) ಸಿಡಿಲಿಗೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಂಡ್ಯ ಹುಬ್ಬಳ್ಳಿಯಲ್ಲೂ ಭರ್ಜರಿ ಮಳೆಯಾಗಿದೆ. ನವಲಗುಂದದಲ್ಲಿ ಆಲಿಕಲ್ಲು ಮಳೆ ಸುರಿದಿದೆ.

ಅನ್ನದಾತರು, ಜನರಿಗೆ ಸಂತಸದ ಸುದ್ದಿ: ಸತತ 4 ವರ್ಷವೂ ಉತ್ತಮ ಮುಂಗಾರು: ಐಎಂಡಿ!

ಮಡಿಕೇರಿ(Madikeri)- ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಸಿಂಕೋನ ಸಮೀಪದಲ್ಲಿ ಮಳೆಯಿಂದಾಗಿ ಪ್ರವಾಸಿಗರ ಮಿನಿ ಬಸ್‌ ಪಲ್ಟಿಯಾಗಿದೆ. ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಮಂಡ್ಯ(Mandya)  ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ಮಳವಳ್ಳಿಯಲ್ಲಿ ಸಿಡಿಲಿಗೆ ಹಸು ಹಾಗೂ ಎಮ್ಮೆ ಕರು ಬಲಿಯಾಗಿದೆ. ಅನೇಕ ಕಡೆ ವಿದ್ಯುತ್‌ ಕಂಬಗಳು, ಮರಗಳು ಧರೆಗುರುಳಿವೆ. ಕೋಲಾರದಲ್ಲೂ ಸಂಜೆ ಬಳಿಕ ಭರ್ಜರಿ ಮಳೆಯಾಗಿದೆ.

ಹುಬ್ಬಳ್ಳಿ(Hubballi)  ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದೆ. ನವಲಗುಂದದಲ್ಲಿ ಆಲಿಕಲ್ಲು ಮಳೆ ಆಗಿದೆ. ಸೂರ್ಯಕಾಂತಿ, ಕುಸುಬಿ ಬೆಳೆದಿದ್ದ ರೈತರು ಮಳೆಯಿಂದ ಕಂಗಾಲಾಗಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆ, ಮಳೆ ಪಾಲಾಗುತ್ತಿದೆ ಎನ್ನುವ ಆತಂಕ ಮನೆ ಮಾಡಿದೆ.

ಧಾರಾಕಾರ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

ಸತತ ಎರಡನೇ ದಿನ ಬೆಂಗಳೂರು(Bengaluru) ನಗರದಲ್ಲಿ ಬಿರುಸಿನ ಬೇಸಿಗೆ ಮಳೆಯಾಗಿದೆ. ರಾತ್ರಿ 7.30ರ ಸುಮಾರಿಗೆ ಪ್ರಾರಂಭಗೊಂಡ ಗುಡುಗು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ಹಲವೆಡೆ ಮರ ಬಿದ್ದ, ಕೊಂಬೆ ಮುರಿದ ಪ್ರಕರಣಗಳು ವರದಿಯಾಗಿದೆ. ಹಲವು ತಗ್ಗು ಪ್ರದೇಶಗಳಲ್ಲಿ ಇರುವ ಬಡಾವಣೆಗಳಲ್ಲಿ ನೀರು ನಿಂತ ದೂರು ದಾಖಲಾಗಿದೆ. ಉತ್ತರಹಳ್ಳಿಯ ಹೇಮಾವತಿ ವಾಟರ್‌ ಸಪ್ಲೈ ಬಡಾವಣೆಯಲ್ಲಿ ನೀರು ನುಗ್ಗಿ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ.

ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದ ಕಾರಣ ನೀರನ್ನು ತಡೆ ಹಿಡಿದಿದ್ದ ಹಿನ್ನೆಲೆಯಲ್ಲಿ ಉತ್ತರಹಳ್ಳಿಯ ಹೇಮಾವತಿ ವಾಟರ್‌ ಸಪ್ಲೈ ನಗರಕ್ಕೆ ನೀರು ನುಗ್ಗಿದ್ದು ಮನೆಯಲ್ಲಿದ್ದ ಸರಕು ಸರಂಜಾಮುಗಳು ನೀರಲ್ಲಿ ಮುಳುಗಿದೆ.
ನಗರದಲ್ಲಿ ಬೆಳಗ್ಗೆಯಿಂದಲೇ ಆಗಾಗ ಮೋಡ ಕವಿದ ವಾತಾವರಣ ಮೂಡುತ್ತಿತ್ತು. ಸಂಜೆ 6ರ ಬಳಿಕ ದಟ್ಟ ಮೋಡಗಳು ಆವರಿಸಲು ಪ್ರಾರಂಭಿಸಿ ತುಂತುರು ಮಳೆ ಸುರಿಯಲು ಪ್ರಾರಂಭಗೊಂಡಿತ್ತು. ಆದರೆ ರಾತ್ರಿ 7.30ರ ಹೊತ್ತಿಗೆ ಭರ್ಜರಿ ಮಳೆಯಾಗಿದೆ. ಮಳೆಗೆ ನಗರದ ಬಸವನಗುಡಿ, ಚಾಮರಾಜಪೇಟೆ, ಬನ್ನೆರುಘಟ್ಟ, ಯಶವಂತಪುರದಲ್ಲಿ ಬೃಹತ್‌ ಗಾತ್ರದ ಮರಗಳು ಉರುಳಿ ಬಿದ್ದಿವೆ. ಉಳಿದಂತೆ ಅನೇಕ ಕಡೆ ಮರದ ಕೊಂಬೆಗಳು ಮುರಿದಿದೆ. ಅಂಡರ್‌ ಪಾಸ್‌ಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಯಿತು.

ರಾಜಾಜಿ ನಗರ, ವಿದ್ಯಾರಣ್ಯಪುರ, ಜಯನಗರ, ಜೆ.ಪಿ.ನಗರ, ಶೇಷಾದ್ರಿಪುರ, ಶಿವಾನಂದ ಸರ್ಕಲ್‌, ಮೆಜೆಸ್ಟಿಕ್‌, ಕೆ.ಆರ್‌.ಸರ್ಕಲ್‌, ಶಿವಾಜಿ ನಗರ, ಎಂ.ಜಿ.ರೋಡ್‌, ಶಾಂತಿ ನಗರ, ಹಲಸೂರು, ಲಕ್ಕಸಂದ್ರ, ಚಾಮರಾಜಪೇಟೆ, ಬಸವನಗುಡಿ, ವಿಜಯ ನಗರ, ಗೋವಿಂದರಾಜ ನಗರ, ಚಂದ್ರಾಲೇ ಔಟ್‌, ಆರ್‌.ಟಿ.ನಗರ, ದೊಮ್ಮಲೂರು, ಆರ್‌.ಆರ್‌.ನಗರ, ಹೆಮ್ಮಿಗೆಪುರ, ಪೀಣ್ಯ, ಯಶವಂತಪುರ, ಉತ್ತರಹಳ್ಳಿ, ಸಂಪಂಗಿ ರಾಮನಗರದಲ್ಲಿ ಮಳೆಯ ಆರ್ಭಟ ಹೆಚ್ಚಿತ್ತು.

ನಗರದ ಪ್ರಮುಖ ರಸ್ತೆಗಳಾದ ಮಾಗಡಿ ರಸ್ತೆ ಕಾಪೋರೇಷನ್‌ ವೃತ್ತ, ಎಂ.ಜಿ.ರಸ್ತೆ, ಕೆ.ಜಿ.ರಸ್ತೆ, ಕ್ವಿನ್ಸ್‌ ರಸ್ತೆ, ಜೆ.ಸಿ.ರೋಡ್‌, ಡಬಲ್‌ ರೋಡ್‌, ಕೆ.ಎಚ್‌.ರೋಡ್‌, ವಿಲ್ಸನ್‌ ಗಾರ್ಡನ್‌ ಮುಖ್ಯರಸ್ತೆ, ರಾಜಕುಮಾರ್‌ ರಸ್ತೆ, ವಿಜಯ ನಗರ ಮುಖ್ಯ ರಸ್ತೆ, ಆನಂದರಾವ್‌ ಸರ್ಕಲ್‌, ಕೆ.ಆರ್‌.ಸರ್ಕಲ್‌, ಶಿವಾನಂದ ಅಂಡರ್‌ಪಾಸ್‌, ಓಕಳಿಪುರಂ ಅಂಡರ್‌ ಪಾಸ್‌, ವಿಂಡ್ಸರ್‌ ಮ್ಯಾನರ್‌ ಅಂಡರ್‌ ಪಾಸ್‌ ಸೇರಿದಂತೆ ಸಂಪರ್ಕ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸಿದರು.

Bengaluru Rain: ರಾಜಧಾನಿಯಲ್ಲಿ ಮಳೆ ಆರ್ಭಟ... ಬಿಸಿಲಿನ ಝಳ ತಣಿಸಲು ಬೇಕಿತ್ತು!

ವಿದ್ಯಾಪೀಠದಲ್ಲಿ ಅತ್ಯಧಿಕ 7.3 ಸೆಂ.ಮೀ. ಮಳೆ

ವಿದ್ಯಾಪೀಠದಲ್ಲಿ ನಗರದಲ್ಲೇ ಅತಿ ಹೆಚ್ಚು 7.3 ಸೆಂ. ಮೀ ಮಳೆಯಾಗಿದೆ. ಸಂಪಂಗಿರಾಮ ನಗರ 4.9 ಸೆಂ.ಮೀ, ವಿ.ವಿ.ಪುರ 4.5 ಸೆಂ.ಮೀ, ಬೊಮ್ಮನಹಳ್ಳಿ 4.2 ಸೆಂ.ಮೀ, ಬೆಳ್ಳಂದೂರು 4 ಸೆಂ.ಮೀ, ಅಂಜನಾಪುರ 3.6 ಸೆಂ.ಮೀ, ಗಾಳಿ ಆಂಜನೇಯ ದೇವಸ್ಥಾನ 3.7 ಸೆಂ.ಮೀ, ಆರ್‌.ಆರ್‌.ನಗರ ಮತ್ತು ಕೋರಮಂಗಲ ತಲಾ 3.4 ಸೆಂ.ಮೀ, ಬಿಇಎಂಎಲ್‌ ಬಡಾವಣೆ 3.1 ಸೆಂ.ಮೀ ಮಳೆಯಾಗಿದೆ.

ಬುಧವಾರ ಮಳೆಯಾದ್ದರಿಂದ 34 ಡಿಗ್ರಿ ಸೆಲ್ಸಿಯಸ್‌ ಮೀರಿದ್ದ ನಗರದ ಗರಿಷ್ಠ ಉಷ್ಣತೆ(Temperature) 31.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಗುರುವಾರ ಮಳೆಯ ಸಾಧ್ಯತೆ ಕಡಿಮೆ ಇದ್ದು ನಗರದ ಗರಿಷ್ಠ ಮತ್ತು ಕನಿಷ್ಠ ಉಷ್ಣತೆ ಕ್ರಮವಾಗಿ 34 ಮತ್ತು 21 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ