ನಾಡಿದ್ದಿಂದ 2 ದಿನ ಉತ್ತರ ಕರ್ನಾಟಕದಲ್ಲಿ ಉಷ್ಣ ಅಲೆ: ಮಾ.20ರಿಂದ 2 ದಿನ ಮಳೆ ಸಂಭವ

ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮಾ.18 ಹಾಗೂ 19ಕ್ಕೆ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ. ಜತೆಗೆ. ಮಾ.20 ರಿಂದ ಎರಡು ದಿನ ರಾಜ್ಯದ ವಿವಿಧ ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 


ಬೆಂಗಳೂರು (ಮಾ.16): ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮಾ.18 ಹಾಗೂ 19ಕ್ಕೆ ಉಷ್ಣ ಅಲೆ ಬೀಸುವ ಸಾಧ್ಯತೆ ಇದೆ. ಜತೆಗೆ. ಮಾ.20 ರಿಂದ ಎರಡು ದಿನ ರಾಜ್ಯದ ವಿವಿಧ ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಉಷ್ಣಾಂಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40 ಡಿ.ಸೆ. ಹಾಗೂ ಬಾಗಲಕೋಟೆಯಲ್ಲಿ 39.5 ಡಿ.ಸೆ. ದಾಖಲಾಗಿದೆ. ಇದರಿಂದ ಉಷ್ಣಅಲೆ ಬೀಸುವ ಸಾಧ್ಯತೆ ಇದೆ.

ಹೀಗಾಗಿ, ಸಾರ್ವಜನಿಕರು ಮಧ್ಯಾಹ್ನ 12 ರಿಂದ 3 ಗಂಟೆ ಅವಧಿಯಲ್ಲಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ, ಹೊರಗೆ ಹೋಗುವಾದ ಛತ್ರಿ, ಟೋಪಿ ಬಳಕೆ ಮಾಡಿ. ಪ್ರಾಣಿಗಳಿಗೆ ನೆರಳು ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಎಂದು ಸಲಹೆ ನೀಡಿದೆ. ಇನ್ನು ರಾಯಚೂರು 38.4, ಬೀದರ್‌ 38.2, ವಿಜಯಪುರ 38, ಗದಗ 37.6, ಬೆಳಗಾವಿ, ಕೊಪ್ಪಳದಲ್ಲಿ ತಲಾ 37, ಧಾರಾವಾಡ 36.7, ಮಂಡ್ಯದಲ್ಲಿ 37, ಚಿತ್ರದುರ್ಗ 36.5, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ 36, ಬೆಂಗಳೂರಿನಲ್ಲಿ 35.4 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ.

Latest Videos

ಮುಸ್ಲಿಂ ಮೀಸಲಾತಿ ಕದನ, ಕಾಂಗ್ರೆಸ್‌ ಸರ್ಕಾರದ ನಡೆ ದೇಶಕ್ಕೇ ಅಪಾಯ: ಬಿಜೆಪಿ

ಮಾ.20 ರಿಂದ ಹಗುರ ಮಳೆ ಸೂಚನೆ: ಮಾ.20 ರಿಂದ ಎರಡು ದಿನ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವಿವಿಧ ಜಿಲ್ಲೆಗಳಾದ ಬೆಂಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಬೀದರ್‌, ಕಲಬುರಗಿ, ರಾಯಚೂರು ಸೇರಿ ಹಲವು ಕಡೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಗೆ ಮುನ್ನೆಚ್ಚರಿಕೆ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ತಾಪದಿಂದ ಇನ್ನೂ ಎರಡು ದಿನ ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಲ್ಲಿ ಉಷ್ಣ ಅಲೆ ಭೀತಿ ಇದ್ದು, ಮುಂದಿನ ಎರಡು ದಿನ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಅತಿ ಹೆಚ್ಚು 38.2 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. 

ಮುಸ್ಲಿಮರಿಗಷ್ಟೇ ಗುತ್ತಿಗೆ ಮೀಸಲಾತಿ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್‌

ಇದು ವಾಡಿಕೆ ಪ್ರಮಾಣಕ್ಕಿಂತ 4.8 ಡಿ.ಸೆ. ಹೆಚ್ಚಾಗಿದೆ. ಹೊನ್ನಾವರದಲ್ಲಿಯೂ 36.6 ಡಿ.ಸೆ. ಗರಿಷ್ಠ ಉಷ್ಣಾಂಶ (ವಾಡಿಕೆಗಿಂತ 3.9 ಹೆಚ್ಚು) ದಾಖಲಾಗಿದೆ. ಮಂಗಳೂರಿನಲ್ಲಿ ಗರಿಷ್ಠ 36.3 ಡಿ.ಸೆ.(ವಾಡಿಕೆಗಿಂತ 2.4 ಹೆಚ್ಚು). ಪಣಂಬೂರಿನಲ್ಲಿ 36.7 ಡಿ.ಸೆ. ಗರಿಷ್ಠ ಉಷ್ಣಾಂಶ (3.4 ಡಿ.ಸೆ ಹೆಚ್ಚು) ದಾಖಲಾಗಿದೆ. ತೀವ್ರ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆ ನಡುವೆ ಬಿಸಿಲಿಗೆ ಹೋಗುವುದು ತಪ್ಪಿಸಬೇಕು. ಹಗುರವಾದ, ತಿಳಿ ಬಣ್ಣದ, ಸಡಿಲವಾದ ಹತ್ತಿಯ ಬಟ್ಟೆ ಧರಿಸಿ, ತಲೆ ಮುಚ್ಚಿಕೊಳ್ಳುವಂತೆ ಟೋಪಿ, ಬಟ್ಟೆ, ಛತ್ರಿ ಬಳಕೆ ಮಾಡುವಂತೆ ಸಲಹೆ ನೀಡಿದೆ. ಉಳಿದಂತೆ ರಾಜ್ಯದಲ್ಲಿ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಾಜ್ಯಾದ್ಯಂತ ಒಣ ಹವೆ ಇರಲಿದೆ ಎಂದು ಇಲಾಖೆ ತಿಳಿಸಿದೆ.

click me!