ಯಡಿಯೂರಪ್ಪ ನಮ್ಮೆಲ್ಲರ ಅಗ್ರಗಣ್ಯ ನಾಯಕ. ಕೋವಿಡ್ ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದರು. ಅವರ ಕೊರೋನಾ ಸೋಂಕಿನಿಂದ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನಾಯಕನಹಟ್ಟಿ(ಆ.04): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಸೋಂಕಿನಿಂದ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ದೇವರಲ್ಲಿ ಹರಕೆ ಸಲ್ಲಿಸಲಾಗುವುದೆಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಾಯಕನಹಟ್ಟಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ನಮ್ಮೆಲ್ಲರ ಅಗ್ರಗಣ್ಯ ನಾಯಕ. ಕೋವಿಡ್ ಸೋಂಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದರು. ಅವರ ಆರೋಗ್ಯ ಉತ್ತಮವಾಗಿದ್ದು ಕೋವಿಡ್ ಸೋಂಕು ಮಾತ್ರ ಕಾಣಿಸಿದೆ. ಶೀಘ್ರ ಗುಣಮುಖರಾಗಲಿದ್ದಾರೆ ಎಂದರು.
ಉಳಿದ ಮೂರು ವರ್ಷಗಳ ಅವಧಿಗೆ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮತ್ರಿಗಳಾಗಿ ಮುಂದುವರಿಯಲಿದ್ದಾರೆ. ಇದರಲ್ಲಿ ಬದಲಾವಣೆ ಪ್ರಶ್ನೆಯೆ ಉದ್ಭವಿಸುವುದಿಲ್ಲ, ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಈ ರೀತಿಯ ಗೊಂದಲಗಳನ್ನು ಉಂಟುಮಾಡುತ್ತಿದ್ದಾರೆ. ಯಾವುದೇ ರಹಸ್ಯಸಭೆ ನಡೆಯುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಯಡಿಯೂರಪ್ಪನವರ ಹೆಲ್ತ್ ಬುಲೆಟಿನ್ ಬಿಡುಗಡೆ....!
ಗ್ರಾಮೀಣ, ನಗರ, ಸೇರಿದಂತೆ ರಾಜ್ಯಾದ್ಯಂತ ರಾರಯಪಿಡ್ ಆಂಟಿಜಿನ್ ಪರೀಕ್ಷೆಗಳನ್ನು ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರು ವಲಯದಲ್ಲಿ ಸಚಿವರು ಹಾಗೂ ಐಎಎಸ್ ಆಫೀಸರ್ ಕೋವಿಡ್ 19 ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಉಳಿದ ಜಿಲ್ಲೆಗಳಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗುವುದು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಕುರಿತು ಅನೇಕ ದೂರುಗಳು ಕೇಳಿಬರುತ್ತಿವೆ. ಕೊವೀಡ್‌ಗೆ ಸಂಬಂಧಿಸಿದಂತೆ ಪೂರಕವಾಗಿ ಸ್ಪಂದನೆ ಮಾಡಿಲ್ಲ ಎನ್ನುವ ಕಾರಣಕ್ಕೆ ರಾಜ್ಯದ 19 ಆಸ್ಪತ್ರೆಗಳ ಪರವಾನಗಿ ರದ್ದುಪಡಿಸಲಾಗಿದೆ. 24 ಜನರಿಂದ ರು.24 ಲಕ್ಷ ವಸೂಲಿ ಮಾಡಿದ್ದಾರೆ. ಆ ಹಣವನ್ನು ಹಿಂದಿರುಗಿಸುವ ಕೆಲಸ ಮಾಡಲಾಗಿದೆ ಎಂದರು.
ಬಿಎಸ್‌ವೈ ಬಳಿಕ ಸಿದ್ದರಾಮಯ್ಯಗೂ ವಕ್ಕರಿಸಿದ ಕೊರೋನಾ!