
ಬೆಂಗಳೂರು(ಏ.07) : ಪತ್ರಕರ್ತರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಹಿರಿಯ ಹಾಗೂ ಜನಪ್ರಿಯ ರಾಮಯ್ಯ ನಿವಾಸ್ಕೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ರಾಮಯ್ಯ ನಿವಾಸಕ್ಕೆ ತೆರಳಿದ ಹೆಚ್‌ಡಿ ಕುಮಾರಸ್ವಾಮಿ, ಕೆಲ ಹೊತ್ತು ಕಳೆದಿದ್ದಾರೆ. ಇಂದು(ಏ.07) ಬೆಳಗ್ಗೆ ರಾಮಯ್ಯ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ೇವಳೆ ಶೀಘ್ರದಲ್ಲೇ ಚೇತರಿಸಕೊಳ್ಳುವಂತೆ ಶುಭ ಹಾರೈಸಿದ್ದಾರೆ.
ರಾಮಯ್ಯ ಆರೋಗ್ಯ ವಿಚಾರಿಸಿ ಕುಮಾರಸ್ವಾಮಿ ಕೆಲ ಹೊತ್ತು ಅವರ ನಿವಾಸದಲ್ಲೆ ಕಳೆದಿದ್ದರೆ. ರಾಮಯ್ಯ ಹಾಗೂ ಕುಟುಂಬ ಸದಸ್ಯರ ಜೊತೆ ಉಪಹಾರ ಸೇವಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು; ಪ್ರಾಮಾಣಿಕ, ಮೌಲ್ಯಾಧಾರಿತ ಮಾಧ್ಯಮದ ಶ್ರೇಷ್ಠ ಕೊಂಡಿಯಾಗಿರುವ ಹಿಂದೂ ರಾಮಯ್ಯನವರು ನಮ್ಮ ತಂದೆಯವರ ವಯಸ್ಸಿನವರು ಮತ್ತು ಅವರ ಸಮಕಾಲೀನರು. ಅವರ ಅನಾರೋಗ್ಯದ ಬಗ್ಗೆ ಮಾಹಿತಿ ಬಂತು. ಅವರ ಕ್ಷೇಮ ವಿಚಾರಿಸಲು ಬಂದೆ. ಅವರು ಆರೋಗ್ಯವಾಗಿರಲಿ, ಶತಾಯುಷಿಯಾಗಿ ಸದಾ ಮಾರ್ಗದಶನ ನೀಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ರೇವಣ್ಣ ನೃತೃತ್ವದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಹಿರಿಯರು ಆಗಿರುವ ರಾಮಯ್ಯ ಅವರು ಪತ್ರಿಕೋದ್ಯಮದ ಮಹಾವೃಕ್ಷ. ಅವರು ನನ್ನ ಗುರು ಸಮಾನರು. ವಿಧಾನ ಪರಿಷತ್ ಮಾಜಿ ಸದಸ್ಯರಾಗಿಯೂ ಅವರು ನಾಡಿಗೆ ಬಹುದೊಡ್ಡ ಸೇವೆ ಮಾಡಿದ್ದಾರೆ. ಅಲ್ಲದೆ, ಮೊದಲಿನಿಂದಲೂ ನನ್ನ ಬಗ್ಗೆ ಅವರು ಬಹಳಷ್ಟು ಪ್ರೀತಿ, ವಾತ್ಸಲ್ಯ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಹೆಚ್‌ಡಿ ಕುಮಾರಸ್ವಾಮಿ ಭೇಟಿ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ