
ಚಿಕ್ಕಮಗಳೂರು (ನ.20) : ರಾಜಕಾರಣದಲ್ಲಿ ದ್ವೇಷ ಮಾಡುವುದಾದರೆ ಕುಮಾರಸ್ವಾಮಿಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನನ್ನು ದ್ವೇಷ ಮಾಡಲು ನಾನು ಅವರ ಆಸ್ತಿ ತಿಂದಿದ್ದೀನಾ, ಅವರು ನನ್ನ ಆಸ್ತಿ ತಿಂದಿದ್ದಾರಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಮಾನಸಿಕವಾಗಿ ನೀವು ಕೆಟ್ಟು ಹೋಗಿದ್ದಿರಾ, ಪ್ರತಿದಿನ ನಿದ್ದೆ ಗೆಟ್ಟಿರುವವರು ನೀವು, ನನ್ನನ್ನು ಕೆಣಕಲು ಹೋಗಬೇಡಿ ಎಂದರು.
ಸಿಂಹ ಒಬ್ಬಂಟಿಯಾಗೇ ಹೋರಾಟ ಮಾಡೋದು, ಯಾರ ಮೇಲಾದ್ರು ದಾಳಿ ಮಾಡೋದಿಕ್ಕೆ. ಅದಕ್ಕಾಗಿ ನಾನು ಡ್ಯಾಶ್....ಡ್ಯಾಶ್....ಡ್ಯಾಶ್.... ಎಂದು ಟ್ವಿಟ್ ಮಾಡಿ ದ್ದೇನೆ. ಆ ಡ್ಯಾಶ್ ಏನೆಂದು ಅವರಿಗೆ ಅರ್ಥ ಆಗುತ್ತೆ ಎಂದರು.
ಟೆಂಟಲ್ಲಿ ನೀಲಿ ಚಿತ್ರ ತೋರಿಸಿ ಜೀವನ ಮಾಡಿದವನು ಡಿಕೆಶಿ: ಎಚ್‌ಡಿಕೆ ವಾಗ್ದಾಳಿ
ಅವರು ವಕೀಲರು, ನಾನು ಅಡ್ವೋಕೇಟ್ ಅಲ್ಲ, ಅವರು ಕಾನೂನು ಪದವೀಧರರು, ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ಆಗಿದ್ದವರು. ಲಾಯರ್ ಗಳಿಗೆ ಎಷ್ಟರಮಟ್ಟಿಗೆ ಪಾಠ ಹೇಳಿದ್ರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಈ ರಾಜ್ಯದಲ್ಲಿ ಎಷ್ಟು ಜನ ಆಶ್ರಯ ಕಮಿಟಿ ಅಧ್ಯಕ್ಷರಿಲ್ಲ, ಅವರಿಗೆ ಕೊಟ್ಟಿರುವ ಪವರ್ ಏನು? ನಿಮ್ಮ ಮಗನಿಗೆ ಕೊಟ್ಟಿರುವ ಪವರ್ ಏನು? ರಾಜಕೀಯ ಮಾಡುವುದಕ್ಕೆ ತಕರಾರು ಇಲ್ಲ, ಆದ್ರೆ, ಅವರು ಈ ಹಿಂದೆ ಎಂಎಲ್‌ಎ ಆಗಿದ್ದವರು ಕ್ಷೇತ್ರದ ಜನರ ಕಷ್ಟ, ನಷ್ಟ ನೋಡಲು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಿರೀ, ಆಶ್ರಯ ಸಮಿತಿ ಅಧ್ಯಕ್ಷರಿಗೆ ಕೆಡಿಪಿ ಸಭೆ ಮಾಡುವ ಅಧಿಕಾರ ಇದಿಯಾ? ಎಂದು ಪ್ರಶ್ನಿಸಿದ್ದಾರೆ.
ಸಮಯ ಬಂದ್ರೆ ದತ್ತಮಾಲೆ ಹಾಕ್ತೀನಿ
ಹಾಕೋ ಸಮಯ ಬಂದ್ರೆ ದತ್ತ ಮಾಲೆ ಹಾಕ್ತೀನಿ, ದತ್ತಮಾಲೆ ಏಕೆ ಹಾಕಬಾರದು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಅದು ದೇವರ ಕಾರ್ಯಕ್ರಮ, ಹಾಕುವ ಸಮಯ ಬಂದ್ರೆ ಹಾಕ್ತೀನಿ, ಕಾನೂನು ಬಾಹಿರವಾಗಿ ಅಲ್ಲ, ಆ ರೀತಿಯಲ್ಲಿ ಯಾವುದನ್ನೂ ಮಾಡಲ್ಲ, ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ ಎಂದರು.
ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಗ ಮಣಿಕಂಠ ಮೇಲೆ ಹಲ್ಲೆ
ಜಾತ್ಯತೀತತೆ ಅಂದ್ರೆ ಏನು? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿಯಬೇಕು ಅಂತ, ಇದು ಜಾತ್ಯಾತೀತತೇನಾ? ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆಯೇ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ