
ಹಾವೇರಿ (ಆ.10): ಗೃಹಲಕ್ಷ್ಮೀ ಯೋಜನೆಯ 9ನೇ ಕಂತು ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಮಹಿಳೆಯೊಬ್ಬಳು ಗೃಹಲಕ್ಷ್ಮೀ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದಂತೆ ಮನೆಗೆ ಹೊಸ ವಾಷಿಂಗ್ ಮಷಿನ್ ಗಮನ ಸೆಳೆದಿದ್ದಾಳೆ.
ಚಂಪಾವತಿ ಕರೆವ್ವನವರ, ವಾಷಿಂಗ್ ಮಷೀನ್ ಖರೀದಿಸಿದ ಮಹಿಳೆ.ಶ್ರಾವಣ ಮಾಸದಲ್ಲಿ ವಾಷಿಂಗ್ ಮಷಿನ್ ಖರೀದಿಸಿ ಮನೆಯಲ್ಲಿ ಪೂಜೆ ಸಲ್ಲಿಸಿದ ಗೃಹಿಣಿ ಕರೆವ್ವನವರ. ವಾಷಿಂಗ್ ಮಷೀನ್ ಖರೀದಿಸಿ ಮನೆಗೆ ತಂದು ಪೂಜೆ ಸಲ್ಲಿಸಿದ ಬಳಿಕ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದ ಸಲ್ಲಿಸಿದ ಮಹಿಳೆ. ದಿನಾ ಒತ್ತಡದಿಂದ ಕೆಲಸ ಮಾಡುತ್ತಿದ್ದ ಮಹಿಳೆಗೆ ಇದೀಗ ಗೃಹಲಕ್ಷ್ಮೀ ಕಂತಿನಿಂದ ವಾಷಿಂಗ್ ಮಷೀನ್ ಖರೀದಿಸಿದ್ದು ಕೆಲಸದ ಹೊರೆ ಕಡಿಮೆ ಮಾಡಿದಂತಾಗಿದೆ.
ಗೃಹಲಕ್ಷ್ಮೀ ಯೋಜನೆಯ 2,000 ರೂ. ಬಿಡುಗಡೆ ಕುರಿತು ಬಿಗ್ ಅಪ್ಡೇಟ್ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್
ಹಲವು ತಿಂಗಳಿಂದ ಗೃಹಲಕ್ಷ್ಮೀ ಯೋಜನೆಗೆ ಹಣ ಬಿಡುಗಡೆ ಮಾಡಲು ವಿಳಂಬವಾಗಿತ್ತು. ಆದರೆ ಇದೀಗ 9ನೇ ಕಂತು ಬಿಡುಗಡೆಯಾಗಿದೆ. ಹಣ ಬಿಡುಗಡೆಯಾಗುತ್ತಿದ್ದಂತೆ ಬ್ಯಾಂಕ್ ಅಕೌಂಟ್‌ನಿಂದ ಡ್ರಾ ಮಾಡಿಕೊಂಡಿರುವ ಮಹಿಳೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ