ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಆಪ್ತ ಚಿಕ್ಕಣ್ಣಗೆ ತಪ್ಪದ ಕಂಟಕ!

By Ravi Janekal  |  First Published Aug 10, 2024, 1:03 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಸೇರಿ ಇಂದಿಗೆ 50 ದಿನಗಳೇ ಕಳೆದಿವೆ. ಇತ್ತ ದರ್ಶನ್ ಜೊತೆಗೆ ಇದ್ದ ಆಪ್ತರಿಗೂ ಒಂದಿಲ್ಲೊಂದು ವಿಚಾರಣೆ ಕಂಟಕ ಎದುರಾಗುತ್ತಲೇ ಇವೆ. 


ಬೆಂಗಳೂರು (ಆ.10): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಸೇರಿ ಇಂದಿಗೆ 50 ದಿನಗಳೇ ಕಳೆದಿವೆ. ಇತ್ತ ದರ್ಶನ್ ಜೊತೆಗೆ ಇದ್ದ ಆಪ್ತರಿಗೂ ಒಂದಿಲ್ಲೊಂದು ವಿಚಾರಣೆ ಕಂಟಕ ಎದುರಾಗುತ್ತಲೇ ಇವೆ. ದರ್ಶನ್ ಆಪ್ತರ ಪರಿಸ್ಥಿತಿ ಹೇಗಾಗಿದೆಯಂದರೆ ಅಂದು ತಿಂದು ಮನೆಯಲ್ಲಿರೋದು ಬಿಟ್ಟು ಯಾಕಪ್ಪ ದರ್ಶನ್ ಜೊತೆಗೆ ಹೋಗಿಬಿಟ್ಟೆ ಎಂದು ಪೇಚಾಡುವಂತಾಗಿದೆ.

ದರ್ಶನ್ ಪ್ರೇಯಸಿ ಪವಿತ್ರಾ ಗೌಡ ಸೇರಿ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳ ಜೈಲು ಸೇರಿ ಪಶ್ಚತ್ತಾಪ ಪಡುತ್ತಿದ್ದರೆ ಇತ್ತ ಆರೋಪಿಗಳ ಕುಟುಂಬಸ್ಥರು ಜೈಲಿನ ಹೊರಗೆ ದಿನಾ ಸಂಕಟಪಡುವಂತಾಗಿದೆ. ಒಬ್ಬ ಆರೋಪಿ ಹೆತ್ತವರನ್ನ ಕಳೆದುಕೊಂಡರೆ, ಮಗ ಜೈಲು ಸೇರಿದ್ದ ವಿಚಾರಕ್ಕೆ ಮೃತಪಟ್ಟು ಕುಟುಂಬವೇ ಬೀದಿಗೆ ಬಿದ್ದಿದೆ. ಇನ್ನು ದರ್ಶನ್ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ಸೆಲೆಬ್ರಿಟಿ, ಕಲಾವಿದರಿಗೆ ಇಂದಿಗೂ ವಿವಿಧ ರೀತಿಯಲ್ಲಿ ಸಂಕಷ್ಟ ಎದುರಾಗುತ್ತಲೇ ಇವೆ. ಹತ್ಯೆ ಮಾಡಿದ ದಿನ ತಡರಾತ್ರಿ ನಡೆದಿದ್ದ ಪಾರ್ಟಿಯಲ್ಲಿ ದರ್ಶನ್ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಪ್ತ ಗೆಳೆಯ ಹಾಸ್ಯ ಚಿಕ್ಕಣ್ಣನಿಗೂ ಅಂದಿನಿಂದ ಈ ಪ್ರಕರಣದಿಂದ ಬಿಡುಗಡೆ ಸಿಗುವಂತಿಲ್ಲ ಕಾಣುತ್ತಿಲ್ಲ. ಈ ಹಿಂದೆಯೇ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿ ಕಳಿಸಿದ್ದ ಪೊಲೀಸರು ಇದೀಗ ಮತ್ತೆ ನಟ ಚಿಕ್ಕಣ್ಣನನ್ನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 164 ಅಡಿ ಘಟನೆಯ ಸಾಕ್ಷಿಯಾಗಿ ಹೇಳಿಕೆ ದಾಖಲು ಮಾಡಿದ್ದಾರೆ. 

Tap to resize

Latest Videos

ಇವೆಲ್ಲಾ ಬಿಟ್ರೆ ನಿಂಗೆ ತಿನ್ನೋಕೆ ಇನ್ನೇನಿದೆ? ಫ್ರೆಂಡ್ಸ್ ತರ್ಲೆ ಮಾತಿಗೆ ತಲೆ ಕೆಡಿಸಿಕೊಂಡ್ರಾ ರಶ್ಮಿಕಾ ಮಂದಣ್ಣ..!?

ಅಂದು ರಾತ್ರಿ ರಾಜರಾಜೇಶ್ವರಿನಗರದ ಸ್ಟೋನಿ ಬ್ರೋಕ್ ರೆಸ್ಟೋರೆಂಟ್‌ನಲ್ಲಿ ನಟ ದರ್ಶನ್ ಜೊತೆ ಫಾರ್ಟಿ ಮಾಡಿದ್ದ ಚಿಕ್ಕಣ್ಣ. ಅಂದಿನ ಪಾರ್ಟಿಯಲ್ಲಿ ಯಾರೆಲ್ಲ ಇದ್ರು. ನಟ ದರ್ಶನ್ ಪಾರ್ಟಿಯಲ್ಲಿ ಏನೇನು ಮಾತಾಡಿದ್ರು? ರೇಣುಕಾಸ್ವಾಮಿ ಹತ್ಯೆ ವಿಚಾರ ಏನಾದರೂ ಹೇಳಿದ್ರ? ದರ್ಶನ್ ವರ್ತನೆ ಅಂದು ಹೇಗಿತ್ತು ಎಂಬ ಹೇಳಿಕೆ ದಾಖಲು ಮಾಡಿಕೊಂಡ ಪೊಲೀಸರು. 
 

click me!