
ಕೊಪ್ಪಳ (ಮೇ.7): ಇಂದು ಲೋಕಸಭಾ ಚುನಾವಣೆಗೆ ಮತದಾನ ಹಿನ್ನೆಲೆ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಮತದಾನ ಮಾಡಿದರು. ಕೊಪ್ಪಳದ ಕುವೆಂಪುನಗರದಲ್ಲಿರುವ ಕುವೆಂಪು ಶಾಲೆಯ ಮತಗಟ್ಟೆ ಸಂಖ್ಯೆ 102 ಕ್ಕೆ ಆಗಮಿಸಿದ ಶ್ರೀಗಳು ಮತದಾನ ಮಾಡಿ ಭಕ್ತರಿಗೆ ಕೈಮುಗಿದು ತೆರಳಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆವೆರೆಗೆ ಶೇ.24.64ರಷ್ಟು ಮತದಾನವಾಗಿದೆ. ಇನ್ನು ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿದ್ದು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವ ನಿರೀಕ್ಷೆಯಿದೆ.. ಕಾಂಗ್ರೆಸ್ ನಿಂದ ರಾಜಶೇಖರ ಹಿಟ್ನಾಳ್ ಮತ್ತು ಬಿಜೆಪಿಯಿಂದ ಡಾ. ಬಸವರಾಜ ಕ್ಯಾವಟರ್ ಪ್ರಮುಖ ಅಭ್ಯರ್ಥಿಗಳಾಗಿದ್ದು, ನೋಟಾ ಸೇರಿ ಒಟ್ಟಾರೆ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇನ್ನು ಮತದಾನಕ್ಕೆ ಜಿಲ್ಲಾ ಆಡಳಿತ ಸಂಪೂರ್ಣ ಸಜ್ಜು ಮಾಡಿದ್ದು, ಗವಿಸಿದ್ದೇಶ್ವರ ಹೈಸ್ಕೂಲ್ ನಲ್ಲಿ ಮಸ್ಟರಿಂಗ್ ಕಾರ್ಯ ನಡೆಸಿತ್ತು. ಸಿಂಧನೂರು, ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ , ಕೊಪ್ಪಳ ಮತ್ತು ಸಿರಗುಪ್ಪ 8 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಲೋಕಸಭೆ ವ್ಯಾಪ್ತಿಯಲ್ಲಿ ಒಟ್ಟು 18,66,397 ಮತದಾರರಿದ್ದು, ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 9,46,763 ಮಹಿಳಾ ಮತದಾರರು ಮತ್ತು 9,19,499 ಪುರುಷ ಮತದಾರರಿದ್ದಾರೆ.135 ಇತರೆ ಮತದಾರರು ಇದ್ದಾರೆ.
ಗೀತಕ್ಕ ಗೆಲುವು ಗ್ಯಾರಂಟಿ: ಸಚಿವ ಮಧು ಬಂಗಾರಪ್ಪ ವಿಶ್ವಾಸ
ಮತದಾನದ ಹಿನ್ನಲೆಯಲ್ಲಿ 2045 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. ಮತದಾನಕ್ಕೆ 9987 ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಮತದಾನಕ್ಕೆ ಎರಡು ಮೆಶಿನ್ ಗಳನ್ನು ಬಳಕೆ ಮಾಡಲಾಗುತ್ತಿದೆ. 4990 ಬ್ಯಾಲೆಟ್ ಯುನಿಟ್ ಗಳು, 2657 ಕಂಟ್ರೋಲ್ ಯುನಿಟ್, 2755 ವಿವಿ ಪ್ಯಾಟ್ ಗಳ ಬಳಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ