ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ: ಎಸ್‌ಐಟಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

By Sathish Kumar KH  |  First Published Jun 10, 2024, 3:47 PM IST

ಹಾಸನದ ಅತ್ಯಾಚಾರ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ವಿಶೇಷ ತನಿಖಾ ತಂಡದ ಸುಪರ್ದಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.


ಬೆಂಗಳೂರು (ಜೂ.10): ಹಾಸನದ ಅತ್ಯಾಚಾರ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ವಿಶೇಷ ತನಿಖಾ ತಂಡದ ಸುಪರ್ದಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.

ಪ್ರಜ್ವಲ್ ರೇವಣ್ಣನ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕೇಸ್‌ನಡಿ ಕಳೆದ ಒಂದುವರೆ ಗಂಟೆಗಳಿಂದ ಸುದೀರ್ಘ ಮಹಜರು ಪ್ರಕ್ರಿಯೆ ಮಾಡಲಾಗಿದೆ. ಎಸ್ ಐಟಿ ಜೊತೆ ಎಫ್‌ಎಸ್ ಎಲ್ ಟೀಂ ಮಹಜರು ಪ್ರಕ್ರಿಯೆ ವೇಳೆ ಭವಾನಿ ರೇವಣ್ಣ ಮನೆಯಲ್ಲಿಯೇ ಇದ್ದರೂ ತಾಯಿ ಭೇಟಿಗೆ ಹಾಗೂ ಮಾತನಾಡಲು ಅವಕಾಶ ನೀಡಲಿಲ್ಲ. ಮೊದಲ ಮಹಡಿಯ ಪ್ರತ್ಯೇಕವಾದ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಭವಾನಿ ರೇವಣ್ಣ ಅವರನ್ನು ಮಾತನಾಡಿಸಲು ಹೋಗದಂತೆ ಪ್ರಜ್ವಲ್‌ನನ್ನು ಮೂರನೇ ಮಹಡಿಯ ರೂಮಿನಲ್ಲಿ ಮಹಜರು ನಡೆಸಿದ್ದರು. ಸಂತ್ರಸ್ಥೆ ಮಹಿಳೆ ತೋರಿಸಿದ ಸ್ಥಳದ ಬಗ್ಗೆ ಪ್ರಜ್ವಲ್ ವಿಚಾರಣೆ ಮಾಡಲಾಗಿದ್ದು, ಈ ವೇಳೆ ಸಂತ್ರಸ್ಥೆಯೇ ಮಹಿಳೆ ಯಾರೆಂಬುದೇ ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿದ್ದರು.

Latest Videos

undefined

ನನ್ನ ಬಳಿ ಮೊಬೈಲೇ ಇಲ್ಲ: ಪ್ರಜ್ವಲ್ ರೇವಣ್ಣ ಹೊಸ ವರಸೆ!

ಸ್ಥಳ ಮಹಜರು ಮಾಡಿದ ನಂತರ ಪುನಃ ವಶಕ್ಕೆ ಪಡೆದ ಎಸ್‌ಐಟಿಯ ವಶದಲ್ಲಿರಿಸಿಕೊಳ್ಳುವ ಅವಧಿ ಮುಕ್ತಾಯದ ಬೆನ್ನಲ್ಲಿಯೇ 42 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆಗ ಎಸ್‌ಐಟಿಯಿಂದ ತನಿಖೆಯ ಪ್ರಗತಿ ಕಾಪಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ವೇಳೆ ನ್ಯಾಯಾಧೀಶರು - ನಿಮಗೆ ಎಸ್‌ಐಟಿ ಪೊಲೀಸರಿಂದ ತೊಂದರೆ ಆಯ್ತಾ? ಎಂದು ಪ್ರಶ್ನೆ ಮಾಡಿದರು. ಆಗ ಪ್ರಜ್ವಲ್ ರೇವಣ್ಣ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದರು. ಇದಾದ ನಂತರ, ಪ್ರಜ್ವಲ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಯಿತು.

ವಿದೇಶದಲ್ಲಿದ್ದಾಗ ಪ್ರಜ್ವಲ್‌ ರೇವಣ್ಣಗೆ ಹಣ ಕಳಿಸಿದ್ದ ಗೆಳತಿಗೆ ಸಂಕಷ್ಟ: ಎಸ್‌ಐಟಿ ನೋಟಿಸ್

ನ್ಯಾಯಾಂಗ ಬಂಧನದ ಬೆನ್ನಲ್ಲಿಯೇ ಪ್ರಜ್ವಲ್‌ನನ್ನು ಎಸ್‌ಐಟಿ ವಶದಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಸೂಚಿಸಲಾಯಿತು. ಜೂನ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ನಂತರ ನೀವು ಏನಾದ್ರೂ ಕೇಳೋದು ಇದೆಯ ಎಂದು ಆರೋಪಿ ಪ್ರಜ್ವಲ್‌ಗೆ ನ್ಯಾಯಾಧೀಶರು ಪ್ರಶ್ನೆ ಕೇಳಿದರು. ಈ ವೇಳೆ ಏನು ಇಲ್ಲ ಸ್ವಾಮಿ ಎಂದು ಪ್ರಜ್ವಲ್ ಹೇಳಿದರು. ಇದಾದ ನಂತರ ನ್ಯಾಯಾಂಗ ಬಂಧನದ ಆದೇಶವನ್ನು ಹೊರಡಿಸಿ ವಿಚಾರಣೆ ಮುಗಿಸಲಾಯಿತು. ಈಗ ಎಸ್‌ಐಟಿ ಕಸ್ಟಡಿಯಿಂದ ಆರೋಪಿ ಪ್ರಜ್ವಲ್‌ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತದೆ.

click me!