ಜಾತಿ ಪ್ರಮಾಣಪತ್ರ ರದ್ದು ಅಧಿಕಾರ ತಹಶೀಲ್ದಾರ್‌ಗಿಲ್ಲ: ಹೈಕೋರ್ಟ್ ಆದೇಶ

By Kannadaprabha News  |  First Published Jun 10, 2024, 12:33 PM IST

ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಯನ್ನು ಸಮ್ಮತಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನಷ್ಟೇ ತಹಸೀಲ್ದಾ‌ ಹೊಂದಿದ್ದು, ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. 


ವಿಶೇಷ ವರದಿ

ಬೆಂಗಳೂರು (ಜೂ.10): ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಯನ್ನು ಸಮ್ಮತಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನಷ್ಟೇ ತಹಸೀಲ್ದಾ‌ ಹೊಂದಿದ್ದು, ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರ ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ಹಂಪಿ ನಗರದ ನಿವಾಸಿ ಬಿ. ಗುರುಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ತಹಸೀಲ್ದಾರ್ ಸ್ವತಂತ್ರವಾಗಿ ವಿವೇಚನೆ ಬಳಸಿ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸುವ ಅಧಿಕಾರ ವನ್ನು ಉಪ ವಿಭಾಗಾಧಿಕಾರಿ ಹೊಂದಿದ್ದಾರೆ. 

Tap to resize

Latest Videos

ಆದರೆ ಜಾತಿ ಪರಿಶೀಲನಾ ಸಮಿತಿಯ ನಿರ್ದೇಶನದ ಮೇರೆಗೆ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ತಹಸೀಲ್ದಾರ್ ಹೊರಡಿಸಿದ ಉಪ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸುವ ಅಧಿಕಾರ ವಿಭಾಗಾಧಿಕಾರಿಗೆ ಇಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ. ತಾನು ಪಡೆದುಕೊಂಡಿದ್ದ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ರದ್ದುಪಡಿಸಿದ್ದ ತಹಸೀಲ್ದಾ‌ ಕ್ರಮ ಪ್ರಶ್ನಿಸಿ ಬೆಂಗಳೂರಿನ ಬಿನ್ನಿಪೇಟೆ ನಿವಾಸಿ ಎಂ. ಗಾಯತ್ರಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಕುರಿತಂತೆ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿಯ ಮುಂದಿದ್ದ ಪ್ರಕ್ರಿಯೆಯನ್ನು ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿದೆ. 

ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು: ಪ್ರೊ.ಭಗವಾನ್ ವಿವಾದಾತ್ಮಕ ಹೇಳಿಕೆ

ಪ್ರಕರಣ ಸಂಬಂಧ ಕಾನೂನು ಪ್ರಕಾರ ಪರಿಹಾರ ಪಡೆಯಲು ಅರ್ಜಿದಾರರು ಮತ್ತು ಪ್ರತಿವಾದಿ ಗಾಯತ್ರಿ ಅವರಿಗೆ ಮುಕ್ತ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ: ಬೆಂಗಳೂರು ಉತ್ತರ ತಾಲೂಕು ತಹಸೀಲಾ‌ 2015ರ ಜೂ.30ರಂದು ನಗರದ ಬಿನ್ನಿಪೇಟೆಯ ಎಂ.ಗಾಯತ್ರಿ ಅವರು ನಾಯಕ ಸಮುದಾಯಕ್ಕೆ ಸೇರಿದ್ದಾರೆ ಎಂದು ತಿಳಿಸಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ವಿತರಿಸಿದ್ದರು. ಈ ಪ್ರಮಾಣ ಪತ್ರ ಆಧರಿಸಿ ಗಾಯತ್ರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿ ದ್ದರು. 2015ರ ಸೆ.5ರಂದು ಸಿವಿಲ್ ಹಕ್ಕುಗಳ ಜಾರಿ ನಿರ್ದೇಶನಾಲಯದ ಮುಂದೆ ದೂರು ಸಲ್ಲಿಸಿದ್ದ ಅರ್ಜಿದಾರರು, ಗಾಯತ್ರಿ ಅವರು ಮೋಸದಿಂದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ದೂರಿದ್ದರು. 

ಆ ದೂರು ಬೆಂಗಳೂರಿನ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ವರ್ಗಾವಣೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ, ಗಾಯತ್ರಿ ಅವರಿಗೆ ವಿತರಿಸಲಾ ಗಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು 2018ರಜೂ.26ರಂದು ರದ್ದುಪಡಿಸಿ ಆದೇಶಿಸಿದ್ದರು. ಈ ಆದೇಶ ಆಧರಿಸಿ ಗಾಯತ್ರಿ ಅವರಿಗೆ ವಿತರಿಸಿದ್ದ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ 2020ರ ಸೆ.23ರಂದು ತಹಸೀ ಲ್ದಾರ್ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಗಾಯತ್ರಿ ಬೆಂಗಳೂರು ಉತ್ತರ ಉಪ ವಿಭಾಗಾ ಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಆ ಪ್ರಕ್ರಿಯೆ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಜಾತಿ ಪ್ರಮಾಣ ಪತ್ರ ರದ್ದತಿಯನ್ನು ಪ್ರಶ್ನಿಸಿದ ಮೇಲ್ಮನವಿ ಪರಿಗಣಿಸುವ ಅಧಿಕಾರ ಉಪ ವಿಭಾಗಾಧಿಕಾರಿಗೆ ಇಲ್ಲ. ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಹೊರಡಿಸಿದ್ದ ಆದೇಶದ ಅನುಸಾರ ಗಾಯತ್ರಿ ಅವರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿತಹಸೀಲ್ದಾ‌ ಆದೇಶಿಸಿದ್ದಾರೆ. ಅದು ಬಿಟ್ಟು ಸ್ವತಂತ್ರವಾದ ವಿಚಾರಣೆ ನಡೆಸಿ ಆದೇಶ ಮಾಡಿಲ್ಲ. ಉಪ ವಿಭಾಗಾಧಿಕಾರಿಯು ಜಿಲ್ಲಾಧಿಕಾರಿಗಿಂತ ಕಡಿಮೆ ಶ್ರೇಣಿಯ ಹಾಗೂ ಅವರ ಅಧೀನದ ಅಧಿಕಾರಿಯಾಗಿದ್ದಾರೆ. ಹೀಗಾಗಿ, ಜಿಲ್ಲಾಧಿಕಾರಿ ಸಮಿತಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಡೆಸಲು ಕಾಯ್ದೆಯಡಿ ಉಪ ವಿಭಾಗಾಧಿಕಾರಿಗೆ ಅಧಿಕಾರವಿಲ್ಲ ಎಂದು ವಾದಿಸಿದ್ದರು. 

ವಾಟ್ಸಾಪ್‌ನಲ್ಲಿ 'ಡಿಯರ್' ಮೆಸೇಜ್: ಪ್ರಶ್ನಿಸಿದಕ್ಕೆ ಮನೆಯಿಂದ ಪತ್ನಿ ನಾಪತ್ತೆ!

ಹಾಗೆಯೇ, ತಹಸೀಲ್ದಾರ್ ಅವರಿಗೂ ಜಾತಿ ಪ್ರಮಾಣಪತ್ರ ಕೋರಿಸಲ್ಲಿಸುವ ಅರ್ಜಿಯನ್ನು ತಿರಸ್ಕರಿಸುವ ಅಥವಾ ಸಮ್ಮತಿಸುವ ಅಧಿಕಾರ ವಿದೆ ಹೊರತು ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವ ಅಧಿಕಾರ ಇಲ್ಲ. ಜಾತಿ ಪರಿಶೀಲನಾ ಸಮಿತಿ ಮಾತ್ರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸುವ ಅಧಿಕಾರ ಹೊಂದಿದೆ. ಆದ್ದರಿಂದ ಪ್ರಕರಣ ಸಂಬಂಧ ಉಪ ವಿಭಾಗಾಧಿಕಾರದ ಮುಂದೆ ಇರುವ ಪ್ರಕ್ರಿಯೆ ಯನ್ನು ರದ್ದುಪಡಿಸಬೇಕುಎಂದುಕೋರಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ ಈ ಮೇಲಿನಂತೆ ಆದೇಶ ಮಾಡಿದೆ.

click me!