ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿಗೆ ಹಾಗೂ ಮೈಸೂರಿನ ಕಾರಂಜಿ ಕೆರೆಯ ಬಳಿ ಮತ್ಯ್ಸಾಗಾರ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಒಪ್ಪಿಗೆ ಅನುಮೋದನೆ ನೀಡಿದ್ದಾರೆ.
ಬೆಂಗಳೂರು (ಜೂ.10): ಬೆಂಗಳೂರಿನ ಹೊರ ವಲಯದಲ್ಲಿರುವ ಮಾನವ ನಿರ್ಮಿರ ಕೃತಕ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ನೇ ಆಡಳಿತ ಮಂಡಳಿ ಸಭೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ, ಮೈಸೂರಿನ ಕಾರಂಜಿ ಕೆರೆಯಲ್ಲಿ ಮತ್ಯ್ಸಾಗಾರ ನಿರ್ಮಾಣಕ್ಕೆ ಸಮ್ಮತಿ ನೀಡಿದರು. ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮೊದನೆ ನೀಡಿದರು.
undefined
ಬಿಜೆಪಿ ಸರ್ಕಾರದಿಂದ ಬಡವರ ಉದ್ಧಾರ ಆಗಿಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಂಹ, ಹುಲಿ, ಕರಡಿ ಸಫಾರಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 19 ಸಿಂಹಗಳನ್ನು 5 ಹೆಕ್ಟೇರು ಪ್ರದೇಶದಲ್ಲಿ ಸಾಕಲಾಗಿದೆ. ಸಿಂಹದ ಸಫಾರಿಯ ಸಮಯದಲ್ಲಿ ನಾವು ಸಿಂಹಗಳನ್ನು ಹತ್ತಿರದಿಂದಲೇ ನೋಡಬಹುದು. ಕೇವಲ ಕರಡಿ ಹಾಗೂ ಸಿಂಹ ಇಷ್ಟೇ ಅಲ್ಲದೆ ಹುಲಿಗಳನ್ನು ಸಹ ಸಾಕಲಾಗುತ್ತದೆ. ಅದರಲ್ಲೂ ಕೂಡ ಈ ಮೃಗಾಲಯದಲ್ಲಿ 7 ಬಿಳಿ ಹುಲಿಗಳಿವೆ. ಜೊತೆಗೆ 33 ಸಾಮಾನ್ಯ ಹುಲಿಗಳಿವೆ. ಇವುಗಳನ್ನು ಪ್ರವಾಸಿಗರ ಮುಂದೆ ಪ್ರದರ್ಶಿಸಲಾಗುತ್ತಿದೆ. ಜೂವಿಕ ಉದ್ಯಾನದಲ್ಲಿ ಹುಲಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎರಡು ಗುಂಪುಗಳ ಹುಲಿಗಳು ವಿಶ್ರಾಂತಿಯನ್ನು ಪಡೆಯುತ್ತಿದ್ದರೆ. ಇನ್ನೊಂದು ಹುಲಿಯ ಗುಂಪನ್ನು ಸಫಾರಿ ಸ್ಥಳದಲ್ಲಿ ಪ್ರವಾಸಿಗರ ವೀಕ್ಷಣೆಗಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿರುತ್ತಾರೆ.
ಬೆಂಗಳೂರು: ಬನ್ನೇರುಘಟ್ಟದಲ್ಲಿ ಕನಸಾಗಿಯೇ ಉಳಿದ ಜಂಗಲ್ ಸಫಾರಿ..!
ಸಫಾರಿ ಸಮಯ ಮತ್ತು ವೆಚ್ಚ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ 6 ಜನರ ಜೀಪ್ ಸಫಾರಿಗೆ 3,600ರೂ (ಇದು ಮೃಗಾಲಯ + ಸಫಾರಿ + ಬಟರ್‌ಫ್ಲೈ ಪಾರ್ಕ್ + ಕ್ಯಾಮೆರಾವನ್ನು ಒಳಗೊಂಡಿರುತ್ತದೆ). ಎಸಿ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 670 ಮತ್ತು ಮಕ್ಕಳಿಗೆ 470 ರೂಪಾಯಿಗಳಾಗಿದ್ದರೆ , ಎಸಿ ಅಲ್ಲದ ಬಸ್ ಸಫಾರಿಯ ಬೆಲೆ ವಯಸ್ಕರಿಗೆ 350 ರೂ ಮತ್ತು ಮಕ್ಕಳಿಗೆ 250 ರೂಪಾಯಿಗಳಾಗಿರುತ್ತದೆ. (ಇದು ಮೃಗಾಲಯ ಮತ್ತು ಸಫಾರಿಗಳನ್ನು ಒಳಗೊಂಡಿರುತ್ತದೆ ). ಬೆಳಿಗ್ಗೆ 9:30 ರಿಂದ ಸಂಜೆ 5 ರವರೆಗೆ ಉದ್ಯಾನವನ ತೆರೆದಿರುತ್ತದೆ. ಸಫಾರಿ ಸಮಯಗಳು ಬೆಳಿಗ್ಗೆ 10 ರಿಂದ 4: 30 ರವರೆಗೆ. ಸಫಾರಿಯೊಳಗೆ ಕ್ಯಾಮರಾಕ್ಕೆ ಫೋಟೋ ಮತ್ತು ವೀಡಿಯೊ ಕ್ಯಾಮೆರಾಗೆ ಪ್ರತ್ಯೇಕ ಹಣವನ್ನು ಪಾವತಿಸಬೇಕಾಗುತ್ತದೆ.