ಒಂದೇ ಕೊಠಡಿಯಲ್ಲಿದ್ದ ಸಹೋದರರು ; ಮುಖ್ಯ ಜೈಲಿಗೆ ಶಿಫ್ಟಾದ ಪ್ರಜ್ವಲ್ ರೇವಣ್ಣ!

By Ravi Janekal  |  First Published Jul 8, 2024, 9:25 PM IST

ಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನ ಕ್ವಾರಂಟೈನ್ ಜೈಲಿನಿಂದ ಮುಖ್ಯ ಜೈಲಿಗೆ ಶಿಫ್ಟ್ ಮಾಡಿದ ಜೈಲಾಧಿಕಾರಿಗಳು.


ಬೆಂಗಳೂರು (ಜು.8): ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನ ಕ್ವಾರಂಟೈನ್ ಜೈಲಿನಿಂದ ಮುಖ್ಯ ಜೈಲಿಗೆ ಶಿಫ್ಟ್ ಮಾಡಿದ ಜೈಲಾಧಿಕಾರಿಗಳು.

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪದಡಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ. ಪರಪ್ಪನ ಅಗ್ರಹಾರ(parappana Agrahara jail) ಸೆಂಟ್ರಲ್ ಜೈಲಿನ ಕ್ವಾರೆಂಟೈನ್ ಸೆಲ್ ನಲ್ಲಿರಿಸಲಾಗಿತ್ತು. ಜೈಲೂಟದ ಮೆನುವಿನಂತೆ ಮುದ್ದೆ, ಅನ್ನ, ಸಾಂಬಾರು, ಪಲ್ಯ ತಿಂದುಕೊಂಡು ಕ್ವಾರಂಟೈನ್ ಜೈಲಿನಲ್ಲಿದ್ದ ಪ್ರಜ್ವಲ್. ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಸೇರಿದ ಬೆನ್ನಲ್ಲೇ ಸಹೋದರ ಸೂರಜ್ ರೇವಣ್ಣ ಸಹ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದರು. ಕ್ವಾರಂಟೈನ್‌ ಜೈಲಿನ ಒಂದೇ ಕೊಠಡಿಯಲ್ಲಿದ್ದ ಪ್ರಜ್ವಲ್, ಸೂರಜ್ ಸಹೋದರರು. ಇದೀಗ 14 ದಿನ ಕಳೆದಿರುವ ಹಿನ್ನೆಲೆ ಮುಖ್ಯ ಜೈಲಿನ ಭದ್ರತಾ ಕೊಠಡಿಗೆ ಶಿಫ್ಟ್ ಮಾಡಿದ ಜೈಲು ಅಧಿಕಾರಿಗಳು.

Tap to resize

Latest Videos

ಟ್ರೆಂಡಿಂಗ್ ಆಯ್ತು ದರ್ಶನ್ ಕೈದಿ ನಂಬರ್ 6106..! ಚಡ್ಡಿ ಹಾಕ್ಕೊಂಡು ಪೋಸ್‌ ಕೊಟ್ಟ ಅಭಿಮಾನಿ..!

click me!