ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರದ ಕೊರಗಿತ್ತು: ಅಳಿಯನ ಆತ್ಮಹತ್ಯೆ ಬಗ್ಗೆ ಬಿಸಿ ಪಾಟೀಲ್ ಪ್ರತಿಕ್ರಿಯೆ

By Gowthami K  |  First Published Jul 8, 2024, 7:05 PM IST

ಅಳಿಯನ ಸಾವಿನ ಬಳಿಕ  ಶಿವಮೊಗ್ಗದಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ. ಮಕ್ಕಳಿಲ್ಲದ ಕೊರಗಿತ್ತು ಜೊತೆಗೆ ಕುಡಿತದ ಚಟವಿತ್ತು ಎಂದಿದ್ದಾರೆ.


ದಾವಣಗೆರೆ (ಜು.8): ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಕೆಜಿ ಪ್ರತಾಪ್ ಕುಮಾರ್  ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಅಳಿಯನ ಸಾವಿನ ಬಳಿಕ  ಶಿವಮೊಗ್ಗದಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿ, 2008ರಲ್ಲಿ ನನ್ನ ಪುತ್ರಿ ಸೌಮ್ಯ ಜೊತೆ ಪ್ರತಾಪ್ ಕುಮಾರ್ ವಿವಾಹವಾಗಿತ್ತು  ನನ್ನ ವ್ಯವಹಾರ ,ರಾಜಕೀಯ ಸೇರಿದಂತೆ ಎಲ್ಲವನ್ನು ಪ್ರತಾಪ್ ಮನೆ ಮಗನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ. ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು.

Tap to resize

Latest Videos

undefined

ಗಂಡು ಸಂತಾನವಿಲ್ಲದ್ದಕ್ಕೆ ಮಗಳನ್ನು ಹೆಂಡತಿ ತಮ್ಮನಿಗೆ ಕೊಟ್ಟಿದ್ದ ಬಿಸಿ ಪಾಟೀಲ್, ಮಗನಂತಿದ್ದ ಅಳಿಯ ಆತ್ಮಹತ್ಯೆ!

ಈ ಹಿನ್ನೆಲೆಯಲ್ಲಿ ಸೆರೋಗಸಿ ಮೂಲಕ ಮಗು ಪಡೆಯಲು ಕೋರ್ಟ್ ಅನುಮತಿಯನ್ನು ಕೇಳಿದ್ದೆವು. ಕೋರ್ಟ್ ಅನುಮತಿ ನೀಡುವುದರಲ್ಲಿತ್ತು. ಪ್ರತಾಪ್ ಕುಮಾರ್ ಮಧ್ಯಪಾನ ಹೆಚ್ಚಾಗಿ ಮಾಡುತ್ತಿದ್ದರು. ಇದರಿಂದಾಗಿ ಅವರ ಲಿವರ್ ಕಿಡ್ನಿ ಸಮಸ್ಯೆ ಕಾಡಿತ್ತು. ಈ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಬೆಂಗಳೂರಿನ ಮದ್ಯಪಾನ ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಿದ್ದೆವು. ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆದು ಮರಳಿದ ನಂತರ ಮಧ್ಯಪಾನ ಮಾಡದಂತೆ ಹೇಳಿದ್ದೆ.ಇಂದು ಅವರ ಹುಟ್ಟೂರು ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮಕ್ಕೆ ಹೋಗಿದ್ದರು .

ಮಧ್ಯಾಹ್ನದ ವೇಳೆಗೆ ಮೆಕ್ಕೆಜೋಳಗಳಿಗೆ ಹಾಕುವ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದಾರೆಂದು ಅವರ ಸಹೋದರ ಪ್ರಭುದೇವ ಕರೆ ಮಾಡಿದ್ದರು. ನಂತರ ಪ್ರತಾಪ್ ಕುಮಾರ್ ಅವರ ಹುಡುಕಾಟದಲ್ಲಿ ತೊಡಗಿದ್ದೆವು. ದಾವಣಗೆರೆ ಮತ್ತು ಶಿವಮೊಗ್ಗ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆವು. ಹೊನ್ನಾಳಿ ಸಮೀಪದ ಏರಿಯಾದಲ್ಲಿ ಅವರ ಮೊಬೈಲ್ ಆನ್ ಆಗಿತ್ತು.

Breaking: ಮಾಜಿ ಸಚಿವ BC Patil ಅಳಿಯ ವಿಷ ಸೇವಿಸಿ ಆತ್ಮಹತ್ಯೆ!

ಕರೆ ಮಾಡಿದಾಗ ಹೊನ್ನಾಳಿ -0ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ ವಿಷ ಸೇವಿಸಿದ್ದೇನೆ ಎಂದಿದ್ದರು. ಕೊನೆಗೆ ಹೊನ್ನಾಳಿ ಸಮೀಪ ಸಿಕ್ಕಿದ್ದರು. ತಕ್ಷಣವೇ ಹೊನ್ನಾಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ದಾವಣಗೆರೆ ಆಸ್ಪತ್ರೆಗೆ ಕಳಿಸಲು ಯೋಜಿಸಿದ್ದೆವು. ದಾವಣಗೆರೆ ದೂರವಾಗುವ ಹಿನ್ನೆಲೆ ತಕ್ಷಣವೇ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲು ಬರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸಾಕಷ್ಟು ನೋವು ಸಂಕಟ ಆಗುತ್ತಿದೆ. ನಾಳೆ ಚೆನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದಿದ್ದಾರೆ.

click me!