ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಕೆಜಿ ಪ್ರತಾಪ್ ಕುಮಾರ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಅಳಿಯ ಸ್ವಂತ ಮಗನಂತಿದ್ದರು.
ದಾವಣಗೆರೆ (ಜು.8): ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಕೆಜಿ ಪ್ರತಾಪ್ ಕುಮಾರ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಅಳಿಯನ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣದಿಂದ ವಿಷಸೇವೆನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ ತಾಲೂಕು ಅರಕೆರೆ ಸಮೀಪದ ಕಾಡಿನ ಬಳಿ ವಿಷ ಸೇವಿಸಿ, ಮನೆಗೆ ವಿಷಯ ಮುಟ್ಟಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆಸ್ಪತ್ರೆಗೆ ಸೇರಿಸಿದರೂ ಪ್ರತಾಪ್ ರನ್ನು ಉಳಿಸಿಕೊಳ್ಳಲಾಗಲಿಲ್ಲ.
Breaking: ಮಾಜಿ ಸಚಿವ BC Patil ಅಳಿಯ ವಿಷ ಸೇವಿಸಿ ಆತ್ಮಹತ್ಯೆ!
ಹಿರಿಯ ಅಳಿಯ ಪ್ರತಾಪ್ ಕುಮಾರ್ ಅವರು ಬಿಸಿ ಪಾಟೀಲ್ ಅವರ ಮಗನಂತೆ ಇದ್ದರು. ಪತ್ನಿ ವನಜಾ ಅವರ ಸಹೋದರನಾಗಿರುವ ಪ್ರತಾಪ್, ಬಿ.ಸಿ ಪಾಟೀಲ್ ಅವರ ಎಲ್ಲಾ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಗಂಡು ಮಕ್ಕಳು ಇಲ್ಲದೇ ಇದ್ದಿದ್ದರಿಂದ ಸಂಬಂಧದಲ್ಲಿ ಬಾಮೈದನಾಗಿರುವ ಪ್ರತಾಪ್ ಗೆ ತಮ್ಮ ಹಿರಿಯ ಮಗಳು ಸೌಮ್ಯ ಪಾಟೀಲ್ ಅವರನ್ನು ಮದುವೆ ಮಾಡಿ ಕೊಟ್ಟಿದ್ದರು. ಅಳಿಯನ ಆತ್ಮಹತ್ಯೆ ಇಂದ ಕುಗ್ಗಿರುವ ಬಿ.ಸಿ ಪಾಟೀಲ್ ಹಿರೇಕೆರೂರಿನಲ್ಲಿ ಇದ್ದಾಗ ವಿಷಯ ತಿಳಿದು ಶಿಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದರು.
ಇನ್ನು ಪ್ರತಾಪ್ ತಮ್ಮ ಪತ್ನಿ ಫೋಟೋ ಫೇಸ್ ಬುಕ್ ನಲ್ಲಿ ಹಾಕಿ, 2019ರಲ್ಲಿ ವಿವಾಹ ವಾರ್ಷಿಕೋತ್ಸವದ ವಿಶ್ ಮಾಡಿದ್ದರು. "ನನ್ನ ಬಾಳ ಪಯಣದಲ್ಲಿ ಹತ್ತು ವರ್ಷಗಳು ಹೇಗೆ ಕಳೆಯಿತೋ ಗೊತ್ತಿಲ್ಲ ಏಕೆಂದರೆ ನನ್ನಂತಹ ಕೋಪಿಷ್ಟನ ಜೊತೆ ನಿನ್ನ ನೋವು ನಲಿವುಗಳನ್ನು ಮರೆತು ನನಗೋಸ್ಕರ ಶ್ರಮಿಸಿದ ನಿನಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದರು.
ಗಂಡು ಸಂತಾನವಿಲ್ಲದ್ದಕ್ಕೆ ಮಗಳನ್ನು ಹೆಂಡತಿ ತಮ್ಮನಿಗೆ ಕೊಟ್ಟಿದ್ದ ಬಿಸಿ ಪಾಟೀಲ್, ಮಗನಂತಿದ್ದ ಅಳಿಯ ಆತ್ಮಹತ್ಯೆ!
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸಂಸದ ರಾಘವೇಂದ್ರ ಭೇಟಿ:
ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯನ ಆತ್ಮಹತ್ಯೆ ಹಿನ್ನೆಲೆ ಶಿವಮೊಗ್ಗ ಮೆಗನ್ ಆಸ್ಪತ್ರೆಗೆ ಸಂಸದ ಬಿ ವೈ ರಾಘವೇಂದ್ರ ಧಾವಿಸಿ ಬಂದರು. ಅಲ್ಲಿ ಇದ್ದ ಬಿಸಿ ಪಾಟೀಲ್ ರ ಜೊತೆಗೆ ಮಾತುಕತೆ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದರು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ ತಿಮ್ಮಪ್ಪ , ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ, ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಕೂಡ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸುವ ಕುರಿತು ಚರ್ಚೆ ನಡೆಸಿದರು.
ಪ್ರಕರಣ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪ್ರತಾಪ್ ಸಹೋದರ ಪ್ರಭು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರತಾಪಕುಮಾರ್ ಅವರು ಒಬ್ಬರೇ ಕಾರಿನಲ್ಲಿ ಇದ್ದರು ಎಂದು ತಿಳಿಸಿದ್ದಾರೆ. ಸದ್ಯದ ಮಾಹಿತಿಯಂತೆ ಕತ್ತಲೆಗೆರೆಯಲ್ಲಿ ಶವಸಂಸ್ಕಾರ ನಡೆಯಲಿದೆ.