ಹಾಸನದಲ್ಲಿ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ನಾಒತ್ತೆಯಾಗಿ ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ.
ಬೆಂಗಳೂರು (ಮೇ 27): ಹಾಸನದಲ್ಲಿ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ನಾಒತ್ತೆಯಾಗಿ ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾರೆ. ತಂದೆ, ತಾಯಿ ಹಾಗೂ ತಾತನ ಬಳಿ ನಾನು ಕ್ಷಮೆ ಕೇಳುತ್ತೇನೆ. ನಮ್ಮ ಕುಮಾರಣ್ಣ, ನಾಡಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ.
ಇಡೀ ದೇಶಾದ್ಯಂತ ಭಾರಿ ಚರ್ಚೆಎಗೆ ಗ್ರಾಸವಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಒಂದು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾನೆ. ಏಪ್ರಿಲ್ 26ರಂದು ಮತದಾನ ಮಾಡಿದ ನಂತರ ವಿದೇಶಕ್ಕೆ ತೆರಳಿದ್ದ ಸಂಸದ ಪ್ರಜ್ವಲ್ ರೇವಣ್ಣ ಅಂದಿನಿಂದ ಇಂದಿನಿವರೆಗೂ ನಾಪತ್ತೆಯಾಗಿದ್ದರು. ಇನ್ನು ರಾಜ್ಯದಲ್ಲಿ ಹಾಸನದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ, ವಿಡಿಯೋಗಳ ಆಧಾರದಲ್ಲಿ ಎಸ್‌ಐಟಿ ರಚನೆ, ರಾಜಕೀಯ ಕೆಸರೆರಚಾಟ, ಪ್ರಜ್ವಲ್ ಅವರ ಅಪ್ಪ ರೇವಣ್ಣನ ಬಂಧನ ಮತ್ತು ಬಿಡುಗಡೆ, ಪ್ರಜ್ವಲ್ ರೇವಣ್ಣ ಮೇಲೆ ನೋಟೀಸ್ ಜಾರಿ ಸೇರಿದಂತೆ ಹಲವು ಘಟನೆಗಳು ನಡೆದಿವೆ. ಈಗ ಬರೋಬ್ಬರಿ 1 ತಿಂಗಳ ನಂತರ ಮಾಧ್ಯಮದ ಮುಂದೆ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷವಾಗಿದ್ದಾರೆ.
ಪ್ರಜ್ವಲ್ ಬಳಸಲು ಮುಂದಾದ ಶೆನ್ಜೆನ್ ವೀಸಾ ವಿಶೇಷತೆ ಏನು..? ಪಾಸ್‌ಪೋರ್ಟ್ ರದ್ದು..ಕಾನೂನು ಏನ್ ಹೇಳುತ್ತೆ..?
ನಾನು ಫಾರಿನ್‌ನಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ನಾನು ಮತದಾನ ಮಾಡಿ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಕೂಡ ಪೂರ್ವ ನಿರ್ಧರಿತವಾಗಿರುತ್ತದೆ. ವಿದೇಶದಲ್ಲಿ ಉಳಿದುಕೊಂಡು ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ಈ ಮಾಹಿತಿ ನನಗೆ ತಿಳಿದುಬಂದಿತು. ಇದಾದ ನಂತರ ಎಸ್ಐಟಿ ಕೂಡ ನನಗೆ ನೋಟಿಸ್ ಕೊಡುವ ಕೆಲಸ ಮಾಡಿತು. ಎಸ್‌ಯಟಿ ನೋಟಿಸ್‌ಗೆ ಎಕ್ಸ್ ಖಾತೆ ಮತ್ತು ನಮ್ಮ ಲಾಯರ್ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆನು.
ಈ ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ನಾನು ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆನು. ಇದರಿಂದಾಗಿ ನಿಮ್ಮೆಲ್ಲರ ಮುಂದೆ ನಾನು ಕ್ಷಮೆ ಕೇಳುತ್ತೇನೆ.
ಇದಾದ ನಂತರ ಹಾಸನದಲ್ಲಿ ಎಲ್ಲ ನನ್ನ ವಿರುದ್ಧದ ಶಕ್ತಿಗಳು ಒಟ್ಟುಗೂಡಿಕೊಂಡು ಪಿತೂರಿ ಮಾಡುವ ಕೆಲಸವನ್ನು ಮಾಡಿದ್ದಾರೆ. ರಾಜಕೀಯವಾಗಿ ನಾನೇನು ಬೆಳೆಯುತ್ತಿದ್ದೇನೆ, ಅದನ್ನು ಮುಗಿಸಬೇಕು ಎಂಬ ನಿಟ್ಟಿನಲ್ಲಿ ನನ್ನನ್ನು ಏನೇನೋ ಪ್ರಕರಣಗಳಲ್ಲಿ ಸಿಲುಕಿಸುವ ಕೆಲಸ ಮಾಡಿದ್ದಾರೆ. ಇದರಿಂದ ನಾನು ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದೇನೆ.
ಪ್ರಜ್ವಲ್ ಅತ್ಯಾಚಾರಕ್ಕೂ ರಾಕೇಶ್ ಸಾವಿಗೂ ಏನು ಸಂಬಂಧ?: ಸಿಎಂ ಸಿದ್ದರಾಮಯ್ಯ
ಈ ಘಟನೆಯಿಂದ ಯಾರೂ ಕೂಡ ಅನ್ಯಥಾ ಭಾವಿಸುವುದು ಬೇಡ. ನಾನೇ ಸ್ವತಃ ಶುಕ್ರವಾರ ಮೇ 31ರಂದು ಎಸ್‌ಯಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ನನ್ನ ಮೇಲೆ ದಾಖಲಾಗಿರುವಂತಹ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ. ನನ್ನ ಮೇಲೆ ದೇವರು, ಜನರು ಹಾಗೂ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ. ನಾನು ಮೇ 31ರಂದು ಬಂದು ಈ ಎಲ್ಲ ಪ್ರಹಸನಗಳಿಗೆ ತೆರೆ ಎಳೆಯುತ್ತೇನೆ ಎಂದು ವಿದೇಶದಲ್ಲಿ ಕುಳಿತು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.