ಶ್ರೀರಂಗಪಟ್ಟಣ ಮಸೀದಿಯಲ್ಲಿ ಚಾಲೀಸಾ ಪಠಣ: ಹಿಂದು ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ವಿಡಿಯೋ ವೈರಲ್‌

By Govindaraj S  |  First Published Jun 5, 2022, 3:15 AM IST

ಹಿಂದು ಸಂಘಟನೆಗಳಿಂದ ಶ್ರೀರಂಗಪಟ್ಟಣದಲ್ಲಿ ‘ಮೂಲಮಂದಿರ ಚಲೋ’ ಪ್ರತಿಭಟನೆ ನಡೆದ ಹೊತ್ತಲ್ಲೇ ಜಾಮೀಯಾ ಮಸೀದಿಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹನುಮಾನ್‌ ಚಾಲೀಸಾ ಪಠಿಸಿದ್ದಾರೆಂಬ ವೀಡಿಯೋ ವೈರಲ್‌ ಆಗಿ ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. 


ಶ್ರೀರಂಗಪಟ್ಟಣ (ಜೂ.05): ಹಿಂದು ಸಂಘಟನೆಗಳಿಂದ ಶ್ರೀರಂಗಪಟ್ಟಣದಲ್ಲಿ ‘ಮೂಲಮಂದಿರ ಚಲೋ’ ಪ್ರತಿಭಟನೆ ನಡೆದ ಹೊತ್ತಲ್ಲೇ ಜಾಮೀಯಾ ಮಸೀದಿಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹನುಮಾನ್‌ ಚಾಲೀಸಾ ಪಠಿಸಿದ್ದಾರೆಂಬ ವೀಡಿಯೋ ವೈರಲ್‌ ಆಗಿ ಕೆಲ ಕಾಲ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಅದು ಹಳೇಯದು ಎಂಬುದು ನಂತರ ತಿಳಿದು ಬಂದಿದೆ.

ಜಾಥಾಗೆ ತಡೆಯೊಡ್ಡಿದ ಪೊಲೀಸರು ಬನ್ನಿಮಂಟಪದ ಬಳಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಪ್ರತಿಭಟನೆಗೆ ಮಾತ್ರ ಅವಕಾಶ ನೀಡಿದರು. ಈ ವೇಳೆ ‘ಪ್ರತಿಭಟನಾ ಸ್ಥಳದಲ್ಲಿ ಹನುಮಾನ್‌ ಚಾಲೀಸಾ ಪಠಿಸಿದ್ದೇವೆ. ಅದೇ ರೀತಿ ಮಸೀದಿಯಲ್ಲೂ ನಡೆದಿದೆ. ಕೆಲವೇ ಹೊತ್ತಿನಲ್ಲೇ ಅದರ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತೇವೆ. ಎಲ್ಲರೂ ಮಾಡಿದರೆ ಮಾತ್ರ ಹೋರಾಟವಲ್ಲ. 

Tap to resize

Latest Videos

Mandya: ಮತ್ತೆ ಚರ್ಚೆಗೆ ಬಂದ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ: ಪೂಜೆಗೆ ಅವಕಾಶ ಕೋರಿ ಡಿಸಿಗೆ ಮನವಿ!

ಒಬ್ಬನೇ ಮಾಡಿದರೂ ಹೋರಾಟವೇ’ ಎಂದು ಹಿಂದೂಪರ ಸಂಘಟನೆಯ ಮುಖಂಡರೊಬ್ಬರು ಅಚ್ಚರಿಯ ಹೇಳಿಕೆ ನೀಡಿ ಪೊಲೀಸರನ್ನೇ ತಬ್ಬಿಬ್ಬುಗೊಳಿಸಿದರು. ಕೆಲ ಹೊತ್ತಿನಲ್ಲೇ ಮಸೀದಿ ಮುಂದೆ ಇಬ್ಬರು ಕಾರ್ಯಕರ್ತರು ಕುಳಿತು ಹನುಮಾನ್‌ ಚಾಲೀಸಾ ಪಠಿಸುತ್ತಿರುವ ವಿಡಿಯೋ ಕೂಡ ವೈರಲ್‌ ಆಯಿತು. ಆದರೆ ಆ ವಿಡಿಯೋ ಹಳೇಯದು ಎಂದು ತಿಳಿದು ಬಂದಿದ್ದರಿಂದ ಪೊಲೀಸರು ನಿರಾಳರಾದರು.

ಎಸ್ಪಿ ಸ್ಪಷ್ಟನೆ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌, ಜಾಮೀಯಾ ಮಸೀದಿಯಲ್ಲಿ ಹನುಮಾನ್‌ ಚಾಲೀಸಾ ಪಠಣ ಮಾಡಿರುವುದಾಗಿ ಹಿಂದೂ ಪರ ಸಂಘಟನೆ ಮುಖಂಡರು ಬಿಡುಗಡೆ ಮಾಡಿರುವ ವಿಡಿಯೋ ಹಳೇಯದ್ದು. ಮಸೀದಿ ಸುತ್ತಲೂ 144 ಸೆಕ್ಷನ್‌ ಜಾರಿಗೊಳಿಸಿ ಪೊಲೀಸ್‌ ಸರ್ಪಗಾವಲು ಹಾಕಿದ್ದು, ಅವರನ್ನು ದಾಟಿ ಯಾವೊಬ್ಬ ಹಿಂದೂ ಕಾರ್ಯಕರ್ತರೂ ಮಸೀದಿ ಪ್ರವೇಶ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಮಠಾಧೀಶರ ಹೋರಾಟ ತಡೆದರೆ ರಾಜ್ಯಕ್ಕೆ ಬೆಂಕಿ ಹತ್ತುತ್ತೆ : Pramod Muthalik ಎಚ್ಚರಿಕೆ

ಪ್ರತಿಭಟನಾಕಾರರ ಕಾರಿನಲ್ಲಿ ಮಾರಕಾಸ್ತ್ರ: ಶ್ರೀರಂಗಪಟ್ಟಣ ಮೂಲಮಂದಿರ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕಾರ್ಯಕರ್ತರ ಕಾರಿನಲ್ಲಿ ಲಾಂಗ್‌ವೊಂದು ಇರುವುದು ವಿಡಿಯೋವೊಂದರಲ್ಲಿ ಕಂಡು ಬಂದಿದೆ. ಡಸ್ಟರ್‌ ಕಾರ್‌ನ(ಕೆಎ-11 ಎಂ-5545) ಡಿಕ್ಕಿಯ ಬಾಗಿಲನ್ನು ಕಾರ್ಯಕರ್ತರು ತೆರೆಯುತ್ತಿರುವ ವೇಳೆ ಸ್ಥಳದಲ್ಲಿ ಇದ್ದವರಾರ‍ಯರೋ ವಿಡಿಯೋ ಮಾಡಿದ್ದಾರೆ. ಆಗ ಡಿಕ್ಕಿಯಲ್ಲಿ ಲಾಂಗ್‌ ಇರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಈಗ ವೈರಲ್‌ ಆಗಿದೆ.

click me!