ರಾಮಾಯಣದಲ್ಲಿ ಹನುಮಂತನನ್ನು ಕೆಣಕಿದ್ದಕ್ಕೆ ಇಡೀ ಲಂಕೆಯೇ ಸುಟ್ಟು ಭಸ್ಮವಾಯ್ತು. ಈಗ ಹನುಮಾನ್ ಧ್ವಜವನ್ನು ತೆರವುಗೊಳಿಸಿದ ನಿಮ್ಮ ಅವನತಿಯೂ ಆಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ (ಜ.29): ನಮ್ಮ ನಾಡಿನ ಸಂಸ್ಕೃತಿ, ಹನುಮನನ್ನ ಪ್ರತಿದಿನ ಪೂಜಿಸಿದ ಪ್ರಾರ್ಥನೆ ಮಾಡುತ್ತೇವೆ. ಆದರೆ, ಹನುಮಾನ್ ಧ್ವಜ ಅಳವಡಿಕೆಯನ್ನು ತೆರವುಗೊಳಿಸಿ ಪ್ರಶ್ನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ರಾಮಾಯಣದಲ್ಲಿ ಹನುಮಂತನ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು. ಅದೇ ರೀತಿ ಈಗ ಹನುಮಾನ್ ಧ್ವಜವನ್ನು ತೆರವುಗೊಳಿಸಿದ ನಿಮ್ಮ ಅವನತಿಯೂ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಅಳವಡಿಸಿದ ಹನುಮಾನ್ ಧ್ವಜ ತೆರವು ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮನೆರವಣಿಗೆಯಲ್ಲಿ ಮಾತನಾಡಿದ ಅವರು, ನಮ್ಮ ನಾಡಿನ ಸಂಸ್ಕೃತಿ, ಹನುಮನನ್ನ ಪ್ರತಿದಿನ ಪ್ರಾರ್ಥನೆ ಮಾಡುತ್ತೇವೆ. ಸರಕಾರದ ಉದ್ದಟತನ ಕಾಣುತ್ತಿದೆ. ಪೊಲೀಸರು ಪ್ರಶ್ನೆ ಮಾಡಲು ಬಂದವರ ಮೇಲೆಯೇ ಲಾಠಿ ಚಾರ್ಜ್ ಮಾಡಿದ್ದಾರೆ. ಆಗ ಒಬ್ಬರ ಕಣ್ಣಿಗೆ ಏಟು ಬಿದ್ದಿದೆ. ಯುವಕನ ಕಣ್ಣು ಹೋಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಣ್ಣು ತಂದು ಕೊಂಡುತ್ತಿದ್ರಾ? ಪೊಲೀಸರೆ ಎಚ್ಚರವಾಗಿರಿ. ಎಷ್ಟು ದಿನ ನಿಮ್ಮಆಟ ನಡೆಯುತ್ತದೆ ನಾನು ನೋಡ್ತಿನಿ. ಯಾವಾನೋ ಹೇಳುತ್ತಾನೆ ಅಂತಾ ಹೇಗೆ ಬೇಕೋ ಹಾಗೇ ಕೆಲಸ ಮಾಡುವುದನ್ನು ನಾವು ಒಪ್ಪಲ್ಲ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಬೆನ್ನಲ್ಲೇ ಎನ್.ಎ.ಹ್ಯಾರಿಸ್ ಶಾಸಕ ಸ್ಥಾನಕ್ಕೆ ಎದುರಾಯ್ತು ಕಂಟಕ
ಇದು ಇಲ್ಲಿಗೆ ನಿಲ್ಲುವುದಿಲ್ಲ.ನಿನ್ನೆ ಪೊಲೀಸರು ಮಾಡಿರೋ ದೌರ್ಜನ್ಯವನ್ನು ಈ ಸರಕಾರ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಸರಕಾರವೇ ಸಂಘರ್ಷಕ್ಕೆ ಕಾರಣವಾಗಿದೆ. ಈ ಘಟನೆಗೆಲ್ಲ ಮಂಡ್ಯ ಜಿಲ್ಲಾಧಿಕಾರಿ ಕಾರಣವಾಗಿದ್ದಾರೆ. ಆದ್ದರಿಂದ ಮಂಡ್ಯ ಜಿಲ್ಲಾಧಿಕಾರಿಯನ್ನು ಮೊದಲು ಅಮಾನತ್ತು ಮಾಡಿ ಇಲ್ಲಿಂದ ಹೊರಗೆ ಕಳುಹಿಸಬೇಕು. ಹನುಮಂತನ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು. ಅದೇ ರೀತಿ ನಿಮ್ಮ ಅವನತಿ ಆಗುತ್ತದೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದರೆ ಸಾಲದು, ನಿಮ್ಮ ನಡವಳಿಕೆ ಮುಖ್ಯ ಎಂದು ಕಿಡಿಕಾರಿದರು.
ಕೆರಗೋಡು ಗ್ರಾಮದ 144 ಸೆಕ್ಷನ್ ತೆರವುಗೊಳಿಸಿ: ಮಂಡ್ಯ ಹಾಗೂ ಕೆರಗೋಡಿನಲ್ಲಿ ನಡೆದಿರುವ ಲಾಠಿ ಚಾರ್ಜ್ ಸರಕಾರದ ರಾಕ್ಷಸಿ ಪ್ರವೃತ್ತಿ ತೋರಿಸುತ್ತದೆ. ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಕೆ ಕೊಡ್ತಿದ್ದೇನೆ. ಈಗಲೇ ನಿಮ್ಮ ತಪ್ಪು ತಿದ್ದಿಕೊಳ್ಳಿ. ರಾಜಕೀಯ ಮಾಡಿದ್ದು ನಿಮ್ಮ ಬುದ್ಧಿಯನ್ನು ತೋರಿಸುತ್ತದೆ. ಅಧಿಕಾರದ ಅಮಲಿನಲ್ಲಿ ದೈಹಿಕ ಹಲ್ಲೆ ಮಾಡಿಸಿದ್ದೀರಿ. ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಮ್ಮ ಕಾರ್ಯಕರ್ತರಿಗೆ ದೈಹಿಕವಾಗಿಯೂ ಪೆಟ್ಟು ಕೊಟ್ಟಿದ್ದೀರಿ. ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳಿಗೆ ಪ್ರಾಯಶ್ಚಿತ್ತ ಆಗಲೇಬೇಕು. ಇಲ್ಲಿ ಮೊದಲು 144 ಸೆಕ್ಷನ್ ಅನ್ನು ಕಿತ್ತಾಕಿ. ಜನರು ಕೆರಳಿದರೆ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
Janardhana Reddy: ಹನುಮಧ್ವಜ ಹೋರಾಟದಲ್ಲಿ ಭಾಗಿಯಾಗಿ ಘರ್‌ವಾಸ್ಸಿ ಸೂಚನೆ ಕೊಟ್ರಾ ಜನಾರ್ದನ ರೆಡ್ಡಿ ?
ಹೈಕಮಾಂಡ್ ಮೈತ್ರಿಯಾದರೂ ಒಪ್ಪಿಕೊಳ್ಳದ ಬಿಜೆಪಿ ನಾಯಕರು: ಪ್ರತಿಭಟನೆಯಲ್ಲೂ ಸ್ಫೋಟಗೊಂಡ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಮುನಿಸು. ಹೈಕಮಾಂಡ್ ಮಟ್ಟದಲ್ಲಿ ಹೊಂದಾಣಿಕೆಯಾದ್ರೂ ಕುಮಾರಸ್ವಾಮಿಯನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಿಲ್ಲ. ಕುಮಾರಸ್ವಾಮಿ ಬರುತ್ತಿದ್ದಂತೆ ಮಾಜಿ ಶಾಸಕರಾದ ನಾರಾಯಣಗೌಡ ಹಾಗೂ ಪ್ರೀತಮ್ ಪ್ರತಿಭಟನೆ ಬಿಟ್ಟು ಹೊರ ನಡೆದಿದ್ದಾರೆ. ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಳ್ಳೋದಕ್ಕೂ ಮಾಜಿ ಸಚಿವ ನಾರಾಯಣಗೌಡ ಹಿಂದೇಟು ಹಾಕಿದ್ದಾರೆ. ಈ ಮೂಲಕ ಜೆಡಿಎಸ್ ಜೊತೆಗಿನ ಮೈತ್ರಿಯನ್ನ ಬಹಿರಂಗವಾಗಿಯೇ ವಿರೋಧಿಸುತ್ತಿದ್ದಾರೆ. ಇನ್ನು ಮಾಜಿ ಸಚಿವ ನಾರಾಯಣಗೌಡ ಹಾಗೂ ಮಾಜಿ ಶಾಸಕ ಪ್ರೀತಮ್ ಅವರು ಕೆರಗೋಡು ಬಳಿಯಿಂದಲೇ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಂಡ್ಯಕ್ಕೆ ಆಗಮಿಸಿದ್ದರು. ಆದರೆ, ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದ್ದ ಬೃಹತ್ ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಭಾಗವಹಿಸಲು ಆಗಮಿಸಿದ್ದ ವೇಳೆ ಇವರಿಬ್ಬರೂ ಅಲ್ಲಿಂದ ತೆರಳಿದ್ದಾರೆ.