ಹಿಜಾಬ್, ಹಲಾಲ್ ಬಳಿಕ ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯ ಕೊನೆಗೊಳಿಸಲು ಕರೆ!

Published : Apr 06, 2022, 04:00 PM IST
ಹಿಜಾಬ್, ಹಲಾಲ್ ಬಳಿಕ ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯ ಕೊನೆಗೊಳಿಸಲು ಕರೆ!

ಸಾರಾಂಶ

ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಹಿಜಾಬ್  ಹಾಗೂ ಹಲಾಲ್ ವಿಚಾರದ ಬಳಿಕ, ಕರ್ನಾಟಕದ ಹಿಂದೂ ಸಂಘಟನೆಗಳು ಈಗ ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯವನ್ನು ಬಹಿಷ್ಕರಿಸಲು ಮತ್ತು ನಿಷೇಧಿಸಲು ಒತ್ತಾಯಿಸಿವೆ.  

ಬೆಂಗಳೂರು (ಏ.6): ಹಲಾಲ್ (Halal) ಮಾಂಸವನ್ನು ನಿಷೇಧಿಸುವ ಬೇಡಿಕೆ ಮತ್ತು ಅಜಾನ್ (Azaan) ಸಮಯದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ (loudspeaker ) ಬಳಕೆಯನ್ನು ಟೀಕಿಸುತ್ತಿರುವಾಗಲೇ, ಕರ್ನಾಟಕದ ಕೆಲವು ಹಿಂದೂ ಸಂಘಟನೆಗಳು ಈಗ ಹಣ್ಣಿನ ವ್ಯಾಪಾರದಲ್ಲಿ (fruit business) "ಮುಸ್ಲಿಮರ ಏಕಸ್ವಾಮ್ಯ" ವನ್ನು (Muslim monopoly) ಕೊನೆಗೊಳಿಸಲು ಪ್ರಯತ್ನಿಸುತ್ತಿವೆ.

ಕರ್ನಾಟಕದ ಹಿಂದೂ ಜನಜಾಗೃತಿ ಸಮಿತಿಯ (Hindu Janajagruti Samiti) ಸಂಯೋಜಕ ಚಂದ್ರು ಮೊಗೇರ್ (Chandru Moger) ಅವರು ಈ ಕುರಿತಾಗಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹಿಂದೂ ಮಾರಾಟಗಾರರಿಂದಲೇ ಹಿಂದುಗಳು ಹೆಚ್ಚಾಗಿ ಹಣ್ಣುಗಳನ್ನು ಖರೀದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಹೆಚ್ಚಿನ ಹಣ್ಣಿನ ವ್ಯಾಪಾರವನ್ನು ಮುಸ್ಲಿಮರೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. “ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯವಿದೆ. ಹಣ್ಣು, ಬ್ರೆಡ್ ಮಾರುವ ಮುನ್ನವೇ ಉಗುಳುತ್ತಿರುವುದನ್ನು ನೋಡುತ್ತಿದ್ದೇವೆ’ ಎಂದು ಚಂದ್ರು ಮೊಗೇರ್ ಹೇಳಿದ್ದಾರೆ. ಈ ಮುಸ್ಲಿಂ ವ್ಯವಹಾರಗಳು ಜಿಹಾದ್ ಅನ್ನು ಉಗುಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

'ಹಣ್ಣಿನ ವ್ಯಾಪಾರದಲ್ಲಿ ಮುಸ್ಲಿಮರ ಏಕಸ್ವಾಮ್ಯವನ್ನು ಕೊನೆಗೊಳಿಸಲು ಸಹಾಯ ಮಾಡಲು ನಾನು ಎಲ್ಲಾ ಹಿಂದೂಗಳನ್ನು ವಿನಂತಿಸುತ್ತೇನೆ. ಹಿಂದೂ ಮಾರಾಟಗಾರರಿಂದ ಮಾತ್ರ ಹಣ್ಣುಗಳನ್ನು ಖರೀದಿಸುವಂತೆ  ಒತ್ತಾಯಿಸುತ್ತೇನೆ' ಎಂದು ಅವರು ಹೇಳಿದ್ದಾರೆ. ಹಿಂದೂ ಬಲಪಂಥೀಯ ನಾಯಕ ಪ್ರಶಾಂತ್ ಸಂಬರಗಿ (Hindu right-wing leader Prashanth Sambargi ) ಕೂಡ ಮುಸ್ಲಿಂ ಹಣ್ಣು ಮಾರಾಟಗಾರರನ್ನು ಬಹಿಷ್ಕರಿಸುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

'ಜಮೀನಿನಲ್ಲಿ ದುಡಿಯುವ ಕಠಿಣ ಕೆಲಸವನ್ನು ಹಿಂದೂ ರೈತರು ಮಾಡುತ್ತಾರೆ ಮತ್ತು ಲಾಭವನ್ನು ಮಧ್ಯವರ್ತಿಗಳಾದ ಮುಸ್ಲಿಂ ಮಾರಾಟಗಾರರು ತೆಗೆದುಕೊಳ್ಳುತ್ತಾರೆ. ನಾವು ಈ ವ್ಯಾಪಾರ ಚಕ್ರದ ಬಗ್ಗೆ ಸಂಶೋಧನೆ ಮಾಡಿದ್ದೇವೆ ಮತ್ತು ಹಿಂದೂ ರೈತ ಅಸಂಘಟಿತ ನಿರ್ದಿಷ್ಟ ಗುಂಪಿಗೆ ಕರುಣೆ ತೋರುತ್ತಾನೆ ಎಂದು ಅರ್ಥಮಾಡಿಕೊಂಡಿದ್ದೇವೆ. ವ್ಯವಹಾರದಲ್ಲಿನ ಈ ಮಧ್ಯವರ್ತಿಯನ್ನು ತೆಗೆದುಹಾಕಲು, ನಾವು ಅಭಿಯಾನವನ್ನು ಆರಂಭಿಸಿದ್ದೇವೆ' ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ವ್ಯಾಪಾರಕ್ಕೆ ದೊಡ್ಡ ಮಾರುಕಟ್ಟೆ ಇದೆ ಮತ್ತು ಮಧ್ಯವರ್ತಿಗಳನ್ನು ತೆಗೆದುಹಾಕುವುದರಿಂದ ರೈತರು ತಮ್ಮ ಇಳುವರಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ ಎಂದು ರೈತರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, 'ಇಂಥ ವಿಚಾರಗಳನ್ನು ಪ್ರಚೋದಿಸಲು ಕೆಲವು ಸಂಘಟನೆಗಳು ಪ್ರಯತ್ನಿಸುತ್ತಿವೆ. ಇದಕ್ಕೆ ನಾವಾಗಲಿ ನಮ್ಮ ಪಕ್ಷವಾಗಲಿ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಸೆಯಂತೆ ನಮ್ಮ ಸರ್ಕಾರ ಯಾವುದೇ ನಾವು ಯಾವುದೇ ಭಾರತೀಯರು ಅಥವಾ ವಿವಿಧ ಸಮುದಾಯಗಳಿಗೆ ಸೇರಿದ ನಮ್ಮ ಸಹೋದರರ ವಿರುದ್ಧವಾಗಿಲ್ಲ ಎಂದು ಹೇಳಿದ್ದಾರೆ.

ಹೋಂ ಮಿನಿಸ್ಟರ್‌ ಆಗೋದಿಕ್ಕೆ ಲಾಯಕ್ಕೇನ್ರಿ ನೀವು? ಜ್ಞಾನೇಂದ್ರರಿಗೆ ಸಿದ್ದು ಪ್ರಶ್ನೆ

'ಶತಮಾನಗಳು ಮತ್ತು ದಶಕಗಳಿಂದ ಕಟ್ಟಿದ ಸಂಬಂಧಗಳನ್ನು ದ್ವೇಷಿಸುವ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ, ನಾವು ಪರಸ್ಪರ ಮಾತನಾಡಿಕೊಂಡು ಸರಿಪಡಿಸಿಕೊಳ್ಳಬೇಕು. ದ್ವೇಷದೊಂದಿಗೆ ಮುಂದುವರಿಯಬಾರದು' ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ನಮ್ಮ ಸಮಾಜದ ಯಶಸ್ಸಿಗಾಗಿ ನಾವೆಲ್ಲರೂ ಇಲ್ಲಿದ್ದೇವೆ ಮತ್ತು ಎಲ್ಲರೂ ಕೋಮು ಸೌಹಾರ್ದತೆಯನ್ನು ಹೊಂದಬೇಕೆಂದು ನಾವು ಬಯಸುತ್ತೇವೆ ಎಂದು ಬಿಜೆಪಿ ನಾಯಕ ಹೇಳಿದರು.

BJ Puttaswamy: ರಾಜಕೀಯ ತ್ಯಜಿಸಿ ಮಠಾಧೀಶರಾಗಲಿದ್ದಾರೆ ಬಿಎಸ್.ಯಡಿಯೂರಪ್ಪ ಪರಮಾಪ್ತ!

ಹಣ್ಣಿನ ವ್ಯಾಪಾರದಲ್ಲಿ "ಮುಸ್ಲಿಮರ ಏಕಸ್ವಾಮ್ಯ" ಕೊನೆಗಾಣಿಸಲು ಹಿಂದೂ ಸಂಘಟನೆಗಳ ಬೇಡಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಮರಿಂದ ಮಾವು ಅಥವಾ ಹಣ್ಣುಗಳನ್ನು ಖರೀದಿಸದಿರುವುದು ದೇಶ ವಿರೋಧಿ ಮತ್ತು ರೈತರ ವಿರೋಧಿ ಎಂದು ಅವರು ಹೇಳಿದರು. ಮುಸ್ಲಿಮರಿಂದ ಮಾವು ಅಥವಾ ಹಣ್ಣುಗಳನ್ನು ಖರೀದಿಸಬೇಡಿ ಎಂದು ಜನರನ್ನು ಕೇಳುವುದು ದೇಶ ವಿರೋಧಿ ಮತ್ತು ರೈತರ ವಿರೋಧಿ. ಮುಸ್ಲಿಮರು ರೈತರಿಗೆ ಸಹಾಯ ಮಾಡಲು ಹಿಂದೂ ರೈತರಿಂದ ಬೆಳೆಗಳನ್ನು ಖರೀದಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ