ಮೀಸಲಾತಿ ಬೇಕಂದ್ರೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಬೇಕೆಂದ ಹಡಪದ ಅಪ್ಪಣ್ಣ ಸ್ವಾಮೀಜಿ!

By Sathish Kumar KH  |  First Published Oct 3, 2023, 11:45 PM IST

ಹಡಪದ ಸಮುದಾಯಕ್ಕೆ 2ಎ ಮೀಸಲಾತಿ ಬೇಕೆಂದರೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಿ ಎಂದು ಹಡಪದ ಅಪ್ಪಣ್ಣ ಸ್ವಾಮೀಜಿ ಹೇಳಿದ್ದಾರೆ.


ದಾವಣಗೆರೆ (ಅ.03): ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಡಪದ ಸಮುದಾಯಕ್ಕೆ 2ಎ ಮೀಸಲಾತಿ ಬೇಕೆಂದರೆ ಯಾರು ಸಹ ಕರೆದು ಮೀಸಲಾತಿ ಸೌಲಭ್ಯ ಕೊಡೋದಿಲ್ಲ. ನಾವು ಬಯಸಿದ ಮೀಸಲಾತಿ ಸಿಗಬೇಕೆಂದರೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಿ ಎಂದು ಮುದ್ದೆಬಿಹಾಳ್ ತಂಗಡಗಿ ಹಡಪದ ಮಠದ ಶ್ರೀ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಹಡಪದ ಜಯಂತಿ, ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಹಡಪದ ಅಪ್ಪಣ್ಣ ಸ್ವಾಮೀಜಿ, ಯಾರು ಸಹ ಕರೆದು ಮೀಸಲಾತಿ ಸೌಲಭ್ಯ ಕೊಡೋದಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅವಶ್ಯಕವಾಗಿದೆ. ಹಡಪದ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ. ಮಕ್ಕಳ ಭವಿಷ್ಯ ಉಜ್ವಲ ಆಗಬೇಕು ಎಂದರೆ ಬೀದಿಗೆ ಇಳಿಯಿರಿ. ಬೀದಿಗೆ ಇಳಿದು ಕಲ್ಲು ತೂರಿ, ಬೆಂಕಿ ಹಚ್ಚಿರಿ. ಸೌಲಭ್ಯ ಕೊಡುತ್ತೇವೆ ಎಂದು ಯಾರು ಮುಂದೆ ಬರಲ್ಲ. ತಡ ಮಾಡದೇ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು. 

Tap to resize

Latest Videos

ವೀರಶೈವ ಲಿಂಗಾಯತರಿಗೆ ಬಂಪರ್‌ ಗಿಫ್ಟ್‌: ಶೈಕ್ಷಣಿಕ, ಸ್ವಯಂ ಉದ್ಯೋಗ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ

ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಬರೆಯಬೇಕು. ಇಲ್ಲವಾದಲ್ಲಿ ಅವರ ಭವಿಷ್ಯವನ್ನು ಮೂಟೆ ಕಟ್ಟಿ ಹಾಕಬೇಕು. ರಾಜ್ಯದಲ್ಲಿ ಎಸ್ಸಿ, ಎಸ್‌ಟಿ ಸಮುದಾಯಕ್ಕಿಂತ ಹೀನಾಯ ಸ್ಥಿತಿಯಲ್ಲಿದ್ದೇವೆ. ಇಲ್ಲಿಯವರೆಗೆ ರಾಜ್ಯದ ಯಾವೊಬ್ಬ ಶಾಸಕನೂ ಕೂಡ ಹಡಪದ ಸಮುದಾಯಕ್ಕೆ ಸೌಲಭ್ಯಗಳನ್ನು ಕೊಡಲು ಮುಂದೆ ಬಂದಿಲ್ಲ. ರಾಜ್ಯದಲ್ಲಿ ಹಡಪದ ಸಂಘಟನೆಯ ಜಿಲ್ಲಾಧ್ಯ್ಷರಾಗಿ ಯಾರು ಆಯ್ಕೆ ಆಗುತ್ತಾರೋ ಅವರು ನೇರವಾಗಿ ಸರ್ಕಾರದೊಂದಿಗೆ ಗುದ್ದಾಡಿ ಸೌಲತ್ತು ಹಾಗೂ ಮೀಸಲಾತಿಯನ್ನು ಪಡೆಯಬೇಕು ಎಂದು ತಿಳಿಸಿದರು.

ಗ್ಯಾರಂಟಿಗಳಿಗೆ ಖರ್ಚಾದ ಹಣ ಸಂಗ್ರಹಕ್ಕೆ ಮದ್ಯ ಮಾರಾಟದ ಪಂಚಸೂತ್ರ ಸಿದ್ಧಪಡಿಸಿದ ಸರ್ಕಾರ!

ಎಲ್ಲ ಪದಾಧಿಕಾರಿಗಳು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು. ನಾವೆಲ್ಲರೂ ಲಿಂಗಾಯತರು ಎಂದು ಹೇಳಿ ಹಣೆಪಟ್ಟಿ ಕಟ್ಟಿದ್ದಾರೆ. ನಮಗೆ ಬಸವಣ್ಣ ಕಟ್ಟಿದ ಇಷ್ಟಲಿಂಗದಿಂದ ಲಿಂಗಾಯತರು ಆಗಿದ್ದೇವೆ. ಆದರೆ, ನಾವು ಬೌದ್ಧ ಧರ್ಮ ಸ್ವೀಕಾರ ಮಾಡಿಬಿಡಬೇಕೆಂಬ ನಿರ್ಧಾರದ ಬಗ್ಗೆಯೂ ಮಾತನಾಡಿದ್ದೇನೆ. ಬಸವಲಿಂಗ ಪಟ್ಟದ್ದೇವರು ಸೇರಿದಂತೆ ಅನೇಕರ ನಡುವೆ ಈ ಮಾತನ್ನು ಹೇಳಿದ್ದೇನೆ. ನೀವು ನನ್ನೊಂದಿಗೆ ಇರಿ ಅಥವಾ ನೀವು ಹೋರಾಟಕ್ಕಿಳಿದರೆ ನಾನು ನಿಮ್ಮೊಂದಿಗೆ ಇರುತ್ತೇನೆ. ನಮ್ಮ ಮಕ್ಕಳು 3ಬಿಯಲ್ಲಿದ್ದಾರೆ. ಹಡಪದ ಸಮುದಾಯದ ಮಕ್ಕಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದೀರಿ, ನಿಮಗೆ ವಿದ್ಯಾರ್ಥಿವೇತನ ಅಥವಾ ಇತರೆ ಸೌಲಭ್ಯಗಳನ್ನು ಕೊಡಲು ಸಾಧಯವಿಲ್ಲ ಎಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

click me!