
ಬೆಂಗಳೂರು (ಅ.03): ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳನ್ನು ಘೋಷಣೆ ಜಾರಿ ಮಾಡುತ್ತಿರುವ ರಾಜ್ಯ ಸರ್ಕಾರ ಆದಾಯದ ಮೂಲಕ್ಕೆ ಪರದಾಡುವ ಸ್ಥಿತಿ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಪ್ರಮಾಣ ಹೆಚ್ಚಳಕ್ಕೆ ಮೇಲಿಂದ ಮೇಲೆ ಸಭೆಯನ್ನು ಮಾಡಿ ಒತ್ತಡ ಹಾಕಲಾಗುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿಗೊಂದರಂತೆ ಸೇರಿ ನಗರ ಪಟ್ಟಣಗಳಲ್ಲಿ 1,000 ಹೊಸ ಮದ್ಯದಂಗಡಿ ತೆರೆಯಲು ಚಿಂತನೆ ಮಾಡಲಾಗುತ್ತು. ಆದರೆ, ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರ ಹೊಸ ಪ್ಲ್ಯಾನ್ ಮಾಡಿಕೊಂಡಿದ್ದು, ಈವರೆಗೆ ಸ್ಥಗಿತಗೊಂಡಿರುವ ಎಲ್ಲ ಸನ್ನದುಗಳು, ರಿನಿವಲ್ ಆಗದ ಸನ್ನದುಗಳ ಹರಾಜು ಹಾಗೂ ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಶಾಪಿಂಗ್ ಮಾಲ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಮುಂದಾಗಿದೆ.
ಹೌದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನು ಕೊಟ್ಟ ಕಾಂಗ್ರೆಸ್‌ಗೆ ಭಾರಿ ಬಹುಮತ ಸಿಕ್ಕಿದ್ದು, ಇದೇ ಖುಷಿಯಲ್ಲಿ ಸರ್ಕಾರವೂ ಕೂಡ 4 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇದಕ್ಕಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ. ಹೀಗಾಗಿ, ರಾಜ್ಯಕ್ಕೆ ಆದಾಯ ತಂದುಕೊಡುವ ಎಲ್ಲ ಇಲಾಖೆಗಳ ಸಭೆ ಮಾಡಿ ಹೆಚ್ಚುವರಿ ಆದಾಯ ಸಂಗ್ರಹಣೆಗೆ ಗುರಿ ನೀಡಲಾಗಿದೆ. ಇದರಲ್ಲಿ ಕಂದಾಯ ಇಲಾಖೆ, ಅಬಕಾರಿ ಇಲಾಖೆ, ಪ್ರವಾಸೋದ್ಯಮ, ಸಾರಿಗೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಭರ್ಜರಿ ಟಾಸ್ಕ್ ನೀಡಲಾಗಿದೆ.
ವೀರಶೈವ ಲಿಂಗಾಯತರಿಗೆ ಬಂಪರ್ ಗಿಫ್ಟ್: ಶೈಕ್ಷಣಿಕ, ಸ್ವಯಂ ಉದ್ಯೋಗ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ
ಇನ್ನು ರಾಜ್ಯದಲ್ಲಿ 12,500ಕ್ಕೂ ಹೆಚ್ಚು ಮದ್ಯ ಮಾರಾಟ ಅಂಗಡಿಗಳಿದ್ದು, 2023-24ನೇ ಆರ್ಥಿಕ ಸಾಲಿನ ಸೆಪ್ಟಂಬರ್ ತಿಂಗಳ ಅಂತ್ಯಕ್ಕೆ ಬರೋಬ್ಬರಿ 1,000 ಕೋಟಿ ರೂ. ಆದಾಯ ಗಳಿಸಲಾಗಿದೆ. ಆದರೆ, ಈ ಆದಾಯವು ಸರ್ಕಾರಕ್ಕೆ ಸಾಲುತ್ತಿಲ್ಲ. ಆದ್ದರಿಂದ ಮದ್ಯ ಮಾರಾಟ ಪ್ರಮಾಣವನ್ನು ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ಮದ್ಯ ಮಾರಾಟ ಅಂಗಡಿಗಳನ್ನು ತೆರೆಯಲು ಚಿಂತನೆ ಮಾಡಲಾಗಿತ್ತು. ಆದರೆ, ಇದಕ್ಕೆ ರಾಜ್ಯದ ಜನತೆ ಹಾಗೂ ಸ್ವತಃ ಸ್ವಪಕ್ಷೀಯ ಕಾಂಗ್ರೆಸ್ ಶಾಸಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಈಗ ರಾಜ್ಯ ಸರ್ಕಾರ ಮದ್ಯ ಮಾರಾಟವನ್ನು ಮತ್ತೊಂದು ಮಾರ್ಗದಲ್ಲಿ ಮಾರಾಟ ಮಾಡಲು ಯೋಜನೆ ರೂಪಿಸಿಕೊಂಡಿದೆ.
ಸರ್ಕಾರದ ಆದಾಯ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಮುಂದಿರುವ ಪ್ರಸ್ತಾವನೆಗಳು ಇಲ್ಲಿವೆ ನೋಡಿ...
ರಾಜ್ಯದಲ್ಲಿ ಪ್ರಸ್ತುತ ಸ್ಥಗಿತಗೊಂಡಿರುವ ಸನ್ನದುಗಳನ್ನು ಬಹಿರಂಗ ಹರಾಜು ಹಾಕುವುದು.
ಎಂಎಸ್‌ಐಎಲ್ ಸಂಸ್ಥೆಗೆ ಮಂಜೂರಾತಿಗಾಗಿ ಬಾಕಿ ಇರುವ 379 ಸನ್ನದುಗಳನ್ನು ಹರಾಜು ಹಾಕುವುದು.
ಸ್ಥಗಿತಗೊಂಡಿರುವ ಸನ್ನದುಗಳನ್ನು ನವೀಕರಣ (Renewal) ಮಾಡದಿದ್ದರೆ ಹರಾಜು ಹಾಕುವುದು.
ಮಹಾನಗರ ಪಾಲಿಕೆ ಮತ್ತು ಪ್ರವಾಸೋದ್ಯಮ ನಿಗಮದಿಂದ ಅನುಮೋದನೆ ಪಡೆದ ರೆಸ್ಟೋರೆಂಟ್‌ಗಳಿಗೆ ಸನ್ನದು ನೀಡುವುದು.
ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ಸಿಎಲ್-2ಎ ಎಂದು ಹೊಸ ಸನ್ನದು ಮಂಜೂರು ಮಾಡುವುದು.
ಅಬಕಾರಿ ಸುಂಕವನ್ನು ಹೆಚ್ಚಿಸಿರುವುದರಿಂದ 2,750 ಕೋಟಿ ರೂ. ರಾಜಸ್ವ ನಿರೀಕ್ಷಿಸಲಾಗಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ತಪ್ಪಿಸಲು, ಮಂಡ್ಯದಲ್ಲಿ ಹೆದ್ದಾರಿ ಸಿಬ್ಬಂದಿ ಮೇಲೆ ಹಲ್ಲೆ
ಅಬಕಾರಿ ಇಲಾಖೆಯ ಆರ್ಥಿಕ ಪ್ರಗತಿ
2023-24 ನೇ ಸಾಲಿನ ಆರ್ಥಿಕ ಗುರಿ- 36,000 ಕೋಟಿ ರೂ.
2023-24 ನೇ ಸಾಲಿನಲ್ಲಿ ಸಪ್ಟೆಂಬರ್ 12 ಕ್ಕೆ ಕೊನೆಗೊಂಡಂತೆ-15,122 ಕೋಟಿ ರೂ.
ಆಯವ್ಯಯದ ನಿಗದಿತ ಗುರಿಯಲ್ಲಿ ಸಾಧನೆ ಆಗಿರುವುದು- 42.01%
2022-23 ನೇ ಸಾಲಿನಲ್ಲಿ ಇದೇ ಅವಧಿಯವರೆಗಿನ ಸಾಧನೆ- 13,256 ಕೋಟಿ ರೂ.
ಕಳೆದ ಸಾಲಿಗೆ ಹೋಲಿಸಿದರೆ ಸಾಧಿಸಿದ ಹೆಚ್ಚಿನ ರಾಜಸ್ವ- 1,866 ಕೋಟಿ ರೂ.
2023-24ನೇ ಸಾಲಿನ ಶೇಕಡಾವಾರು ಬೆಳವಣಿಗೆ- 14.08 %
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ