ಜೈಲಲ್ಲಿ ಅಧಿಕಾರಿಗಳಿಂದಲೇ ಗನ್‌, ಗಾಂಜಾ ಸಪ್ಲೈ?

By Kannadaprabha News  |  First Published Aug 21, 2024, 7:48 AM IST

ಆರೋಪ ಕೇಳಿ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಜೈಲಿನಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆ ಯಾಗುತ್ತಿರುವ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ.


ಬೆಂಗಳೂರು(ಆ.21):  ರಾಜ್ಯದಲ್ಲಿ ಕಾರಾಗೃಹದ ಒಳಗಡೆಗೆ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆಯಾಗುತ್ತಿದೆ ಮತ್ತು ಹಣ ವಸೂಲಾತಿಗೆ ಜೈಲು ಅಧಿಕಾರಿಗಳೇ ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆಂದು ಅರ್ಜಿದಾರ ಪರ ವಕೀಲರು ಹೈಕೋರ್ಟ್‌ ಮುಂದೆ ಗಂಭೀರವಾದ ಆರೋಪ ಮಾಡಿದ ಘಟನೆ ನಡೆದಿದೆ. ಈ ಆರೋಪ ಕೇಳಿ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಜೈಲಿನಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆ ಯಾಗುತ್ತಿರುವ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬರಿಗೆ ಮನೆ ಊಟ ಪೂರೈಸಲು ಅನುಮತಿ ನೀಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಬೇಕು ಎಂದು ಕೈದಿಯ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರ ಪರ ವಕೀಲ ಸಿರಾಜುದ್ದೀನ್‌ ಅಹ್ಮದ್‌ ಹಾಜರಾಗಿ, ತಮ್ಮ ಕಕ್ಷಿದಾರನ ಅಳಿಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಅವರಿಗೆ ಮನೆ ಊಟ ಪೂರೈಸಲು ಅನುಮತಿ ನೀಡಲು ಕೋರಿ ಜೈಲು ಅಧೀಕ್ಷಕರು, ಕಾರಾಗೃಹ ಇಲಾಖೆಯ ಡಿಜಿಪಿಗೆ ಮನವಿ ಮಾಡಲಾಗಿದೆ. ಆದರೆ, ಮನೆ ಊಟ ಸರಬರಾಜು ಮಾಡಲು ಅನುಮತಿ ನೀಡಿದರೆ, ಜೈಲಿನ ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಲಾಗುತ್ತಿದೆ. ಬಳ್ಳಾರಿ, ಬೆಳಗಾಂ, ಚಿತ್ರದುರ್ಗದ ಜೈಲಿನಲ್ಲಿ ಕೈದಿಗಳಿಗೆ ಮನೆ ಊಟ ಸರಬರಾಜು ಮಾಡಲು ಅನುಮತಿ ನೀಡಲಾಗುತ್ತಿದೆ . ಆದರೆ, ಬೆಂಗಳೂರು ಜೈಲಿನಲ್ಲಿ ಬಿಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Tap to resize

Latest Videos

ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ 'ಕಚ್ಚೆ' ಹರಿದುಕೊಂಡು ಪರದಾಡಿದ ಗಾಂಜಾ ವ್ಯಸನಿ!

ಅಷ್ಟಕ್ಕೆ ನಿಲ್ಲದೆ, ರಾಜ್ಯದ ಜೈಲುವೊಂದರ ಒಳಗಡೆಗೆ ನಿಷೇಧಿತ ವಸ್ತುಗಳು ಪೂರೈಕೆ ಮಾಡಲಾಗುತ್ತಿದೆ ಎಂದಾಗ ನ್ಯಾಯಮೂರ್ತಿಗಳು ನಿಷೇಧಿತ ವಸ್ತುಗಳು ಅಂದರೆ ಯಾವುವು ಎಂದು ಕೇಳಿದರು. ಸಿರಾಜುದ್ದೀನ್‌ ಅಹ್ಮದ್‌ ಉತ್ತರಿಸಿ, ಮೊಬೈಲ್‌, ಗಾಂಜಾ, ಗನ್‌ ಮತ್ತು ಬುಲೆಟ್‌ ಅನ್ನು ಜೈಲಿನ ಒಳಗಡೆಗೆ ಜೈಲು ಅಧಿಕಾರಿಗಳೇ ಪೂರೈಸುತ್ತಿದ್ದಾರೆ. ಆ ಕುರಿತು ಬೇರೊಂದು ಜೈಲಿನಲ್ಲಿರುವ ಕೈದಿಯೊಬ್ಬರು ತನ್ನ ಪತ್ನಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಕೈದಿಯ ಪತ್ನಿಯು ಕಾರಾಗೃಹ ಡಿಜಿಪಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ. ಇದರಿಂದ ಕೈದಿಯನ್ನು ಏಕಾಂತ ಸೆರೆಮನೆ ವಾಸಕ್ಕೆ ದೂಡಲಾಗಿದೆ. ಇದಲ್ಲದೇ ಕಾರಾಗೃಹದ ಜೈಲರ್ ಒಬ್ಬರು ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಂತರ ರಾಜ್ಯ ಸರ್ಕಾರಿ ಅಭಿಯೋಜಕರಿಗೆ ಎಸ್‌ಪಿಪಿ ಅವರೇ ಏನಿದು ಕಾರಾಗೃಹದಲ್ಲಿ ಹಳೆಯಕಾಲದ ಸಮಸ್ಯೆಗಳು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಹುಬ್ಬಳ್ಳಿ: ಪೊಲೀಸ್‌ ಮೇಲೆ ಹಲ್ಲೆಗೆ ಯತ್ನ, ಗಾಂಜಾ ಆರೋಪಿಗಳ ಬಂಧನ

ಅದಕ್ಕೆ ಅರ್ಜಿದಾರರ ಪರ ವಕೀಲರು, ಇದು ಸಂಪ್ರದಾಯಿಕ ಸಮಸ್ಯೆಗಳು ಎಂದರಲ್ಲದೆ, ಪ್ರಕರಣದ ಕುರಿತು ಹೆಚ್ಚಿನ ವಿವರ ನ್ಯಾಯಪೀಠಕ್ಕೆ ನೀಡಲು ಮುಂದಾದರು. ಆದರೆ. ನಿಮ್ಮ ಅರ್ಜಿ ವಿಚಾರಣೆಗೆ ಬಂದ ದಿನದಂದು ವಾದ ಮಂಡಿಸಿ. ಈಗ ಬೇಡ ಎಂದು ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿದರು.

ನಂತರ ವಕೀಲ ಸಿರಾಜುದ್ದಿನ್‌ ಅಹ್ಮದ್‌ ಆರೋಪಿಸಿರುವಂತೆ ಕಾರಾಗೃಹದಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ವಿಚಾರಣೆಗೆ ಹಾಜರಿದ್ದ ರಾಜ್ಯ ಸರ್ಕಾರಿ ಅಭಿಯೋಜಕರಿಗೆ ನ್ಯಾಯಮೂರ್ತಿಗಳು ಸೂಚಿಸಿದರು. ಜೊತೆಗೆ, ಸಿರಾಜುದ್ದಿನ್‌ ಅಹ್ಮದ್‌ ವಕಾಲತ್ತು ವಹಿಸಿರುವ ಅರ್ಜಿಯ ವಿಚಾರಣೆಯನ್ನು ಸೆ.5ಕ್ಕೆ ನಿಗದಿಪಡಿಸಿ ಆದೇಶಿಸಿದರು.

click me!