ಬೆಂಗಳೂರು (ಮೇ.31): ಈ ಹಿಂದೆ ಸಾಂಕ್ರಾಮಿಕ ಕಾಯಿಲೆಗಳಾದ ಪೋಲಿಯೋ, ಹೆಪಟೈಟಿಸ್ ಬಿ ಮುಂತಾದವು ಬಂದಾಗ ಅದಕ್ಕೆ ಲಸಿಕೆ ಕಂಡುಹಿಡಿದು ಎಲ್ಲರಿಗೂ ಲಸಿಕೆ ನೀಡುವಾಗ 15 ರಿಂದ 20 ವರ್ಷವಾಗಿತ್ತು. ಆದರೆ ಕೋವಿಡ್‌ಗೆ ಒಂದೇ ವರ್ಷದಲ್ಲಿ ದೇಶದ 130 ಕೋಟಿ ಜನರಿಗೆ ಲಸಿಕೆ ನೀಡಬೇಕು ಎಂದು ಸರ್ಕಾರ ಪಣ ತೊಟ್ಟಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಭಾನುವಾರ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಆಯೋಜಿಸಿದ್ದ ‘ಬೆಂಗಳೂರು ಫೈಟ್ಸ್ ಕೊರೋನಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
undefined
ಜಗತ್ತಿನ ಎಲ್ಲ ಭಾಗದಲ್ಲಿಯೂ ಹೆಚ್ಚು ಹೆಚ್ಚು ಜನ ಲಸಿಕೆ ಪಡೆದಾಗ ಮಾತ್ರ ನಾವು ಕೋವಿಡ್ ಅನ್ನು ಜಯಿಸಬಹುದು. ಎಲ್ಲರೂ ಲಸಿಕೆ ಪಡೆಯದೇ ಕೋವಿಡ್‌ನಿಂದ ಜಗತ್ತು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಭಾರತದಲ್ಲಿ ಆಮ್ಲಜನಕ, ಹಾಸಿಗೆ ಸಮಸ್ಯೆಗಳು ಕೊನೆಗೊಂಡಿದ್ದು, ಇದೀಗ ಲಸಿಕೆ ಅಭಿಯಾನ, ಸಮುದಾಯ ಪ್ರತಿರೋಧ ಶಕ್ತಿ ಮೂಡಿಸುವತ್ತ ಸರ್ಕಾರ ಗಮನ ಹರಿಸಿದೆ. ಮುಂದೆ ಬರಬಹುದಾದ ಕೋವಿಡ್ ಅಲೆಗಳಿಂದ ಲಸಿಕೆಯ ಮೂಲಕ ರಕ್ಷಣೆ ಪಡೆಯುವ ಉದ್ದೇಶ ನಮ್ಮದು ಎಂದು ಹೇಳಿದರು.
ದೇಶದಲ್ಲಿ ಲಸಿಕೆ ಅಭಿಯಾನ; ಭಾರತ ಸೋಲ್ತಾ, ಗೆಲ್ತಾ? .
Thank You Dr & for interacting with to discuss challenges and step up our collective efforts against in the webinar organised by pic.twitter.com/Fbt5cn6DcV
— NBF (@Namma_Bengaluru)ಮೊದಲ ಅಲೆಯ ವೇಳೆ ಸೆಪ್ಟೆಂಬರ್‌ನಲ್ಲಿ ಗರಿಷ್ಠ ಎಂದರೆ ದಿನಕ್ಕೆ ಒಂದು ಲಕ್ಷ ಪ್ರಕರಣ ದೇಶದಲ್ಲಿ ವರದಿಯಾಗುತ್ತಿತ್ತು. ನಂತರ ಜನವರಿ, ಫೆಬ್ರವರಿ ಹೊತ್ತಿಗೆ ಭಾರತ ಕೋವಿಡ್ ಜಯಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಏಪ್ರಿಲ್‌ನಲ್ಲಿ ನಾಟಕೀಯ ರೀತಿಯಲ್ಲಿ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಇದರಿಂದಾಗಿ ಹಾಸಿಗೆ, ಆಮ್ಲಜನಕಕ್ಕೆ ಪರದಾಡುವ ಸ್ಥಿತಿ ಬಂದಿತ್ತು ಎಂದರು.
ಲಸಿಕೆ ಅಭಿಯಾನಕ್ಕೆ ಚುರುಕು-ಸುಧಾಕರ್: ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್, ಈ ವರ್ಷದ ಡಿಸೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಕೋವಿಡ್ ಲಸಿಕೆಯ ಎರಡು ಡೋಸ್ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಲಸಿಕಾ ಅಭಿಯಾನವನ್ನು ಇನಷ್ಟುವ್ಯಾಪಕಗೊಳಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಕೋವಿಡ್ ಅಲೆಯನ್ನು ತಪ್ಪಿಸುವಲ್ಲಿ ಸಮುದಾಯದ ಪಾತ್ರ ಮಹತ್ವದ್ದು. ಲಸಿಕೆ ಅಭಿಯಾನದಲ್ಲಿ ಪಾಲ್ಗೊಳ್ಳುವುದರ ಜೊತೆ ಜೊತೆಗೆ ಕೋವಿಡ್ ತಡೆಯುವ ಶಿಷ್ಟಾಚಾರಗಳನ್ನು ಸದಾ ಪಾಲಿಸಬೇಕು. ಸಮುದಾಯದ ಸಹಕಾರ ಇಲ್ಲದಿದ್ದರೆ ಕೋವಿಡ್ ವಿರುದ್ಧದ ಹೋರಾಟ ಯಶಸ್ವಿ ಆಗುವುದಿಲ್ಲ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಆರ್ಥಿಕತೆಗೆ ಏಟು ಬೀಳುವಂತಾಗಬಾರದು ಎಂದು ಅಭಿಪ್ರಾಯಪಟ್ಟರು.