
ಬೆಂಗಳೂರು (ಜೂ.13) ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಆಡಳಿತಕ್ಕೆ ಚುರುಕುಮುಟ್ಟಿಸಲು ಇಂದು ಮಹತ್ವದ ಸಭೆ ನಡೆಸಿದ್ದಾರೆ. ಎಲ್ಲಾ ಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸಿದ ಡಿಕೆ ಶಿವಕುಮಾರ್ ಹಲವು ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಎಲ್ಲಾ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ. ಇದೇ ವೇಳೆ ಗೃಹಜ್ಯೋತಿ ಯೋಜನೆಯಲ್ಲಿ 100 ಕೋಟಿ ಹಣ ಮೃತಪಟ್ಟವರಿಗೆ ಹೋಗಿದೆ. ಹೀಗಾಗಿ ಮರು ಅರ್ಜಿ ಸಲ್ಲಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪರಮೇಶ್ವರ್ ಆರೋಗ್ಯ ಸರಿ ಇಲ್ಲದ ಕಾರಣ ಸಭೆಗೆ ಹಾಜರಾಗಿಲ್ಲ. ಉಳಿದಂತೆ ಎಲ್ಲಾ ಸಚಿವರು ಪಾಲ್ಗೊಂಡಿದ್ದಾರೆ. ಸುಮಾರು 7 ಗಂಟೆಗಳ ಕಾಲ ಸಭೆ ನಡೆದಿದೆ. DC, CEO, DFO ಸೇರಿದಂತೆ ಹಿರಿಯ ಅಧಿಕಾರಿಗಳ ಮೊದಲ ಸಭೆ ಮಾಡಿದ್ದೇವೆ. ನಮ್ಮೆಲರದ್ದು ಒಂದೇ ತಂಡ,ಟೀಂ ಕರ್ನಾಟಕ ಆಗಿ ಕೆಲಸ ಮಾಡೋಣ ಎಂದಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಾರ್ವಜನಿಕರು ಯಾರೇ ಆದ್ರು ಸಮಸ್ಯೆಗಳಿದ್ರೆ ಮಾತ್ರ ನಮ್ಮ ಬಳಿ ಬರ್ತಾರೆ. ಇಲ್ಲ ಅಂದ್ರೆ ಯಾರು ಸರ್ಕಾರಿ ಆಫೀಸ್ ಗೆ ಬರಲ್ಲ. ಬಂದವರಿಗೆ ಸ್ಪಂಧಿಸಿ, ಪಾಸಿಟಿವ್ ಆಗಿ ಸಮಸ್ಯೆ ಬಗೆ ಹರಿಸುವಂತೆ ತಿಳಿಸಿದ್ದೇನೆ. ಎಲ್ಲ ಅಧಿಕಾರಿಗಳು ಬೆಳಿಗ್ಗೆ 10 ಗಂಟೆ ಹಾಜರ್ ಇರಬೇಕು. ಹಾಜರ್ ಆದ ತಕ್ಷಣ ಜಿಪಿಎಸ್ ಮೂಲಕ ಆಟೆಂಡ್ ಆಗಬೇಕು. ಅವರ ಮನೆ ಆಡ್ರೆಸ್, ಪೋನ್ ನಂಬರ್ ಎಲ್ಲವೂ ಹೆಡ್ ಕ್ವಾರ್ಟರ್ಸ್ ನಲ್ಲಿ ಇರಬೇಕು ಎಂದು ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಶೈಕ್ಷಣಿಕ ವರ್ಷ ಶುರುವಾಗಿದೆ. ವಿದ್ಯಾರ್ಥಿಗಳ ಸಮವಸ್ತ್ರ, ಪಠ್ಯ ಪುಸ್ತಕ ಎಲ್ಲವೂ ಒಂದು ತಿಂಗಳಲ್ಲಿ ತಲುಪಿಸುವ ಕೆಲಸ ಆಗುತ್ತೆ. ಶಿಕ್ಷಕರ ಒತ್ತಾಯಕ್ಕೆ ಕೆಲಸವರು ಸ್ಕೂಲ್ ಗಳಲ್ಲಿ ಒಂದೊ ಎರಡೋ ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ. ಆ ಮಾಹಿತಿ ನಮ್ಮ ಬಳಿ ಇದೆ, ಇದ್ರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಕ್ರಮಕೈಗೊಳ್ಳುತ್ತೇವೆ.
100 ಕೋಟಿ ಹಣವನ್ನ ಮರಣ ಹೊಂದಿದವರ ಖಾತೆಗ ಹೋಗಿದೆ. ಹೀಗಾಗಿ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಕೊಡಬೇಕಾಗುತ್ತೆ. ಯಾವ ಬ್ಯಾಂಕ್ ನಲ್ಲಿ ತೆಗೆದುಕೊಳ್ಳುತ್ತಿದ್ದಾರೆ, ಯಾವುದಾದ್ರೂ ಸ್ಕೀಮ್ ಗೆ ಹೋಗ್ತಿದಿಯಾ ಎಂಬ ಮಾಹಿತಿ ಬೇಕು. 1 ಲಕ್ಷ 64 ಸಾವಿರ ಜನರಿಗೆ ಗೃಹಜ್ಯೋತಿ ತೆಗೆದುಕೊಳ್ಳುತ್ತಿದ್ದಾರೆ. ಮತ್ತೆ ಅವರು ಅರ್ಜಿ ಸಲ್ಲಿಸಬೇಕು. ಅವರೆಲ್ಲರಿಗೂ ಗುರುತಿನ ಚೀಟಿ ಕೊಡುತ್ತೇವೆ. ನಾವು ವಾಸಕ್ಕೆ ಮಾತ್ರ ಗೃಹಜ್ಯೋತಿ ಕೊಡುತ್ತಿದ್ದೇವೆ. ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇನ್ನು ಕೆಲವೇ ದಿನದಲ್ಲಿ ಅರ್ಜಿ ಕೊಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೀಟರ್ ರಿಡರ್ಸ್, ಪಿಡಿಓಗಳು ಅಪ್ಲಿಕೇಶನ್, ದಾಖಲೆಗಳು ಹಾಗೂ ಪೋಟೋ ತೆಗೆದುಕೊಂಡು ಬರಬೇಕು ಎಂದಿದ್ದಾರೆ.
SIR ಪ್ರಾರಂಭವಾಗುತ್ತಿದೆ, ಎಲ್ಲ ಜಿಲ್ಲಾ ಉಸ್ತುವಾರಿಗಳು ಹಾಗೂ DC ಗಳು ಜಿಲ್ಲೆಗೆ ಭೇಟಿಯಾಗಬೇಕು. ಮತದಾರರನ್ನ ಭೇಟಿಯಾಗಿ ಮತದಾನದ ಹಕ್ಕು ಕೊಡಿಸುವ ಕೆಲಸ ಮಾಡಬೇಕು. ಯಾವುದೇ ಮತದಾರರು ಡಿಕೆಶಿವಕುಮಾರ್ ಸೇರಿದಂತೆ ಎಲ್ಲ BLO ಕೊಡುವ ಅರ್ಜಿಯನ್ನ ಭರ್ತಿ ಮಾಡಿ ಕೊಡಬೇಕು. 3 ಬಾರಿ ಮನೆಗೆ ಬರ್ತಾರೆ ಅವರು ಇಲ್ಲ ಅಂದ್ರೆ ನೋಟೀಸ್ ಬೋರ್ಡ್ ಗೆ ಹಾಕುವ ಕೆಲಸ ಮಾಡ್ತಾರೆ. ಎಲ್ಲರೂ ರೆಸಿಡೆನ್ಸಿಯಲ್ ಸರ್ಟಿಫಿಕೇಟ್ ಕೊಡಲು ತಿಳಿಸಿದ್ದೇನೆ. ನಿಮಗೆ ಮತದಾನದ ಹಕ್ಕು ಇಲ್ಲ ಅಂದ್ರೆ ಸರ್ಕಾರ ಸೌಲಭ್ಯ ತೆಗದುಕೊಳ್ಳಲು ಕಷ್ಟ ಆಗುತ್ತೆ. ಆದ್ರಿಂದ ವೋಟು ಇಟ್ಟುಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹೊಸ CSR ಪಾಲಿಸಿ ತರುತ್ತಿದ್ದೇವೆ. 2% CSR ಗೆ ಖರ್ಚು ಮಾಡಬೇಕು ಅಂತ ಇದೆ. ಆದ್ರಲ್ಲೂ ಶಾಲೆಗಳಿಗೆ CSR ಫಂಡ್ ಬಳಕೆ ಮಾಡಬೇಕು. ಜನ ನಗರಕ್ಕೆ ಬರೋದನ್ನ ತಪ್ಪಿಸಬೇಕು. ಹಳ್ಳಿಗಳಲ್ಲೇ ಅಭಿವೃದ್ಧಿ ಆಗಬೇಕು. ನಮ್ಮ ಜಿಲ್ಲೆಯಲ್ಲಿ 20 ಶಾಲೆಗಳಿಗೆ CSD ಫಂಡ್ ನಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಖಾಸಗಿ ಶಾಲೆಯಲ್ಲಿ ಯಾವ ರೀತಿ ಓದುತ್ತಾರೆ ಮಕ್ಕಳು ಆ ರೀತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದಾಬೇಕು. ಇನ್ನು 2-3 ದಿನದಲ್ಲಿ ಪಾಲಿಸಿ ಮಾಡುತ್ತಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ