ಪರಿಶಿಷ್ಟ ಸಮುದಾಯಕ್ಕೆ ಉಚಿತ ವಿದ್ಯುತ್‌ ರದ್ದುಗೊಳಿಸಿಲ್ಲ: ಸಚಿವ ಸುನೀಲ್‌

By Govindaraj SFirst Published Sep 6, 2022, 4:00 AM IST
Highlights

ಪರಿಶಿಷ್ಟ ಸಮುದಾಯಕ್ಕೆ ಮಾಸಿಕ 75 ಯೂನಿಟ್‌ ನೀಡುವ ಯೋಜನೆಯನ್ನು ರದ್ದುಗೊಳಿಸಿಲ್ಲ, ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಮಾನದಂಡಗಳನ್ನು ಸರಳೀಕರಣಗೊಳಿಸಲು ಆದೇಶ ಹಿಂಪಡೆಯಲಾಗಿದೆ ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಸೆ.06): ಪರಿಶಿಷ್ಟ ಸಮುದಾಯಕ್ಕೆ ಮಾಸಿಕ 75 ಯೂನಿಟ್‌ ನೀಡುವ ಯೋಜನೆಯನ್ನು ರದ್ದುಗೊಳಿಸಿಲ್ಲ, ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಮಾನದಂಡಗಳನ್ನು ಸರಳೀಕರಣಗೊಳಿಸಲು ಆದೇಶ ಹಿಂಪಡೆಯಲಾಗಿದೆ ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಟ್ವೀಟರ್‌ನಲ್ಲಿ ಸಚಿವರು ಸ್ಪಷ್ಟನೆ ನೀಡಿ, ‘ಪರಿಶಿಷ್ಟರಿಗೆ ಉಚಿತ ವಿದ್ಯುತ್‌ ನೀಡುವ ಯೋಜನೆಯ ಫಲಾನುಭವಿಗಳ ಆಯ್ಕೆಗೆ ರೂಪಿಸಲಾಗಿದ್ದ ಮಾನದಂಡಗಳನ್ನು ಸರಳಗೊಳಿಸಲು ಕಳೆದ ಆಗಸ್ಟ್‌ನಲ್ಲಿ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್‌ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಿಯಾಂಕ್‌ ಖರ್ಗೆಗೆ ತಿರುಗೇಟು: ಇದೇ ವೇಳೆ ಉಚಿತ ವಿದ್ಯುತ್‌ ಯೋಜನೆ ವಾಪಸ್‌ ಪಡೆಯಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಪ್ರಿಯಾಂಕ್‌ ಖರ್ಗೆ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ‘ನಿಮ್ಮ ಅಜ್ಞಾನ ಹಾಗೂ ಅರೆಬೆಂದ ಮಾಹಿತಿ ಸಂಗ್ರಹಣೆ ಬಗ್ಗೆ ಅನುಕಂಪವಿದೆ. ಸುಳ್ಳು ಮಾಹಿತಿಯ ಮೂಲಕ ಸಾರ್ವಜನಿಕರ ದಾರಿ ತಪ್ಪಿಸುವುದಕ್ಕಾಗಿ ನಿಮಗೆ ಕಾಂಗ್ರೆಸ್‌ ಸಂವಹನ ಘಟಕದ ಜವಾಬ್ದಾರಿ ನೀಡಲಾಗಿದೆಯೇ, ಸುಳ್ಳಿನ ಮೂಲಕ ಐಕ್ಯತೆ ಸ್ಥಾಪಿಸುವ ಭ್ರಮೆ ಬೇಡ’ ಎಂದು ಸಚಿವ ಸುನೀಲ್‌ಕುಮಾರ್‌ ತಿರುಗೇಟು ನೀಡಿದ್ದಾರೆ.

ಪುನರ್‌ರಚಿತ ಟ್ರಸ್ವ್‌ ಪಟ್ಟಿಹಿಂದಕ್ಕೆ, ಸೋಮವಾರ ಹೊಸ ಪಟ್ಟಿ: ಸಚಿವ ಸುನಿಲ್‌ ಕುಮಾರ್‌

ಕಾರ್ಕಳದಲ್ಲಿ ರಾಜ್ಯದಲ್ಲೇ ಪ್ರಥಮ ಕೆಜೆಟಿಟಿಐ ಸ್ಥಾಪನೆ: ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಜರ್ಮನ್‌ ತಂತ್ರಜ್ಞಾನದ ‘ಕರ್ನಾಟಕ ಜರ್ಮನ್‌ ಟೆಕ್ನಿಕಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌’ (ಕೆ.ಜೆ.ಟಿ.ಟಿ.ಐ.)ನ್ನು ಕಾರ್ಕಳದಲ್ಲಿ ಸ್ಥಾಪಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ. ಕ್ರಿಯೆಟಿವ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಕಾನಂಗಿಯ ರಾಜಾಂಗಣದಲ್ಲಿ ನಡೆದ ಕ್ರಿಯೇಟಿವ್‌ ಗುರುದೇವೋ ಭವ ಹಾಗೂ ನಿನಾದ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಠ್ಯ ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳನ್ನು ಉನ್ನತೀಕರಿಸಬೆಕಾಗಿದೆ .ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದ ಪರಿಕಲ್ಪನೆ ಬಿಂಬಿಸಲು ಇಂದಿನ ಯುವ ಸಮೂಹ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಕಳೆದೆರಡು ವರ್ಷಗಳಿಂದ ಉಡುಪಿ ಜಿಲ್ಲೆಯೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿರುವ ಮೂಲಕ ಬುದ್ಧಿವಂತರ ಜಿಲ್ಲೆಯಾಗಿ ಮೂಡಿ ಬಂದಿದೆ. ಶಿಕ್ಷಣದಲ್ಲಿ ಮಹತ್ತರವಾದ ಬದಲಾವಣೆಯ ಮೂಲಕ ಸರ್ಕಾರಿ ಹಾಗು ಖಾಸಗಿ ಕಾಲೇಜುಗಳು ಕೊಡುಗೆಯೂ ಹೆಚ್ಚಿದೆ ಎಂದು ಅವರು ನುಡಿದರು.

ಆರೆಸ್ಸೆಸ್‌ ಕಚೇರಿಯಲ್ಲೂ ರಾಷ್ಟ್ರಧ್ವಜ ಹಾರಿಸುತ್ತೇವೆ: ಸಚಿವ ಸುನಿಲ್‌ ಕುಮಾರ್‌

ಕ್ರಿಯೇಟಿವ್‌ ಕಾಲೇಜು ಕೇವಲ ಮೂರು ವರ್ಷಗಳ ಒಂದು ಸಾವಿರ ವಿದ್ಯಾರ್ಥಿಗಳನ್ನು ಒಂದುಗೂಡಿಸುವ ಮೂಲಕ ರಾಜ್ಯದಲ್ಲಿ ಸುದ್ದಿ ಮಾಡಿದೆ. ಕಳೆದೆರಡು ವರ್ಷಗಳಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಕಾರ್ಕಳ ತಾಲೂಕಿಗೆ ಹೆಮ್ಮೆಯ ಶಿಕ್ಷಣ ಸಂಸ್ಥೆ ಯಾಗಿ ಮೂಡಿ ಬಂದಿದೆ ಎಂದು ಸಚಿವರು ಹೇಳಿದರು. ಪ್ರಾಂಶುಪಾಲ ಗಣಪತಿ ಭಟ್‌, ಡಾ.ಗಣನಾಥ್‌ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ.ಕೆ., ವಿಮಲ್‌ ರಾಜ್‌ ಜಿ., ಗಣಪತಿ ಭಟ್‌ ಕೆ .ಎಸ್‌., ಹಿರ್ಗಾನ ಗ್ರಾ.ಪಂ. ಅಧ್ಯಕ್ಷ ಸಂತೋಷ ಶೆಟ್ಟಿಇದ್ದರು.

click me!