
ಬೆಂಗಳೂರು(ಅ.11): ಆಟೋ ಸೇವೆ ಆರಂಭಿಸಿ ನಿಯಮ ಉಲ್ಲಂಘನೆ ಮಾಡಿದ್ದ ಕುರಿತು ನೀಡಿದ್ದ ನೋಟಿಸ್‌ಗೆ ಓಲಾ, ಉಬರ್ ಕಂಪನಿಗಳು ಉತ್ತರ ನೀಡಿದ್ದು, ಕಾನೂನು ಕೋಶದ ಮೂಲಕ ಅದನ್ನು ಪರಿಶೀಲಿಸಿ ಮಂಗಳವಾರ ಮುಂದಿನ ಕಾನೂನು ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ಎಚ್‌ಎಂಟಿ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಯುಕ್ತರು, ನಾವು ಯಾವುದೇ ತಪ್ಪು ಮಾಡಿಲ್ಲ. ಹೆಚ್ಚಿನ ದರ ವಸೂಲಿ ಮಾಡಿಲ್ಲ. ಪರವಾನಗಿ ಸಂದರ್ಭದಲ್ಲಿ ತಿಳಿಸಿದಂತೆಯೇ ಗ್ರಾಹಕರಿಂದ ದರ ಪಡೆಯುತ್ತಿದ್ದೇವೆ. ಯಾವುದೇ ಕಾನೂನನ್ನು ಉಲ್ಲಂಘನೆ ಮಾಡಿಲ್ಲ. ಸಭೆ ಕರೆದರೆ ಹೆಚ್ಚಿನ ವಿವರ ನೀಡಲಾಗುವುದು ಎಂದು ಓಲಾ ಹಾಗೂ ಉಬರ್ ಕಂಪನಿಗಳು ಉತ್ತರದಲ್ಲಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಕೋಶಕ್ಕೆ ಕೋರಿದ್ದೇವೆ ಎಂದು ಹೇಳಿದರು.
Bengaluru: ನೋಟಿಸ್‌ಗೆ ಓಲಾ, ಉಬರ್, ರ್ಯಾಪಿಡೋ ಡೋಂಟ್‌ಕೇರ್
ಕಾನೂನು ಕೋಶ ಮಂಗಳವಾರ ವರದಿ ನೀಡಲಿದೆ. ಅಲ್ಲಿಯವರೆಗೂ ಓಲಾ, ಉಬರ್ ಆಟೋಗಳನ್ನು ಜಪ್ತಿ ಮಾಡುವುದಿಲ್ಲ. ಈ ಹಿಂದೆ ಆ ಕಂಪನಿಗಳು ಯಾವುದೇ ಕ್ರಮ ಜರುಗಿಸಬಾರದೆಂದು ಕೋಟ್‌ನಿಂದ ತಡೆಯಾಜ್ಞೆ ತಂದಿವೆ. ಹೀಗಾಗಿ, ಚರ್ಚಿಸಿ ಮಂಗಳವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಅನಧಿಕೃತ ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಕ್ಯಾಬ್‌ಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡದಂತೆ ರಾಜ್ಯ ಸಾರಿಗೆ ಇಲಾಖೆ ಅ.6ರಂದು ಓಲಾ, ಉಬರ್ ಹಾಗೂ ರಾರಯಪಿಡೋ ಸಂಸ್ಥೆಗಳಿಗೆ ನೋಟಿಸ್ ನೀಡಿ ಮೂರು ದಿನಗಳಲ್ಲಿ ಉತ್ತರಿಸಲು ಸೂಚಿಸಲಾಗಿತ್ತು. ಸೋಮವಾರ ಓಲಾ ಮತ್ತು ಉಬರ್ ಸಂಸ್ಥೆಗಳು ನೋಟಿಸ್‌ಗೆ ಉತ್ತರ ನೀಡಿದ್ದವು.
ಆಟೋ ಜಪ್ತಿ ಮಾಡ್ತಿಲ್ಲ:
ಎರಡೂ ಕಂಪನಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾನೂನು ಕೋಶಕ್ಕೆ ಕೋರಿದ್ದೇವೆ. ಕಾನೂನು ಕೋಶ ಮಂಗಳವಾರ ವರದಿ ನೀಡಲಿದೆ. ಅಲ್ಲಿಯವರೆಗೂ ಓಲಾ, ಉಬರ್ ಆಟೋಗಳನ್ನು ಜಪ್ತಿ ಮಾಡುವುದಿಲ್ಲ. ತಾವು ತಪ್ಪು ಮಾಡಿಲ್ಲ, ಹೆಚ್ಚಿನ ದರ ವಸೂಲಿ ಮಾಡಿಲ್ಲ ಎಂದು ಕಂಪನಿಗಳು ನೋಟಿಸ್‌ಗೆ ಉತ್ತರ ನೀಡಿವೆ ಅಂತ ಸಾರಿಗೆ ಆಯುಕ್ತ ಎಚ್‌ಎಂಟಿ ಕುಮಾರ್ ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ನಿಯಮಗಳು, ನಿರ್ಧಾರಗಳಿಗೆ ಒಪ್ಪಿಕೊಂಡ್ರೆ ಓಲಾ, ಊಬರ್ ಕಂಪನಿಗಳನ್ನ ನಡೆಸಲು ಅನುಮತಿ ನೀಡಬಹುದು. ಸಾರಿಗೆ ಅಧಿಕಾರಿಗಳ ಆದೇಶ, ನಿಯಮಗಳನ್ನ ಮೀರಿ ದರ ವಸೂಲಿ ಮುಂದುವರಿಸಿದರೆ ಸರ್ಕಾರ ಓಲಾ, ಉಬರ್ ಕಂಪನಿಗಳನ್ನ ಬ್ಯಾನ್ ಮಾಡುವ ಸಾಧ್ಯತೆ ಇದೆ. ಹಿಂದೆಯೂ ಸಾರಿಗೆ ಇಲಾಖೆ ನೋಟಿಸ್ ನೀಡಿತ್ತು.ಆಗ ನಮ್ಮ ಮೇಲೆ ಕ್ರಮ ಕೈಗೊಳ್ಳದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದ ಕಂಪನಿಗಳು. ಹೀಗಾಗಿ ಈ ಮಹತ್ವದ ಸಭೆಯಲ್ಲಿ. ಕಾನೂನು ಕೋಶದ ಅಭಿಪ್ರಾಯದ ಮೇಲೆ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ