ಮುಂದುವರೆದ ಸಿಐಡಿ ತನಿಖೆ: ಪ್ರಶ್ನೆಪತ್ರಿಕೆ-1 ರಲ್ಲಿಯೂ ಅಕ್ರಮದ ಸುಳಿವು?
ಆನಂದ್ ಎಂ. ಸೌದಿ
ಯಾದಗಿರಿ(ಅ.11): 545 ಪಿಎಸೈ ಹುದ್ದೆಗಳ ನೇಮಕ ಪರೀಕ್ಷೆಯಲ್ಲಾದ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ, ಮುಂಬರುವ ದಿನಗಳಲ್ಲಿ ಮತ್ತಷ್ಟೂ ಆರೋಪಿಗಳ ಬಂಧಿಸುವ ಹಾಗೂ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಮೂಲಗಳು 'ಕನ್ನಡಪ್ರಭ'ಕ್ಕೆ ತಿಳಿಸಿವೆ.
undefined
ಕಲಬುರಗಿಯಲ್ಲಿ ದಾಖಲಾದ ಎಂಟು ಪ್ರಕರಣಗಳ ಪೈಕಿ, ಮೂರರ ಬಗ್ಗೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ 5 ಪ್ರಕರಣಗಳು ದಾಖಲಾಗಿವೆ. 47 ಅಭ್ಯರ್ಥಿಗಳು, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿದಂತೆ ಒಟ್ಟು 99 ಜನರನ್ನು ಈವರೆಗೆ ಬಂಧಿಸಲಾಗಿದೆ. ಚಾರ್ಜ್‌ಶೀಟ್ ಸಲ್ಲಿಸಿದ್ದರೂ ಕೂಡ, ಸಿಆರ್‌ಪಿಸಿ 173 ಕ್ಲಾಸ್ 8 ರಡಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇನ್ನೂ ಹೆಚ್ಚಿನ ಶಂಕಾಸ್ಪದರನ್ನು ಬಲೆಗೆ ಬೀಸಲು ಸಿಐಡಿ ಅಧಿಕಾರಿಗಳು ಸೂಕ್ತ ಸಾಕ್ಷಿಗಳ ಕಲೆ ಹಾಕುತ್ತಿದ್ದಾರೆ.
PSI Recruitment Scam:ಪಿಎಸ್‌ಐ ಅಕ್ರಮ: ತುಮಕೂರು, ದಾವಣಗೆರೆ, ಮೂಡಬಿದಿರೆಗೂ ಲಿಂಕ್..!
ಓಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಆದರೆ, ಪ್ರಶ್ನೆಪತ್ರಿಕೆ-1 (ಪ್ರಬಂಧ ಹಾಗೂ ಭಾಷಾಂತರ ಬರಹ) ರಲ್ಲಿಯೂ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಪ್ರತಿಧ್ವನಿಸುತ್ತಿದ್ದು, ಉತ್ತರಪತ್ರಿಕೆಯಲ್ಲಿ ಅಂಕಗಳ ತಿರುಚುವಿಕೆ ಹಾಗೂ ಮೌಲ್ಯಮಾಪನದ ಬಗ್ಗೆ ಅನೇಕರು ಆಕ್ಷೇಪವೆತ್ತಿದ್ದಾರೆ. ಸಂಶಯಗಳ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಅದನ್ನೂ ಪರಿಗಣಿಸುವ ಸಾಧ್ಯತೆಯಿದೆ. ಆರೋಪಿಯೊಬ್ಬರ ಬೇಲ್ ವಿಚಾರಣೆ ವೇಳೆ, ಈ ಪರೀಕ್ಷೆಯಲ್ಲಿ ಶೇ.75 ರಷ್ಟು ಅಕ್ರಮ ನಡೆದಿದೆ ಎಂದು ಸರ್ಕಾರ ತಿಳಿಸಿತ್ತು. ಬಹುತೇಕ ಕೇಂದ್ರಗಳಲ್ಲಿ ಅಕ್ರಮ ನಡೆದಿದೆ ಎಂದು ಗೃಹಸಚಿವರು ಪ್ರತಿಕ್ರಿಯಿಸಿದ್ದರು.