ಮುಂಗಾರು ಸಿದ್ಧತೆಯಲ್ಲಿ ರಾಜ್ಯ ಸರ್ಕಾರ ವಿಫಲ: ಮಾಜಿ ಸಿಎಂ ಬೊಮ್ಮಾಯಿ

By Kannadaprabha News  |  First Published Jun 1, 2024, 6:00 AM IST

ರೈತರಿಗೆ ಬೇಕಾಗಿದ್ದನ್ನು ಬಿಟ್ಟು ಉಳಿದಿದ್ದೆಲ್ಲ ಇದೆ. ಈ ವರ್ಷ ಮಾರ್ಕೆಟಿಂಗ್ ಫೆಡರೇಷನ್‌ಗೆ ಒಂದು ನಯಾ ಪೈಸೆ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶ ಮಾಡಬೇಕು, ಫೆಡರೇಶನ್‌ಗೆ ಅನುದಾನ ಕೊಡಬೇಕು ಎಂದು ಒತ್ತಾಯಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 


ಹಾವೇರಿ(ಜೂ.01): ಉತ್ತರ ಕರ್ನಾಟಕದಲ್ಲಿ ರೈತರು ಮುಂಗಾರು ಬಿತ್ತನೆ ಆರಂಭಿಸಿದ್ದು, ಬಿತ್ತನೆ ಬೀಜ, ಗೊಬ್ಬರದ ಕೊರತೆಯಾಗಿದೆ. ಮಳೆ ಬಿದ್ರೂ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ಬೀಜದ ದರ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಮುಂಗಾರು ಸಿದ್ಧತೆಯಲ್ಲಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ, ಅನ್ನ ಭಾಗ್ಯ ಅಂತಾ ಹೇಳ್ತಾರೆ ಅನ್ನಕ್ಕೆ ಮೊದಲು ಬೇಕಾಗಿರೋದು ಬಿತ್ತನೆ ಬೀಜ. ರೈತರಿಗೆ ಏನು ಗ್ಯಾರಂಟಿ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ರೈತರಿಗೆ ಮುಖ್ಯವಾಗಿ ಬೇಕಾಗಿದ್ದ ಬಿತ್ತನೆ ಬೀಜದ ಗ್ಯಾರಂಟಿ ಇಲ್ಲ. ಹೆಕ್ಟೇರ್‌ಗೆ ೨೫ ಸಾವಿರ ಪ್ರೋತ್ಸಾಹ ಧನ ಕೊಡಬೇಕು. ಡಿಎಪಿ ಗೊಬ್ಬರದ ಅಭಾವವಿದೆ. ರೈತರಿಗೆ ಬೇಕಾಗಿದ್ದನ್ನು ಬಿಟ್ಟು ಉಳಿದಿದ್ದೆಲ್ಲ ಇದೆ. ಈ ವರ್ಷ ಮಾರ್ಕೆಟಿಂಗ್ ಫೆಡರೇಷನ್‌ಗೆ ಒಂದು ನಯಾ ಪೈಸೆ ಕೊಟ್ಟಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶ ಮಾಡಬೇಕು, ಫೆಡರೇಶನ್‌ಗೆ ಅನುದಾನ ಕೊಡಬೇಕು ಎಂದು ಒತ್ತಾಯಿಸಿದರು.

Tap to resize

Latest Videos

undefined

ಕೇರಳ, ಈಶಾನ್ಯಕ್ಕೆ ಒಟ್ಟಿಗೇ ಬಂದ ಮುಂಗಾರು: ಈ ವರ್ಷ ಮಳೆ ಹೇಗಿರಲಿದೆ?

ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರ ಕಾಲದಲ್ಲಿ ಯಾರ ಡೈರೆಕ್ಷನ್‌ನಲ್ಲಿ ಅವ್ಯವಹಾರ ಆಗಿದೆ ಎನ್ನೋದು ಮುಖ್ಯ. ಡೆತ್‌ನೋಟ್‌ನಲ್ಲಿ ಸಚಿವರ ಹೆಸರು ಹೇಳಿದ್ದಾನೆ. ಈ ಬಗ್ಗೆ ತನಿಖೆ ಆಗಲಿ, ಇದರಲ್ಲಿ ಪಾತ್ರ ಇಲ್ಲ ಅಂದ್ರೆ ಮತ್ತೆ ಸಚಿವರಾಗಲಿ, ಸಚಿವರ ತಲೆದಂಡವಾಗಬೇಕು ಎಂದು ಹೇಳಿದರು.

click me!