ಬೇಕಾಬಿಟ್ಟಿ ಕೋವಿಡ್‌ ಚಿಕಿತ್ಸಾ ದರ ವಸೂಲಿಗೆ ಸರ್ಕಾರ ಬ್ರೇಕ್‌..!

By Kannadaprabha News  |  First Published Apr 16, 2021, 12:44 PM IST

ಜೂನ್‌ನಲ್ಲಿ ನಿಗದಿ ಆಗಿದ್ದ ದರ ಮರುಜಾರಿ| ಸರ್ಕಾರದಿಂದ ಶಿಫಾರಸಾದವರಿಗೆ ಖಾಸಗಿಯಲ್ಲಿ ಗರಿಷ್ಠ 10 ಸಾವಿರ ರು.|  ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದವರಿಗೆ ಗರಿಷ್ಠ 25 ಸಾವಿರ ರು.| ದೈನಂದಿನ ದರ ನಿಗದಿ ಮಾಡಿ ಸರ್ಕಾರ ಆದೇಶ| 


ಬೆಂಗಳೂರು(ಏ.16): ಕೊರೋನಾ ಸೋಂಕಿತರ ಚಿಕಿತ್ಸೆಯ ಹೆಸರಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದವು ಎನ್ನಲಾದ ಖಾಸಗಿ ಆಸ್ಪತ್ರೆಗಳ ದುರಾಸೆಗೆ ರಾಜ್ಯ ಸರ್ಕಾರ ಮತ್ತೆ ಬ್ರೇಕ್‌ ಹಾಕಿದೆ. ಸರ್ಕಾರದಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಆಗಿರುವ ರೋಗಿಗಳಿಗೆ ದಿನಕ್ಕೆ ಗರಿಷ್ಠ 10 ಸಾವಿರ ರು ಚಿಕಿತ್ಸಾ ದರ ನಿಗದಿ ಮಾಡಿ ಕಳೆದ ಜೂನ್‌ನಲ್ಲಿ ಹೊರಡಿಸಿದ್ದ ಆದೇಶವನ್ನು ಮರು ಜಾರಿಗೊಳಿಸಿದೆ. ನೇರವಾಗಿ ಖಾಸಗಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವರಿಗೆ ದಿನಕ್ಕೆ ಗರಿಷ್ಠ 25 ಸಾವಿರ ರು. ಚಿಕಿತ್ಸೆ ವೆಚ್ಚ ನಿಗದಿ ಪಡಿಸಲಾಗಿದೆ. ಈ ಹಿಂದಿನ ಆದೇಶಕ್ಕೂ ಹೊಸ ಆದೇಶದಕ್ಕೂ ಚಿಕಿತ್ಸಾ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಖಾಸಗಿ ಆಸ್ಪತ್ರೆಯಲ್ಲಿ ಜನರಲ್‌ ವಾರ್ಡ್‌ಗೆ ಪ್ರತಿದಿನ 5,200 ರು, ಆಮ್ಲಜನಕ ವ್ಯವಸ್ಥೆಯುಳ್ಳ ವಾರ್ಡ್‌ಗೆ ಪ್ರತಿದಿನ 7 ಸಾವಿರ ರು., ತೀವ್ರ ನಿಗಾ ವಿಭಾಗದ ವಾರ್ಡ್‌ಗೆ 8,500 ರು., ಐಸಿಯು ಜೊತೆಗೆ ವೆಂಟಿಲೇಟರ್‌ ಉಳ್ಳ ವಾರ್ಡ್‌ಗೆ 10 ಸಾವಿರ ರು. ನಿಗದಿ ಮಾಡಲಾಗಿದೆ.

Tap to resize

Latest Videos

undefined

ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದವರಿಗೆ, ನಗದು ಅಥವಾ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್‌ ವಾರ್ಡ್‌ಗೆ ದಿನಕ್ಕೆ 10 ಸಾವಿರ ರು., ಆಕ್ಸಿಜನ್‌ ವ್ಯವಸ್ಥೆಯುಳ್ಳ ವಾರ್ಡ್‌ಗೆ 12 ಸಾವಿರ ರು., ಐಸಿಯು ವಾರ್ಡ್‌ಗೆ 15,000 ರು., ಐಸಿಯು ಮತ್ತು ವೆಂಟಿಲೇಟರ್‌ ಹೊಂದಿರುವ ವಾರ್ಡ್‌ಗೆ 25,000 ರು.ಗಳನ್ನು ಸರ್ಕಾರ ನಿಗದಿ ಮಾಡಿದೆ.

ಕೊರೋನಾ ಸಾವಿನ ಪ್ರಮಾಣ ಹೆಚ್ಚಳ: ಲಾಕ್‌ಡೌನ್‌ ಬಿಟ್ಟು ಕಠಿಣ ಕ್ರಮ, ಸಚಿವ ಸುಧಾಕರ್‌

2020ರ ಜೂನ್‌ 23 ರಂದು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಕೋವಿಡ್‌ ರೋಗಿಗಳಿಗೆ ಬೆಡ್‌ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳು ಸರ್ಕಾರ ಶಿಫಾರಸು ಮಾಡಿರುವ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದರ ನಡುವೆ ಈ ಅದೇಶವನ್ನು ಮರು ಅನುಷ್ಠಾನಗೊಳಿಸಿದೆ.

ವಾರ್ಡ್‌ ಸರ್ಕಾರದ ಶಿಫಾರಸು ಪಡೆದವರಿಗೆ ಸರ್ಕಾರದ ಶಿಫಾರಸಿಲ್ಲದೆ ಖಾಸಗಿ ಆಸ್ಪತ್ರೆಗೆ ಬರುವವರಿಗೆ

ಜನರಲ್‌ ವಾರ್ಡ್‌ 5,200 ರು. 10,000ರು.
ಆಮ್ಲಜನಕ ಸೌಲಭ್ಯದ ವಾರ್ಡ್‌ 7,000 ರು. 12,000 ರು.
ಐಸಿಯು 8,500 ರು. 15,000 ರು.
ವೆಂಟಿಲೇಟರ್‌ ಇರುವ ಐಸಿಯು 10,000 ರು. 25,000 ರು.
 

click me!