ಕೊರೋನಾತಂಕ ನಡುವೆಯೇ ಮತ್ತೊಂದು ಚುನಾವಣೆಗೆ ಸಿದ್ಧತೆ..!

By Kannadaprabha News  |  First Published Apr 16, 2021, 10:02 AM IST

ಸ್ಥಳೀಯ ಸಂಸ್ಥೆ ಚುನಾವಣೆ ನಾಮಪತ್ರ ಸಲ್ಲಿಕೆ| ರಾಮನಗರ, ಚನ್ನಪಟ್ಟಣ, ಮಡಿಕೇರಿ, ಭದ್ರಾವತಿ ನಗರಸಭೆ, ಬೇಲೂರು, ವಿಜಯಪುರ ಪುರಸಭೆ, ಬಳ್ಳಾರಿ ಮಹಾನಗರ ಪಾಲಿಕೆಗಳಿಗೆ ಏ.27ರಂದು ನಡೆಯಲಿರುವ ಚುನಾವಣೆ| 


ಬೆಂಗಳೂರು(ಏ.16): ಕೊರೋನಾತಂಕದ ನಡುವೆಯೇ ರಾಜ್ಯದ 1 ಲೋಕಸಭೆ ಮತ್ತು 2 ವಿಧಾನಸಭೆಗಳಿಗೆ ಏ.17ರಂದು ನಡೆಯಲಿರುವ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆ ಬಿದ್ದ ಬೆನ್ನಲ್ಲೇ ಇದೀಗ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿರುಸಿನ ತಯಾರಿ ನಡೆಯುತ್ತಿದೆ.

ರಾಮನಗರ, ಚನ್ನಪಟ್ಟಣ, ಮಡಿಕೇರಿ, ಭದ್ರಾವತಿ ನಗರಸಭೆ, ಬೇಲೂರು, ವಿಜಯಪುರ ಪುರಸಭೆ, ಬಳ್ಳಾರಿ ಮಹಾನಗರ ಪಾಲಿಕೆಗಳಿಗೆ ಏ.27ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರದಂದು ರಾಮನಗರ, ಚನ್ನಪಟ್ಟಣ, ಭದ್ರಾವತಿ, ಬೇಲೂರು, ಬಳ್ಳಾರಿಗಳಲ್ಲಿ ಸಾಮಾಜಿಕ ಅಂತರ ಮರೆತು ಭರ್ಜರಿ ರೋಡ್‌ ಶೋ, ಮೆರವಣಿಗೆಗಳ ಮೂಲಕ ಶಕ್ತಿ ಪ್ರದರ್ಶನ ನಡೆಸಲಾಗಿದೆ.

Latest Videos

undefined

10 ನಗರ ಸಂಸ್ಥೆಗಳಿಗೆ ಏ.27ಕ್ಕೆ ಎಲೆಕ್ಷನ್‌ : ವೇಳಾಪಟ್ಟಿ ಪ್ರಕಟ

ಹೆಚ್ಚಿನ ನಾಮಪತ್ರ ಸಲ್ಲಿಕೆ ಕೇಂದ್ರಗಳಲ್ಲಿ ಜನಜಂಗುಳಿ, ನೂಕುನುಗ್ಗಲುಗಳಾದ ಘಟನೆಗಳೂ ವರದಿಯಾಗಿವೆ. ಈ ವೇಳೆ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಕೋವಿಡ್‌ ನಿಯಮಾವಳಿಯನ್ನು ಸಂಪೂರ್ಣ ಗಾಳಿಗೆ ತೂರಿದ್ದರು. ಹೆಚ್ಚಿನವರು ಮಾಸ್ಕ್‌ ಕೂಡ ಧರಿಸಿರಲಿಲ್ಲ. ರಾಮನಗರ, ಚನ್ನಪಟ್ಟಣಗಳಲ್ಲಿ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಯೊಂದಿಗೆ ನಾಲ್ಕೈದು ಮಂದಿ ಮಾತ್ರ ಬಂದರೆ ಸಾಕು ಎಂದು ಸೂಚಿಸಿದಾಗ ಪೊಲೀಸರು ಮತ್ತು ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ವಾಗ್ವಾದಗಳಾದ ಘಟನೆಗಳು ನಡೆದಿವೆ.
 

click me!