
ಬೆಂಗಳೂರು (ಜೂ.18): ಬಿಗ್ ಬಾಸ್ ಸ್ಪರ್ಧಿಯಾಗಿ ಖ್ಯಾತರಾಗಿರುವ ಗೋಲ್ಡ್ ಸುರೇಶ್ ಇಂದು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಜೀವಬೆದರಿಕೆ ಸಂಬಂಧ ದೂರು ದಾಖಲಿಸಿದ್ದಾರೆ. ಮೈನುದ್ದೀನ್ ಮತ್ತು ಅವರ ಸಹಚರರ 6 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಏನಿದು ಪ್ರಕರಣ?
ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಕೇಬಲ್ ಚಾನೆಲ್ನ ಸೆಟ್ ಅಪ್ ಗಾಗಿ ಅಗ್ರೀಮೆಂಟ್ ಮಾಡಿದ್ದರು. ಇದಕ್ಕಾಗಿ ಮೈನುದ್ದಿನ್ ಎಂಬಾತನಿಂದ 14 ಲಕ್ಷಕ್ಕೆ ಅಗ್ರೀಮೆಂಟ್ ಮಾಡಿಕೊಂಡಿದ್ದರಂತೆ ಗೋಲ್ಡ್ ಸುರೇಶ್ ಆದರೆ ಅರೆಬರೆ ಕೆಲಸ ಮಾಡಿ ಗೋಲ್ಡ್ ಸುರೇಶ್ ವಂಚನೆ ಮಾಡಿದ್ದಾರೆ ಎಂಬುದು ಮೈನುದ್ದೀನ್ ಆರೋಪ. ಆದರೆ ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಈ ಬಗ್ಗೆ ಸುದ್ದಿಗೋಷ್ಟಿ ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
2017ರಲ್ಲಿ ಆರಂಭವಾದ ಈ ಒಪ್ಪಂದದಲ್ಲಿ ಸುರೇಶ್ ಕೆಲಸವನ್ನು ಅರ್ಧಕ್ಕೆ ಬಿಟ್ಟಿದ್ದು, ಉಳಿದ ಹಣವನ್ನು ವಾಪಸ್ ನೀಡಿದ್ದರು ಎಂದು ತಿಳಿದುಬಂದಿದೆ. ಆದರೆ ಮೈನುದ್ದೀನ್ ಈ ಹಣವನ್ನು ವಾಪಸ್ ಪಡೆಯದೆ, ಇತ್ತೀಚೆಗೆ ಸುರೇಶ್‌ಗೆ ಜೀವಬೆದರಿಕೆ ನೀಡಿ 6 ಲಕ್ಷ ರೂ. ಒತ್ತಾಯಿಸಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಸುರೇಶ್, 'ನಾನು ತಪ್ಪು ಮಾಡಿಲ್ಲ. ಅವರ ವರ್ತನೆ ಇಷ್ಟವಾಗದೆ ಕೆಲಸ ಬಿಟ್ಟೆ. ಉಳಿದ ಹಣ ವಾಪಸ್ ನೀಡಿದ್ದೇನೆ. ಆದರೆ ಇದೀಗ ಜೀವಬೆದರಿಕೆ ಎದುರಾಗಿದೆ' ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ