Kannada Songs in Israel: ಇಸ್ರೇಲ್ ಯುದ್ಧಭೂಮಿಯಲ್ಲಿ ಕನ್ನಡದ ಕಂಪು; ಬಾಂಬ್ ಶೆಲ್ಟರ್‌ನಲ್ಲಿ ಅಣ್ಣಾವ್ರ ಹಾಡು ಹೇಳಿ ರಂಜಿಸಿದ ಕನ್ನಡಿಗರು!

Published : Jun 18, 2025, 09:19 PM ISTUpdated : Jun 19, 2025, 10:03 AM IST
Bengaluru Kannadiga in israel kannada songs

ಸಾರಾಂಶ

ಇಸ್ರೇಲ್‌ನಲ್ಲಿ ಯುದ್ಧದ ಭೀಕರ ಪರಿಸ್ಥಿತಿಯ ನಡುವೆ, ಬಾಂಬ್ ಶೆಲ್ಟರ್‌ನಲ್ಲಿ ಸಿಲುಕಿರುವ ಬೆಂಗಳೂರಿನ ಬಿ. ಪ್ಯಾಕ್ ತಂಡದ ಸದಸ್ಯರು ಕನ್ನಡ

ಕಳೆದ ನಾಲ್ಕು ದಿನಗಳಿಂದ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಇರಾನ್‌ನ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಸ್ರೇಲ್‌ನ ಟೆಲ್ ಅವಿವ್‌ನನ್ನು ಗುರಿಯಾಗಿಸಿವೆ. ಈ ದಾಳಿಯಿಂದಾಗಿ ಹಲವು ನಾಗರಿಕರು ಗಾಯಗೊಂಡಿದ್ದು, ಆಸ್ತಿಪಾಸ್ತಿಗಳು ಧ್ವಂಸವಾಗಿವೆ. ಇಸ್ರೇಲಿಗರು ಕ್ಷಿಪಣಿ ದಾಳಿಯ ಭೀತಿಂದ ಬಂಕರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಮಧ್ಯೆ, ವಿಮಾನಯಾನ ಸಂಪರ್ಕ ಕಡಿತಗೊಂಡಿರುವ ಕಾರಣ ಭಾರತೀಯರು ಇಸ್ರೇಲ್‌ನಲ್ಲಿ ಸಿಲುಕಿಕೊಂಗಿದ್ದಾರೆ.

ಆದರೆ, ಈ ಯುದ್ಧದ ಭೀಕರ ವಾತಾವರಣದ ನಡುವೆಯೂ ಕನ್ನಡದ ಕಂಪು ಪಸರಿಸಿದೆ!

ಬೆಂಗಳೂರಿನ ಬಿ. ಪ್ಯಾಕ್ ತಂಡದ ಸದಸ್ಯರು, ಬಾಂಬ್ ಶೆಲ್ಟರ್‌ನಲ್ಲಿ ಸಿಲುಕಿರುವಾಗ ಕನ್ನಡ ಹಾಡುಗಳನ್ನು ಹಾಡಿ, ಒಗ್ಗಟ್ಟಿನಿಂದ ಸಂಕಷ್ಟದ ಸಮಯದಲ್ಲೂ ಸಂಭ್ರಮಿಸುತ್ತಿದ್ದಾರೆ. 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ದಂತಹ ಕನ್ನಡ ಗೀತೆಗಳು ಶೆಲ್ಟರ್‌ನಲ್ಲಿ ಮೊಳಗಿದ್ದು, ಇತರರಿಗೂ ಧೈರ್ಯ ಮತ್ತು ಮನರಂಜನೆಯನ್ನು ತಂದಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "ಯುದ್ಧದ ಭಯದ ನಡುವೆಯೂ ಕನ್ನಡಿಗರ ಸ್ಫೂರ್ತಿ ಮತ್ತು ಸಂತೋಷದ ಕಂಪು ಅದ್ಭುತ! ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಬಿ. ಪ್ಯಾಕ್ ತಂಡದ ಈ ಕನ್ನಡ ಪ್ರೀತಿಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!