ತೆಲುಗು ಸಿನಿಮಾ ನಟನ ಜೊತೆಗೆ ರನ್ಯಾ ರಾವ್ ನಂಟು: ‘ನಟ ನಟಿಯರು ಕೊರಿಯರ್‌’ ಮಾತಿಗೆ ಮತ್ತಷ್ಟು ಪುಷ್ಟಿ

Published : Mar 14, 2025, 10:59 AM ISTUpdated : Mar 14, 2025, 11:01 AM IST
ತೆಲುಗು ಸಿನಿಮಾ ನಟನ ಜೊತೆಗೆ ರನ್ಯಾ ರಾವ್ ನಂಟು: ‘ನಟ ನಟಿಯರು ಕೊರಿಯರ್‌’ ಮಾತಿಗೆ ಮತ್ತಷ್ಟು ಪುಷ್ಟಿ

ಸಾರಾಂಶ

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ಏಟ್ರಿಯಾ ಹೋಟೆಲ್‌ ಮಾಲೀಲಿಕರ ಮೊಮ್ಮಗ ತರುಣ್ ರಾಜ್‌ಗೂ ಚಲನಚಿತ್ರರಂಗದ ನಂಟಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಸಿನಿಮಾ ನಟ-ನಟಿಯರು ಕೊರಿಯರ್‌ಗಳಾಗಿ ಬಳಕೆಯಾಗಿರುವ ಮಾತಿಗೆ ಪುಷ್ಟಿ ಸಿಕ್ಕಂತಾಗಿದೆ.   

ಬೆಂಗಳೂರು (ಮಾ.14): ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ಏಟ್ರಿಯಾ ಹೋಟೆಲ್‌ ಮಾಲೀಲಿಕರ ಮೊಮ್ಮಗ ತರುಣ್ ರಾಜ್‌ಗೂ ಚಲನಚಿತ್ರರಂಗದ ನಂಟಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಸಿನಿಮಾ ನಟ-ನಟಿಯರು ಕೊರಿಯರ್‌ಗಳಾಗಿ ಬಳಕೆಯಾಗಿರುವ ಮಾತಿಗೆ ಪುಷ್ಟಿ ಸಿಕ್ಕಂತಾಗಿದೆ. 2018ರ ತೆಲುಗಿನ ‘ಪರಿಚಯಂ’ ಚಿತ್ರದಲ್ಲಿ ವಿರಾಟ್ ಕೊಂಡುರು ರಾಜು ಹೆಸರಿನಿಂದ ಬೆಳ್ಳಿ ಪರೆದೆಗೆ ತರುಣ್ ಪ್ರವೇಶ ಪಡೆದಿದ್ದ. ನಂತರ ನಾಲ್ಕೈದು ಸಿನಿಮಾಗಳಲ್ಲೂ ನಟಿಸಿದ್ದ. ಆದರೆ ಆತನಿಗೆ ಯಶಸ್ಸು ಸಿಕ್ಕಿರಲಿಲ್ಲ. ತೆಲುಗು ಚಿತ್ರಗಳಲ್ಲಿ ನಟಿಸುವಾಗಲೇ ಆತನಿಗೆ ಡಿಜಿಪಿ ಮಲ ಮಗಳು ರನ್ಯಾರಾವ್ ಪರಿಚಯವಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.

ರನ್ಯಾ ಪತಿಯ ಮನೆಯ ಮೇಲೆ ಡಿಆರ್‌ಐ ರೈಡ್‌: ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ನಟಿ ರನ್ಯಾರಾವ್‌ ಅವರ ಜತಿನ್‌ ಅವರಿಗೆ ಡಿಆರ್‌ಐ ತನಿಖೆ ಬಿಸಿ ಮತ್ತೆ ತಟ್ಟಿದ್ದು, ಕೋರಮಂಗಲದ ಫೋರಂ ಮಾಲ್ ಸಮೀಪದ ಅವರ ಮನೆ ಮೇಲೆ ದಾಳಿ ನಡೆಸಿ ಡಿಆರ್‌ಐ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕೆಲ ದಾಖಲೆಗಳು ಹಾಗೂ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ರನ್ಯಾರಾವ್‌ ಚಿನ್ನ ಸ್ಮಗ್ಲಿಂಗ್‌ ಕೇಸಲ್ಲಿ ಖಾಕಿ ಕೈವಾಡ: ನಟಿ ರನ್ಯಾರಾವ್‌ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಪೊಲೀಸ್‌ ವ್ಯವಸ್ಥೆ ಕೈಜೋಡಿಸಿರುವುದು ಕಂಡು ಬಂದಿದ್ದು, ಪೊಲೀಸರ ಅಕ್ರಮಗಳನ್ನು ನಿಯಂತ್ರಿಸುವಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಆರೋಪಿಸಿದೆ. ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವಿಲ್ಲದಿರುವುದರಿಂದಲೇ ಇಲಾಖೆಯಲ್ಲಿನ ಹಲವು ಅಧಿಕಾರಿಗಳು ಯಾವುದೇ ಭಯವಿಲ್ಲದೆ ಕಳ್ಳ ಸಾಗಣೆಯಂತಹ ಅಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಪೊಲೀಸರು ನೇರವಾಗಿ ಭಾಗಿಯಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಡಾ.ಜಿ.ಪರಮೇಶ್ವರ ರಾಜ್ಯ ಕಂಡ ದುರ್ಬಲ ಗೃಹ ಸಚಿವರಲ್ಲಿ ಒಬ್ಬರಾಗಿದ್ದಾರೆ. 

ನಟಿ ರನ್ಯಾ ಕೇಸಲ್ಲಿ ಡಿಆರ್‌ಐ, ಸಿಬಿಐ ಬಳಿಕ ಮತ್ತೊಂದು ತನಿಖಾ ಸಂಸ್ಥೆ ಎಂಟ್ರಿ: ಇ.ಡಿ ಬಲೆಗೆ ಗೋಲ್ಡ್‌ಲೇಡಿ

ಇವರ ಈ ಸ್ಥಾನದಲ್ಲಿ ಮುಂದುವರೆಯುವುದರಿಂದ ರಾಜ್ಯದ ಪೊಲೀಸ್ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬದು ತಿಳಿದಿರುವ ವಿಚಾರವಾಗಿದೆ. ಅಲ್ಲದೇ, ಅನೇಕ ಕ್ರಿಮಿನಲ್‌ಗಳ ಜೊತೆ ಅಧಿಕಾರಿಗಳಿಗೆ ನಿಕಟ ಸಂಪರ್ಕ ಇರುವುದು ಇದೆ. ಇವೆಲ್ಲವನ್ನು ತಡೆಯುವಲ್ಲಿ ಗೃಹ ಸಚಿವರಾಗಿ ಪರಮೇಶ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಜೀವನ್‌ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಗ್ಯಾಸ್ ಸಿಲಿಂಡರ್ ಸ್ಫೋಟ - ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು