
ಬೆಳಗಾವಿ (ಜು.16): ದೂದ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಗೋವಾ ಪೊಲೀಸರು ಬಸ್ಕಿ ಹೊಡೆಸಿದ ಘಟನೆ ನಡೆದಿದ್ದು,ಗೋವಾ ಪೊಲೀಸರ ಈ ವರ್ತನೆ ಖಂಡಿಸಿ ರೈಲ್ವೆ ಹಳಿ ಮೇಲೆ ಕುಳಿತು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ದೂದ್ ಸಾಗರ ಜಲಪಾತ ಕರ್ನಾಟಕ- ಗೋವಾ ಗಡಿಭಾಗದಲ್ಲಿದ್ದು, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ದೂದ್ ಸಾಗರ ನೋಡಲು ಜನಸಾಗರ ಬರುತ್ತಿದೆ. ಪ್ರವಾಸಿಗರು ಬರುತ್ತಿದ್ದಂತೆ ದೂದ್ ಸಾಗರ ಪ್ರವೇಶಕ್ಕೆ ಗೋವಾ ಪೊಲೀಸರು ನಿಷೇಧ ಹೇರಿದರು. ದೂದಸಾಗರದಲ್ಲಿ ಆಳವಾದ ಜಾಗದಲ್ಲಿ ಇಳಿಯದಂತೆ ಪೊಲೀಸರ ಎಚ್ಚರಿಕೆ ನೀಡಿದರು.
ಶಿವಮೊಗ್ಗಕ್ಕೆ ಆ.11 ರಿಂದ ವಿಮಾನ ಹಾರಾಟ, 78 ಆಸನದ ಇಂಡಿಗೋ ವಿಮಾನಕ್ಕೆ ಟಿಕೆಟ್
ಆದರೆ ಪೊಲೀಸರ ಎಚ್ಚರಿಕೆ ಉಲ್ಲಂಘಿಸಿ ದೂದ್ ಸಾಗರ ಜಲಪಾತದಲ್ಲಿ ಪ್ರವಾಸಿಗರು ಇಳಿಯುವ ಹರಸಾಹಸಕ್ಕೆ ಕೈ ಹಾಕಿದರು. ಈ ವೇಳೆ ಪ್ರವಾಸಿಗರ ಮೇಲೆ ಲಾಠಿ ಚಾರ್ಜ್ ಮಾಡಿ ಗೋವಾ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಪೊಲೀಸರ ವರ್ತನೆ ಖಂಡಿಸಿ ಅಪಾರ ಪ್ರಮಾಣದ ಪ್ರವಾಸಿಗರು ರೈಲ್ವೆ ಹಳಿ ಮೇಲೆ ನಿಂತು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ
ಮಾಂಡೋವಿ ನದಿಯಲ್ಲಿರುವ ದೂದ್‌ಸಾಗರ್ ಜಲಪಾತ ದೇಶದ ಅತಿದೊಡ್ಡ ಜಲಪಾತಗಳ ಪೈಕಿ ಒಂದೆನಿಸಿದೆ. ಮಡಗಾಂವ್- ಬೆಳಗಾವಿ ರೈಲ್ವೆ ಮಾರ್ಗದ ಮಧ್ಯೆ ಈ ಜಲಪಾತ ಸಿಗುತ್ತದೆ. ಈ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಮೊಲೆಮ್ ಗ್ರಾಮದಲ್ಲಿ ಇಳಿದು ಅರಣ್ಯದ ಮಾರ್ಗದಲ್ಲಿ ಚಾರಣ ಕೈಗೊಳ್ಳಬೇಕಿತ್ತು. ಹೀಗಾಗಿ 2019ರಲ್ಲಿ ರೈಲ್ವೆ ಇಲಾಖೆ ದೂದ್‌ಸಾಗರ್ ಬಳಿ ರೈಲುಗಳು 10 ನಿಮಿಷ ನಿಂತು ಹೋಗುವ ಅವಕಾಶ ಮಾಡಿ ಕೊಟ್ಟಿತ್ತು. ಇದರಿಂದ ರೈಲ್ವೆ ಪ್ರಯಾಣಿಕರು ಜಲಪಾತದ ಸೌಂದರ್ಯವನ್ನು ಸವಿಯುವ ಅವಕಾಶ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ