ಸ್ವಾತಂತ್ರ್ಯ ನಡಿಗೆ, ಕಾರ‍್ಯಕರ್ತರಿಗೆ ಕಾಂಗ್ರೆಸ್ಸಿಂದಲೇ ಮೆಟ್ರೋ ಟಿಕೆಟ್‌

By Suvarna NewsFirst Published Aug 13, 2022, 7:21 PM IST
Highlights

ರಾಜಧಾನಿ ಬೆಂಗಳೂರಿನಲ್ಲಿ ಆ.15ರಂದು ಹಮ್ಮಿಕೊಂಡಿರುವ ಐತಿಹಾಸಿಕ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 62,394 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಬೆಂಗಳೂರು (ಆ.13): ರಾಜಧಾನಿ ಬೆಂಗಳೂರಿನಲ್ಲಿ ಆ.15ರಂದು ಹಮ್ಮಿಕೊಂಡಿರುವ ಐತಿಹಾಸಿಕ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 62,394 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಮೂಹ ಸಾರಿಗೆಯನ್ನು ಪ್ರೋತ್ಸಾಹಿಸಲು ಪಕ್ಷದಿಂದಲೇ ಮೆಟ್ರೋ ರೈಲು ಟಿಕೆಟ್‌ಗಳನ್ನು ಖರೀದಿಸಿ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೆ ನೋಂದಣಿ ಮಾಡಿಕೊಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಿಗೆ ಕಿಟ್‌, ರಾಷ್ಟ್ರಧ್ವಜ, ಟೀ ಶರ್ಚ್‌ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಆ.10ರವರೆಗೆ ನೋಂದಣಿ ಮಾಡಿಕೊಂಡಿದ್ದ 42 ಸಾವಿರ ಜನರ ಪೈಕಿ 32 ಸಾವಿರ ಜನ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಯುವ ಜನರಿಗೆ ಈ ವಿಚಾರ ಮುಟ್ಟಬೇಕು ಎಂಬುದು ನಮ್ಮ ಆಶಯವಾಗಿದ್ದು ನೋಂದಣಿ ಮಾಡಿಕೊಂಡವರ ಪೈಕಿ ಶೇ.75 ರಷ್ಟುಮಂದಿ ಯುವಕರೇ ಆಗಿರುವುದು ಖುಷಿ ತಂದಿದೆ ಎಂದರು.

ವಾಹನ ದಟ್ಟಣೆ ತಡೆಯಲು ಮೆಟ್ರೋ ರೈಲು ಟಿಕೆಟ್‌ ಖರೀದಿ ಮಾಡಲಾಗಿದ್ದು, ನಾಗರೀಕರು ಮೆಟ್ರೋ ಮಾರ್ಗವನ್ನೇ ಬಳಸಿಲು ಮನವಿ ಮಾಡಲಾಗಿದೆ. ವಾಪಸ್‌ ಹೋಗುವ ಟಿಕೆಟ್‌ ಅನ್ನೂ ಖರೀದಿಸಲಾಗಿದೆ. ಈ ಟಿಕೆಟ್‌ಗಳನ್ನು ನಿರ್ದಿಷ್ಟನಿಲ್ದಾಣಗಳಲ್ಲಿ ಪಾದಯಾತ್ರೆಗೆ ಬರುವ ಪ್ರಯಾಣಿಕರಿಗೆ ನಮ್ಮ ಸ್ವಯಂ ಸೇವಕರು ನೀಡಲಿದ್ದಾರೆ. ಎಲ್ಲ ರೈಲ್ವೇ ನಿಲ್ದಾಣ ಕೇಂದ್ರಗಳಲ್ಲಿ ಪಕ್ಷದ ಪ್ರತಿನಿಧಿಗಳು ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಮಾರ್ಗವನ್ನು ಮೆಟ್ರೋ ಇಲಾಖೆಗೆ ನೀಡಿದ್ದು, ಎಷ್ಟುಬಾರಿ ರೈಲು ಪ್ರಯಾಣಿಸಬೇಕು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ ಎಂದು ಮಾಹಿತಿ ನೀಡಿದರು.

ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ

ಯಾವುದೇ ನಿಲ್ದಾಣಕ್ಕೆ 30 ಟಿಕೆಟ್‌, ನಾಳೆಯಿಂದ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ರಿಯಾಯಿತಿ
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ವಾರಾಂತ್ಯ ಮತ್ತು ಸ್ವಾತಂತ್ರ್ಯ ದಿನದಂದು (ಆ. 13 ರಿಂದ ಆ. 15ರವರೆಗೆ) ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ…) ರಿಯಾಯಿತಿ ದರದ ಪ್ರಯಾಣ ವ್ಯವಸ್ಥೆ ಕಲ್ಪಿಸಿದೆ.

ನಿಗದಿತ ಮೂರು ದಿನಗಳಂದು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್‌ ದರ 30 ರೂ. ಇರುತ್ತದೆ. ಇದಕ್ಕಾಗಿ ಪೇಪರ್‌ ಟಿಕೆಟ್‌ ಪರಿಚಯಿಸಿದೆ. ಆ ದಿನದಲ್ಲಿ ಒಂದು ಬಾರಿ ಲಾಲ್‌ಬಾಗ್‌ನಿಂದ ಯಾವುದೇ ನಿಲಾಾ್ದಣಕೆæ್ಕ ಪ್ರಯಾಣಿಸಬಹುದು.

ಬೆಂಗಳೂರು: ವರ್ಷಾಂತ್ಯದೊಳಗೆ ವೈಟ್‌ಫೀಲ್ಡ್‌ಗೆ ಮೆಟ್ರೋ

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಪೇಪರ್‌ ಟಿಕೆಟ್‌ಗಳನ್ನು ಪ್ರಯಾಣಿಕರು ಖರೀದಿಸಬಹುದು. ಲಾಲ್‌ಬಾಗ್‌ ನಿಲ್ದಾಣದಲ್ಲಿ ಈ ಪೇಪರ್‌ ಟಿಕೆಟ್‌ ರಾತ್ರಿ 8ರವರೆಗೆ ಲಭ್ಯ ಇರಲಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಅನ್ಯ ನಿಲ್ದಾಣದಿಂದ ಲಾಲ್‌ಬಾಗ್‌ ನಿಲ್ದಾಣಕ್ಕೆ ಟೋಕನ್‌ ಮತ್ತು ಸ್ಮಾರ್ಚ್‌ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಸಬಹುದಾಗಿದೆ.

click me!