Freedom Habba: ಆಗಸ್ಟ್-15ಕ್ಕೆ ಶಕ್ತಿಸೌಧದಲ್ಲಿ ಫ್ರೀಡಂ ಹಬ್ಬ; ಮಕ್ಕಳ ಜೊತೆ ಬಂದ್ರೆ ವಿಧಾನಸೌಧಕ್ಕೆ ಫ್ರೀ ಪ್ರವೇಶ!

Kannadaprabha News   | Kannada Prabha
Published : Aug 10, 2026, 07:18 AM IST
freedom habba on Aug 15

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆಯ 'ಫ್ರೀಡಂ ಹಬ್ಬ'ದ ಅಂಗವಾಗಿ, ಮಕ್ಕಳು ಮತ್ತು ಅವರ ಪೋಷಕರಿಗೆ ವಿಧಾನಸೌಧಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಈ ದಿನದಂದು ಮಕ್ಕಳಿಗಾಗಿ ವಿಶೇಷ ಮಾರ್ಗದರ್ಶಿತ ಪ್ರವಾಸಗಳು, ಸ್ಪರ್ಧೆಗಳು, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಂಗಳೂರು (ಆ.10): ಸ್ವಾತಂತ್ರ್ಯ ದಿನಾಚರಣೆಯಂದು ಆಚರಿಸುತ್ತಿರುವ ‘ಫ್ರೀಡಂ ಹಬ್ಬ’ದ ಅಂಗವಾಗಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಮಕ್ಕಳಿಗೆ ಹಾಗೂ ಮಕ್ಕಳೊಂದಿಗೆ ಬರುವ ಪಾಲಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಭವ್ಯವಾದ ವಿಧಾನಸೌಧದೊಳಗೆ ಪ್ರವೇಶಿಸಿ, ಆವರಣದಲ್ಲಿ ಸುತ್ತಾಡಿ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು. ಫ್ರೀಡಂ ಹಬ್ಬದಲ್ಲಿ ಭಾಗವಹಿಸುವ ಮಕ್ಕಳಿಗೆ ವಿಶೇಷ ಮಾರ್ಗದರ್ಶಿತ ಪ್ರವಾಸಗಳ ಮೂಲಕ ವಿಧಾನಸೌಧ ವೀಕ್ಷಿಸಬಹುದು. ಮಕ್ಕಳೇ ತಮ್ಮ ಪೋಷಕರಿಗೆ ವಿಧಾನಸೌಧ ಪ್ರವೇಶದ ಪಾಸ್‌ನಂತಾಗಲಿದ್ದಾರೆ. ಅಂದು ರಸಪ್ರಶ್ನೆ, ಕಥೆ ಹೇಳುವ ಸ್ಪರ್ಧೆ, ಕರಕುಶಲ ಚಟುವಟಿಕೆಗಳು, ಸಂವಾದಾತ್ಮಕ ಚಟುವಟಿಕೆಗಳು, ಸೃಜನಾತ್ಮಕ ಕಾರ್ಯಾಗಾರಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ. ವಿಶೇಷವಾಗಿ ಕಲಾವಿದರ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಬದುಕು ಮತ್ತು ಹೋರಾಟದ ವಿಚಾರಗಳನ್ನು ಪ್ರದರ್ಶಿಸಲಾಗುತ್ತದೆ. ಸ್ವಾತಂತ್ರ್ಯ ದಿನವನ್ನು ಮಕ್ಕಳು ಕೇವಲ ನೋಡುವ ಅಥವಾ ಓದುವ ದಿನವಾಗಿಸದೆ, ಅನುಭವಿಸುವ ದಿನವನ್ನಾಗಿಸುವುದು ಇದರ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ನಾಗರಿಕತ್ವದ ಕುರಿತು ಆಳವಾದ ಅರಿವು ಮೂಡಿಸುವುದರ ಜೊತೆಗೆ, ಮರೆಯಲಾಗದ ನೆನಪುಗಳನ್ನು ಸೃಷ್ಟಿಸುವುದು ಈ ಆಚರಣೆಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಫ್ರೀಡಂ ಹಬ್ಬದ ವಿಶೇಷಗಳು:

ಈ ಸಂಭ್ರಮದಲ್ಲಿ ಕರ್ನಾಟಕ ಹಾಗೂ ಭಾರತದ ವಿವಿಧ ಭಾಗಗಳಿಂದ ಬರುವ ಕುಟುಂಬಗಳು, ಸಮುದಾಯಗಳು, ಕಲಾವಿದರು ಮತ್ತು ನಾಗರಿಕರನ್ನು ಒಂದೇ ವೇದಿಕೆಗೆ ತರಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಇಂಡಿಯಾ ಪೆರೇಡ್, ವಿವಿಧ ಪ್ರದೇಶಗಳ ಪಾಕಪದ್ಧತಿ, ಕರಕುಶಲ ವಸ್ತುಗಳು, ಜೀವಂತ ವಸ್ತುಸಂಗ್ರಹಾಲಯ, ವಿವಿಧ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಮಂಟಪಗಳು, ಸಂವಿಧಾನ ಚೌಕ, ಸಂಗೀತ ಹಾಗೂ ಹಲವು ಚಟುವಟಿಕೆಗಳು ವಿಧಾನಸೌಧದ ಸುತ್ತಮುತ್ತ ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ.

ನೋಂದಣಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ

ಉಚಿತವಾಗಿ ವಿಧಾನಸೌಧ ಆವರಣ ಪ್ರವೇಶಿಸಿ ವೀಕ್ಷಿಸಲು ಬಯಸುವ ವಿದ್ಯಾರ್ಥಿಗಳು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಲಭ್ಯವಾಗುವ ವೆಬ್‌ಸೈಟ್‌ಲಿಂಕ್‌ನಲ್ಲಿ ತಮ್ಮ ಹೆಸರು, ಇ ಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್ ಹಾಕುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರೆಸ್ಸೆಸ್‌ ಅನ್ನು ಕಾನೂನು ಚೌಕಟ್ಟಿನೊಳಗೆ ತರ್ತೀವಿ: ಪ್ರಿಯಾಂಕ್ ಖರ್ಗೆ | ನೂರು ವರ್ಷಗಳ ಇತಿಹಾಸ ಅಧ್ಯಯನಕ್ಕೆ ಮುಂದಾದ ಗೃಹಸಚಿವ!
Ahimsa Chetan: ರಾಜ್ಯ ರಾಜಕೀಯಕ್ಕೆ ಅಹಿಂಸಾ ಚೇತನ್ ಎಂಟ್ರಿ; ಸಮ-ಸಮಾಜ ನಿರ್ಮಾಣಕ್ಕೆ ಹೊಸ ರಾಜಕೀಯ ಪಕ್ಷದ ಘೋಷಣೆ!