
ಬೆಂಗಳೂರು (ಆ.9): ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್‌ಎಸ್‌ಎಸ್ ಅನ್ನು ಕಾನೂನಿನ ಒಳಗೆ ತರುತ್ತೇನೆ. ಎಲ್ಲದರ ಬಗ್ಗೆಯೂ ಈಗ ಬಹಿರಂಗಗೊಳಿಸಲಾಗದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ನೋಂದಣಿ ಕುರಿತಂತೆ ಈ ಹಿಂದೆ ಬರೆಯಲಾಗಿದ್ದ ಪತ್ರಕ್ಕೆ ನಿರೀಕ್ಷೆಯಂತೆ ಯಾವುದೇ ಬಂದಿಲ್ಲ. ಸದ್ಯ ಆರ್‌ಎಸ್‌ಎಸ್ ಕಾನೂನು ಚೌಕಟ್ಟಿನಿಂದ ಹೊರಗಿದೆ. ಅದನ್ನು ಕಾನೂನಿನ ಒಳಗೆ ತರಲಾಗುವುದು. ನಾನು ಗೃಹ ಖಾತೆ ವಹಿಸಿಕೊಂಡು ಒಂದೂವರೆ ತಿಂಗಳಾಗಿದ್ದು, 100 ವರ್ಷಗಳ ಇತಿಹಾಸದ ಸಂಸ್ಥೆಯ ಬಗ್ಗೆ ಅಧ್ಯಯನ ಮಾಡಿ ತಿಳಿದುಕೊಳ್ಳುತ್ತೇನೆ. ಎಲ್ಲವನ್ನೂ ಕಾನೂನಾತ್ಮಕವಾಗಿಯೇ ಮಾಡುತ್ತೇನೆ ಎಂದರು.
ಆರ್‌ಎಸ್‌ಎಸ್ ಸಂಸ್ಥೆಯೇ ಕಾನೂನು ಪ್ರಕಾರ ನೋಂದಣಿಯಾಗಿಲ್ಲ. ಆದರೆ, ದೇಶದಲ್ಲಿ ದೇಶ ದ್ರೋಹಿ-ದೇಶ ಭಕ್ತಿಯ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಹೀಗೆ ಪ್ರಮಾಣಪತ್ರ ನೀಡಲು ಅವರು ಯಾರು ಎಂಬುದನ್ನು ಹೇಳಬೇಕು. ಮುಂದೆ ಏನು ಮಾಡುತ್ತೇವೆ ಎಂಬುದನ್ನು ಈಗಲೇ ಬಹಿರಂಗವಾಗಿ ಹೇಳುವುದಿಲ್ಲ. ಬಹಿರಂಗಗೊಳಿಸಿದರೆ ನಾವು ತೆಗೆದುಕೊಳ್ಳುವ ಕ್ರಮದಿಂದ ಆರ್‌ಎಸ್‌ಎಸ್‌ಗೆ ಅಚ್ಚರಿಯಾಗುವುದಿಲ್ಲ. ಅವರಿಗೆ ಅಚ್ಚರಿಯಾಗುವಂತಹ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ