ವಿದೇಶಿ ಪ್ರವಾಸದ ಆಸೆ ತೋರಿಸಿ 80 ಲಕ್ಷ ಧೋಖಾ

By Kannadaprabha NewsFirst Published Oct 30, 2019, 8:56 AM IST
Highlights

ವಿದೇಶಿ ಪ್ರವಾಸದ ಆಸೆ ತೋರಿಸಿ, ಹೋಟೆಲ್‌ ಪ್ರಾರಂಭಿಸಲು ಹಣ ಹೂಡಿಕೆ ಮಾಡಿಸಿಕೊಂಡು ‘ವೆಲ್‌ ಕಂ ಜಾಯ್‌ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆ’ 80 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ವೆಲ್‌ ಕಂ ಜಾಯ್‌ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆಯ ಶಿವಕುಮಾರ್‌, ಎಸ್‌.ಸುರೇಶ್‌ ಮತ್ತು ಚಂದ್ರಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು, ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು(ಅ.30): ವಿದೇಶಿ ಪ್ರವಾಸದ ಆಸೆ ತೋರಿಸಿ, ಹೋಟೆಲ್‌ ಪ್ರಾರಂಭಿಸಲು ಹಣ ಹೂಡಿಕೆ ಮಾಡಿಸಿಕೊಂಡು ‘ವೆಲ್‌ ಕಂ ಜಾಯ್‌ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆ’ 80 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮಾಕ್ಷಿಪಾಳ್ಯ ನಿವಾಸಿ ಎಚ್‌.ಆರ್‌. ಸುರೇಶ್‌ ವಂಚನೆಗೆ ಒಳಗಾದವರು. ಸುರೇಶ್‌ ನೀಡಿದ ದೂರಿನ ಮೇರೆಗೆ ವೆಲ್‌ ಕಂ ಜಾಯ್‌ ಟೂರ್ಸ್‌ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆಯ ಶಿವಕುಮಾರ್‌, ಎಸ್‌.ಸುರೇಶ್‌ ಮತ್ತು ಚಂದ್ರಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು, ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿಕೆಶಿ ರೋಡ್‌ ಶೋನಲ್ಲಿದ್ದ ‘ಕೈ’ ಕಾರ್ಯಕರ್ತರ ವಿರುದ್ಧ FIR

2018ರ ಏಪ್ರಿಲ್‌ನಲ್ಲಿ ಸುರೇಶ್‌ ಮನೆಗೆ ಹೋಗಿದ್ದ ಟ್ರಾವೆಲ್ಸ್‌ ಕಂಪನಿಯ ಈ ಮೂವರು, ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ವಾಪಸ್‌ ನೀಡುತ್ತೇವೆ. 10 ಸಾವಿರ ಹೂಡಿಕೆ ಮಾಡಿದರೆ ಗೋವಾಗೆ ಎಷ್ಟು ಬಾರಿ ಬೇಕಾದರು ಹೋಗಿ ಬರಬಹುದು ಎಂದು ಆಮಿಷವೊಡ್ಡಿದ್ದರು.

ಇದನ್ನು ನಂಬಿದ ಸುರೇಶ್‌, ತನ್ನ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ ತಲಾ 10 ಸಾವಿರದಂತೆ ಎಂಟು ಜನರ ಹೆಸರಿನಲ್ಲಿ 80 ಸಾವಿರ ಹೂಡಿಕೆ ಮಾಡಿದ್ದರು. 2019ರ ಏಪ್ರಿಲ್‌ನಲ್ಲಿ ಗೋವಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಎಲ್ಲ ವ್ಯವಸ್ಥೆಯನ್ನು ಟ್ರಾವೆಲ್ಸ್‌ ಕಡೆಯಿಂದಲೇ ಮಾಡಲಾಗಿತ್ತು.

ಕೊಳೆತ ತರಕಾರಿ: ತಾಜ್‌ ವೆಸ್ಟ್‌ಎಂಡ್‌ಗೆ ದಂಡ

ಅಲ್ಲಿಂದ ಬಂದ ಸುರೇಶ್‌ ಕುಟುಂಬವನ್ನು ಮತ್ತೆ ಸಂಪರ್ಕ ಮಾಡಿದ ಟ್ರಾವೆಲ್ಸ್‌ನ ಶಿವಕುಮಾರ್‌, ಹೈದರಾಬಾದ್‌ನಲ್ಲಿ ಸ್ವಂತ ಹೋಟೆಲ್‌ ತೆರೆಯಲಾಗುತ್ತಿದೆ. ಇಲ್ಲಿ ಹಣ ಹೂಡಿಕೆ ಮಾಡಿದರೆ ಕೈತುಂಬ ಹಣ ಬರುತ್ತದೆ. ಜತೆಗೆ ವಿದೇಶಿ ಪ್ರವಾಸ ಮಾಡಬಹುದು ಎಂದು ಹೇಳಿದ್ದರು. ಇದನ್ನು ನಂಬಿದ ಸುರೇಶ್‌, ಹಂತ ಹಂತವಾಗಿ .80 ಲಕ್ಷ ಹೂಡಿಕೆ ಮಾಡಿದ್ದರು. ಆದರೆ ಹಣ ಹೂಡಿಕೆ ಮಾಡಿದರೂ ಇಲ್ಲಿ ತನಕ ಯಾವುದೇ ಲಾಭಾಂಶ ಸಂಸ್ಥೆಯಿಂದ ಬಂದಿಲ್ಲ. ಅಲ್ಲದೆ, ಸಂಸ್ಥೆ ನೀಡಿದ್ದ ಚೆಕ್‌ ಕೂಡ ಬೌನ್ಸ್‌ ಆಗಿದೆ ಎಂದು ದೂರು ನೀಡಿದ್ದಾರೆ. ಆರೋಪಿಗಳ ಮೊಬೈಲ್‌ ಸ್ಚಿಚ್‌ ಆಫ್‌ ಆಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

click me!