ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮಣಿಪಾಲ್ ಆಸ್ಪತ್ರೆಗೆ ದಾಖಲು!

By Ravi Janekal  |  First Published Feb 15, 2024, 5:32 PM IST

ಉಸಿರಾಟದ ತೊಂದರೆಯಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಡಾ ಸತ್ಯನಾರಾಯಣ ಶ್ವಾಸಕೋಶ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು, ತಜ್ಞರ ತಂಡದಿಂದ ನಿಗಾ ವಹಿಸಲಾಗಿದೆ. 


ಬೆಂಗಳೂರು ಫೆ.15): ಉಸಿರಾಟದ ತೊಂದರೆಯಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಡಾ ಸತ್ಯನಾರಾಯಣ ಶ್ವಾಸಕೋಶ ತಜ್ಞರಿಂದ ಚಿಕತ್ಸೆ ನೀಡಲಾಗುತ್ತಿದೆ. ಸದ್ಯ ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು, ತಜ್ಞರ ತಂಡದಿಂದ ನಿಗಾ ವಹಿಸಲಾಗಿದೆ. 

ವೈದ್ಯ ಡಾ. ಡಾ ಸತ್ಯನಾರಾಯಣ ಅವರು ದೇವೇಗೌಡರ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ್ದು, ದೇವೇಗೌಡರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಪ್ರತ್ಯೇಕ ಮೆಡಿಕಲ್ ಟೀಂ ರಚನೆ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. Respiratory infection ಆಗಿದೆಕ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಮತ್ತಷ್ಟು ಚಿಕಿತ್ಸೆಯ ಅಗತ್ಯತೆ ಇದೆ. ಎರಡು‌ಮೂರು ದಿನಗಳಿಂದ ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ಇನ್ನೂ ಡಿಸ್ಟಾರ್ಜ್ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಡಾ.ಮಂಜುನಾಥ್ ಅವರು ಕೂಡ ಇಲ್ಲೇ ಇದ್ದಾರೆ. ಮನೆಯವರು ಜೊತೆಗಿದ್ದಾರೆ. ಚಿಕಿತ್ಸೆಗಾಗಿ ವಿಶೇಷ ತಂಡ ಮಾಡಿದ್ದೇವೆ. ಯಾವ್ಯಾವ ಚಿಕಿತ್ಸೆಯ ಅಗತ್ಯವಿದ್ಯೋ ಅಂತಹ ಚಿಕಿತ್ಸೆಯನ್ನು ತಜ್ಞ ವೈದ್ಯರು ನೀಡ್ತಾರೆ. ಆದಷ್ಟು ಬೇಗ ಗುಣಮುಖರಾಗಿ ಮನೆಗೆ ತರಳಲಿ ಎಂದಿರುವ ವೈದ್ಯರು.

Tap to resize

Latest Videos

ಕೆಲ ಪ್ರಧಾನಿಗಳನ್ನು ನೋಡಿದ್ದೇನೆ ಆದ್ರೆ ಸಮಸ್ಯೆಗೆ ಸ್ಪಂದಿಸುವ ಏಕೈಕ ಪಿಎಂ ಮೋದಿ, ದೇವೇಗೌಡ ಭಾಷಣ! 

ಆರೋಗ್ಯವಾಗಿದ್ದೇನೆ: ಎಚ್‌ಡಿ ದೇವೇಗೌಡ ಸ್ಪಷ್ಟನೆ

ನನ್ನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಉತ್ಪ್ರೇಕ್ಷಿತ ವರದಿಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ನಾನು ಆರೋಗ್ಯವಾಗಿದ್ದೇನೆ. ವಾಡಿಕೆಯ ತಪಾಸಣೆಗಾಗಿ ಮಾತ್ರ ಆಸ್ಪತ್ರೆಯಲ್ಲಿದ್ದೇನೆ ಮತ್ತು ಶೀಘ್ರದಲ್ಲಿ ಮನೆಗೆ ಹಿಂದಿರುಗುತ್ತೇನೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ‍‍ಎಕ್ಸ್‌ ನಲ್ಲಿ ಸ್ಪಷ್ಟಪಡಿಸಿದ್ದಾರೆ. 

ಲೋಕಸಭಾ ಚುನಾವಣೆ 2024: ಮಂಡ್ಯ ಅಭ್ಯರ್ಥಿ ಆಯ್ಕೆಗೆ ಜಿಲ್ಲಾ ಪ್ರವಾಸ, ದೇವೇಗೌಡ

90ರ ಇಳಿವಯಸ್ಸಿನ ದೇವೇಗೌಡರು ವಯೋಸಹಜ ಅನಾರೋಗ್ಯ ಬಿಟ್ಟರೆ ಈಗಲೂ ಉತ್ಸಾಹ ಕಳೆದುಕೊಂಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪ್ರವಾಸ ಮಾಡುವ ಉತ್ಸಾಹದಲ್ಲಿದ್ದರು. ಈಗಾಗಲೇ ಹಲವೆಡೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅಯೋಧ್ಯಾ ರಾಮಮಂದಿರ ಉದ್ಘಾಟನೆಗೂ ಸಾಕ್ಷಿಯಾಗಿದ್ದ ದೇವೇಗೌಡರು.  ಕೆಲವು ದಿನಗಳ ಹಿಂದೆ, ದೇವೇಗೌಡರು ಒಂದು ಮಾತು ಹೇಳಿದ್ದಾರೆ,  ಅದೇನೆಂದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಮತ್ತು ಅದರ ಮಿತ್ರ ಪಕ್ಷವಾದ ಬಿಜೆಪಿ ಒಟ್ಟಾಗಿ ಸ್ಪರ್ಧಿಸುವ ಲೋಕಸಭಾ ಚುನಾವಣಾ ಫಲಿತಾಂಶವನ್ನು ನೋಡಬೇಕೆಂದು.

"ನಾವಿಬ್ಬರೂ, (ಜೆಡಿಎಸ್ ಮತ್ತು ಬಿಜೆಪಿ) 2024ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡುತ್ತೇವೆ. ನಾವು ಎಲ್ಲಾ 28 ಸ್ಥಾನಗಳಲ್ಲಿ (ಕರ್ನಾಟಕದ) ಸ್ಪರ್ಧಿಸುತ್ತೇವೆ. ಚುನಾವಣೆಯ ನಂತರ ನೀವು ಫಲಿತಾಂಶವನ್ನು ನೋಡುತ್ತೀರಿ ಎಂದಿದ್ದಾರೆ. ಇಳಿವಯಸ್ಸಿನಲ್ಲಿ ದೇವೇಗೌಡರು ಉತ್ಸಾಹದ ಚಿಲುಮೆಯಂತೆ ಮಾತನಾಡುತ್ತಾರೆ. ಇದೀಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೀಘ್ರ ಗುಣಮುಖರಾಗಲಿ.

click me!