ದೈವಾರಾಧನೆಗೆ ಅಪಮಾನದ ವಿರುದ್ದ ಹೋರಾಟಕ್ಕೆ ಹಿಂದೂ ಸಂಘಟನೆಗಳು ಎಂಟ್ರಿ; ರಿಷಬ್ ಶೆಟ್ಟಿಗೂ ಎಚ್ಚರಿಕೆ!

Published : Feb 15, 2024, 04:35 PM IST
ದೈವಾರಾಧನೆಗೆ ಅಪಮಾನದ ವಿರುದ್ದ ಹೋರಾಟಕ್ಕೆ ಹಿಂದೂ ಸಂಘಟನೆಗಳು ಎಂಟ್ರಿ; ರಿಷಬ್ ಶೆಟ್ಟಿಗೂ ಎಚ್ಚರಿಕೆ!

ಸಾರಾಂಶ

ಕಾಂತಾರ ಚಿತ್ರ ಯಶಸ್ಸಿನ ಬಳಿಕ ಸಿನಿಮಾಗಳಲ್ಲಿ ದೈವರಾಧನೆ ಪ್ರದರ್ಶನ ಹೆಚ್ಚುತ್ತಿದೆ. ಅಲ್ಲದೇ ಇದು ಟಿವಿ ಧಾರಾವಾಹಿಗಳಿಗೂ ವ್ಯಾಪಿಸಿದೆ. ಈ ಹಿನ್ನೆಗೆ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಇನ್ಮುಂದೆ ದೈವಾರಾಧಾನೆ ಪ್ರದರ್ಶನವಾಗದಂತೆ ದೈವಾರಾಧಕರ ಸಂಘಟನೆ ಹೋರಾಟಕ್ಕೆ ಮುಂದಾಗಿದೆ.

ದಕ್ಷಿಣ ಕನ್ನಡ (ಫೆ.15): ಕಾಂತಾರ ಚಿತ್ರ ಯಶಸ್ಸಿನ ಬಳಿಕ ಸಿನಿಮಾಗಳಲ್ಲಿ ದೈವರಾಧನೆ ಪ್ರದರ್ಶನ ಹೆಚ್ಚುತ್ತಿದೆ. ಅಲ್ಲದೇ ಇದು ಟಿವಿ ಧಾರಾವಾಹಿಗಳಿಗೂ ವ್ಯಾಪಿಸಿದೆ. ಈ ಹಿನ್ನೆಗೆ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಇನ್ಮುಂದೆ ದೈವಾರಾಧಾನೆ ಪ್ರದರ್ಶನವಾಗದಂತೆ ದೈವಾರಾಧಕರ ಸಂಘಟನೆ ಹೋರಾಟಕ್ಕೆ ಮುಂದಾಗಿದೆ. ಬಜರಂಗದಳ, ವಿಶ್ವಹಿಂದು ಪರಿಷತ್ ಸಹ ಹೋರಾಟಕ್ಕೆ ಎಂಟ್ರಿ ನೀಡಿದೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ನೀಡಿರುವ ದೈವಾರಾಧಕರು. ದೈವ ಕೋಲ ಪ್ರದರ್ಶನ ಮಾಡಿದ ಖಾಸಗಿ ವಾಹಿನಿಯ ನಿರ್ದೇಶಕನಿಗೂ ತರಾಟೆ ತೆಗೆದುಕೊಂಡಿವೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.. ಒಂದು ವೇಳೆ ಸಿನಿಮಾಗಳಲ್ಲಾಗಲಿ, ಧಾರಾವಾಹಿಗಳಲ್ಲಾಗಲಿ ದೈವಾರಾಧನೆ ಪ್ರದರ್ಶನ ಕಂಡುಬಂದಲ್ಲಿ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿರುವ ದೈವಾರಾಧಕರು.

ದೈವಾರಾಧನೆ ಬಗ್ಗೆ ಅವಹೇಳನ, ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ವಿರುದ್ಧ ಜಾತಿ ನಿಂದನೆ ಕೇಸ್‌

ದೈವಾರಾಧಕರ ಸಂಘಟನೆಗೆ ಹಿಂದೂ ಸಂಘಟನೆಗಳು ಸಾಥ್

ರಾಜ್ಯದಲ್ಲಿ ಪದೇಪದೆ ದೈವಾರಾಧನೆಗೆ ಅಪಮಾನ ಮಾಡುವ ಕೃತ್ಯ ನಡೆಯುತ್ತಿದೆ. ಈ ಹಿನ್ನೆಲೆ ದೈವದ ಅಪಮಾನ ಮಾಡುವವರ ವಿರುದ್ಧ ಹೋರಾಟಕ್ಕೆ ವಿಶ್ವಹಿಂದು ಪರಿಷತ್, ಬಜರಂಗದಳ ದೈವಾರಾಧಕರ ಸಂಘಟನೆಗೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್,ಯಾವುದೇ ಕಾರಣಕ್ಕೂ ದೈವಾರಾಧನೆ ದೃಶ್ಯಗಳನ್ನೊಳಗೊಂಡ ಧಾರವಾಹಿ ತೆರೆ ಮೇಲೆ ಬರಬಾರದು ಪ್ರದರ್ಶನವಾದರೆ ಬೆಂಗಳೂರಿಗೆ ಮುತ್ತಿಗೆ ಹಾಕುತ್ತೇವೆ. ದರ್ಶನವಾದ್ರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಮುಂದಿನ ತಮ್ಮ ಸಿನಿಮಾಗಳಲ್ಲಿ ದೈವರಾಧನೆ ಪ್ರದರ್ಶಿಸದಂತೆ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡಿದ್ದೇವೆ ಎಂದರು. 

ಲೀಕಾಗೋಯ್ತು ರಿಷಬ್ ಶೆಟ್ಟಿ ಕಾಂತಾರಾ 2 ಲುಕ್ ! ಕುತೂಹಲ ಹುಟ್ಟು ಹಾಕಿದ ಅಪ್ಪನ ಕ್ಯಾರೆಕ್ಟರ್!

 

ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ'ಕಾವೇರಿ ಕನ್ನಡ ಮೀಡಿಯಂ' ಧಾರವಾಹಿ ಪ್ರೊಮೊದಲ್ಲಿ ದೈವಾರಾಧನೆಯ ಬಳಕೆ ಮಾಡಿತ್ತು ವಿಡಿಯೋ ವೈರಲ್ ಆಗಿ ಎಲ್ಲೆಡೆ ತುಳುನಾಡು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗಾಗಲೇ ಪ್ರೊಮೊದಲ್ಲಿ ಬಿಡುಗಡೆಯಾಗಿದ್ದು, ಸೀರಿಯಲ್‌ನಲ್ಲಿ ಬಿಡುಗಡೆಯಾದ್ರೆ ಬೆಂಗಳೂರಿಗೆ ಬಂದು ಮುತ್ತಿಗೆ ಹಾಕುತ್ತೇವೆ ಎಂದು ತುಳುನಾಡಿಗರು ಎಚ್ಚರಿಕೆ ನೀಡಿ ಠಾಣೆ ಮೆಟ್ಟಿಲೇರಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ