River Alignment ಕುರಿತು ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ಪಡೆದಿಲ್ಲ: ದೇವೇಗೌಡ

Kannadaprabha News   | Asianet News
Published : Feb 10, 2022, 10:15 AM ISTUpdated : Feb 10, 2022, 10:28 AM IST
River Alignment ಕುರಿತು ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ಪಡೆದಿಲ್ಲ: ದೇವೇಗೌಡ

ಸಾರಾಂಶ

*  ಕೇಂದ್ರದ ಯೋಜನೆಯಿಂದ ಬೆಂಗಳೂರಿಗೆ ನೀರಿನ ಬರ *  ಕೇಂದ್ರ ಸರ್ಕಾರದ ವಿರುದ್ಧ ದೇವೇಗೌಡ ಆರೋಪ *  ಈ ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ಏನು ನೀಡುವುದಾಗಿ ಹೇಳಿಲ್ಲ  

ನವದೆಹಲಿ(ಫೆ.10):  ಕೃಷ್ಣಾ-ಪೆನ್ನಾರ್‌(Krishna-Pennar) ನದಿ ಜೋಡಣೆ ಬಗ್ಗೆ ಡಿಪಿಆರ್‌(DPR) ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ನಮ್ಮ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ಏನು ನೀಡುವುದಾಗಿ ಹೇಳಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda)s ಆರೋಪಿಸಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ(Rajya Sabha) ಮಾತನಾಡಿದ ವಿಚಾರವಾಗಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಎರಡು ವರ್ಷಗಳ ಬಳಿಕ 24 ನಿಮಿಷ ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ಮಾತಾಡಿದೆ. ಈ ವೇಳೆ ಅಂತಾರಾಜ್ಯ ನದಿ ಜೋಡಣೆ(Interstate River Alignment), ಮೇಕೆದಾಟು(Mekedatu) ಯೋಜನೆಗಳ ಪ್ರಸ್ತಾಪ ಮಾಡಿದೆ. ಜೊತೆಗೆ ಭದ್ರ ಮೇಲ್ದಂಡೆ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆಗಳು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು ಅಂಥ ಒತ್ತಾಯ ಮಾಡಿದೆ. ಈ ವೇಳೆ ಡಿಎಂಕೆ, ಎಐಡಿಎಂ ಸಂಸದರು ಇದ್ದರು ಎಂದು ತಿಳಿಸಿದರು.

River Alignment: ಕೃಷ್ಣಾ-ಗೋದಾವರಿ ಜೋಡಣೆ ಹೊಸದೊಂದು ಸಮಸ್ಯೆಗೆ ದಾರಿ

ಮೇಕೆದಾಟು ವಿಚಾರವಾಗಿ ಕಾಂಗ್ರೆಸ್‌ನವರು(Congress) ದೊಡ್ಡ ಹೋರಾಟ ಶುರುಮಾಡಿದ್ದಾರೆ. ಆದರೆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಇರುವಾಗ ಹೋರಾಟ ಬೇಡ ಅಂಥ ನಮ್ಮ ಪಕ್ಷ ನಿರ್ಧರಿಸಿತು ಎಂದು ತಿಳಿಸಿದರು. ಮೇಕೆದಾಟು ಬಗ್ಗೆ ಅನುಮತಿ ಕೊಡಲು ಸಾಧ್ಯವಿಲ್ಲ ಅಂಥ ತಮಿಳುನಾಡು, ಕೇರಳ, ಪುದುಚೇರಿ ಅರ್ಜಿ ಹಾಕಿಕೊಂಡಿವೆ. ಈಗ ಸುಪ್ರೀಂ ಕೋರ್ಟ್‌ ಏನು ಮಾಡುತ್ತದೋ ನೋಡಬೇಕು ಎಂದು ತಿಳಿಸಿದರು.

ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯ: ಎಚ್‌ಡಿಡಿ

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ(Union Budget) ಘೋಷಿಸಲಾಗಿರುವ ನದಿ ಜೋಡಣೆ ಯೋಜನೆಗಳಿಂದ ಕರ್ನಾಟಕಕ್ಕೆ ಭಾರೀ ಅನ್ಯಾಯ ಆಗಲಿದೆ. ರಾಜ್ಯದಲ್ಲಿ ಭಾರೀ ಕುಡಿಯುವ ನೀರಿನ ಅಭಾವ ಉಂಟಾಗಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮಂಗಳವಾರ ಕಳವಳ ವ್ಯಕ್ತಪಡಿಸಿದ್ದರು. 

ಬಜೆಟ್‌ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿಗೂ ಪರದಾಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಬೆಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಇದೆ. ಸುಪ್ರೀಂಕೋರ್ಟ್‌ ಕರ್ನಾಟಕದ ನೀರಾವರಿ ಯೋಜನೆಗಳಿಗೆಂದು ಮೀಸಲಿಟ್ಟ ನೀರನ್ನು ಈಗ ಕುಡಿಯುವ ನೀರಿನ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಬಜೆಟ್‌ನಲ್ಲಿ ಘೋಷಿಸಲಾದ ನದಿ ಜೋಡಣೆ ಯೋಜನೆಯಿಂದ ರಾಜ್ಯಕ್ಕೆ ಭಾರೀ ಹಾನಿಯಾಗಲಿದೆ ಎಂದು ಹೇಳಿದರು. ಇದೇ ವೇಳೆ ಪ್ರಸ್ತಾಪಿತ ಕೃಷ್ಣಾ-ಪೆನ್ನಾರ್‌ ಮತ್ತು ಪೆನ್ನಾರ್‌-ಕಾವೇರಿ ನದಿ ಜೋಡಣೆ ಯೋಜನೆಗಳ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ ಮತ್ತು ವಿವರಗಳನ್ನು ಕೇಳಿದರು.

ಕೃಷ್ಣಾ-ಪೆನ್ನಾರ್‌ ಯೋಜನೆಯನ್ನು ಉಲ್ಲೇಖಿಸಿದ ಅವರು,‘ಯೋಜನೆಯಿಂದ ತಮಿಳುನಾಡಿಗೆ ಸುಮಾರು 130 ಟಿಎಂಸಿ ಸಿಗುತ್ತದೆ. ಕರ್ನಾಟಕದ ಪಾಲಿನ ಬಗ್ಗೆ ಏನೂ ಹೇಳಿಲ್ಲ. ಕರ್ನಾಟಕದ ಪಾಲು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು’ಎಂದು ಕೋರಿದರು.

River Alignment Project: ನದಿ ಜೋಡಣೆ ಮಾಡಿದ್ರೆ ರಾಜ್ಯಕ್ಕೂ ಪಾಲು ಬೇಕು: ಸಿಎಂ ಬೊಮ್ಮಾಯಿ

ಬೆಂಗಳೂರು(Bengaluru) ನಗರಕ್ಕೆ ಕುಡಿಯುವ ನೀರಿನ ಬಳಕೆಗಾಗಿ ಸುಪ್ರೀಂಕೋರ್ಟ್‌ 4.7 ಟಿಎಂಸಿ ನೀಡಿದೆ. ಆದರೆ 2011ರಲ್ಲಿ ಬೆಂಗಳೂರು ನಗರದ ಜನಸಂಖ್ಯೆ 85 ಲಕ್ಷ ಇತ್ತು. ಆದರೆ ಇಂದು ಬೆಂಗಳೂರಿನಲ್ಲಿ 130 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ನೀರಾವರಿಗೆ ಮೀಸಲಿಟ್ಟ 50 ಟಿಎಂಸಿ ನೀರನ್ನು ಬಳಸುತ್ತಿದ್ದೇವೆ. 130 ಲಕ್ಷ ಜನರಿಗೆ 4.75 ಟಿಎಂಸಿ ನೀರು ಸಾಲುವುದಿಲ್ಲ ಎಂದು ವಿವರಿಸಿದರು.

ಕಾವೇರಿ ಜಲ ವಿವಾದದಲ್ಲಿ ಸುಪ್ರೀಂಕೋರ್ಟ್‌(Supreme Court) ಕರ್ನಾಟಕಕ್ಕೆ(Karnataka) 284 ಟಿಎಂಸಿ ಮತ್ತು ತಮಿಳುನಾಡಿಗೆ 400 ಟಿಎಂಸಿ ಹಂಚಿಕೆ ಮಾಡಿದೆ. ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ಬೆಂಗಳೂರು ನಗರದ ಮೂರನೇ ಒಂದು ಭಾಗಕ್ಕೆ ಕುಡಿಯುವ ನೀರು ಹಂಚಿಕೆ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ’ ಎಂದು ಆರೋಪಿಸಿದರು. ಕೇಂದ್ರವು ಕರ್ನಾಟಕವನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇದರಿಂದ ನಾವು ಅನಾಥರಂತೆ ಇದ್ದೇವೆ ಎಂದು ಆರೋಪಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್