ಡಿಕೆಶಿಗೆ ಉಪಮುಖ್ಯಮಂತ್ರಿ ಆಗಲು ಯೋಗ್ಯತೆ ಇದೆಯಾ?, ಇಂತಹ ಡಿಸಿಎಂ ನಮಗೆ ಬೇಕಾ?: ಈಶ್ವರಪ್ಪ ಗುಡುಗು

By Girish GoudarFirst Published Oct 5, 2023, 2:15 AM IST
Highlights

ಡಿಜೆ ಹಳ್ಳಿ, ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣ‌ ಕೈ ಬಿಡಿ ಅಂತಾರಲ್ಲ, ಉಪ ಮುಖ್ಯಮಂತ್ರಿ ಆಗಲು ಯೋಗ್ಯತೆ ಇದೆಯಾ?, ಇಂತಹ ಉಪ ಮುಖ್ಯಮಂತ್ರಿ ಬೇಕಾ ನಮಗೆ. ಮುಖ್ಯಮಂತ್ರಿ ಅವರು ಕೂಡಲೇ ಉಪ ಮುಖ್ಯಮಂತ್ರಿ ತೆಗೆದು ಬೇರೆಯವರನ್ನು ನೇಮಿಸಿಕೊಳ್ಳಲಿ ಎಂದು ಆಗ್ರಹಿಸಿದ ಈಶ್ವರಪ್ಪ

ಶಿವಮೊಗ್ಗ(ಅ.05):  ರಾಮ ಲಿಂಗ ಎರಡು ಹೆಸರು ಇಟ್ಟುಕೊಂಡಿರುವ ರಾಮಲಿಂಗ ರೆಡ್ಡಿಯವರು ಇಷ್ಟು ಕೆಳಮಟ್ಟದ ರಾಜಕಾರಣಕ್ಕೆ ಇಳಿತ್ತಾರೆ ಅಂತಾ ಅನಿಸಿರಲಿಲ್ಲ. ಸಚಿವರಾಗಿದ್ದವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಅವರ ಮಾತನ್ನು ಯಾರು ಒಪ್ಪಲು ಸಾಧ್ಯವಿಲ್ಲ. ಅವರು ಸ್ವತಃ ಶಿವಮೊಗ್ಗಕ್ಕೆ ಬಂದ್ರೆ ಹಿಂದೂ ಮನೆಗಳ ಹುಡುಕಿ ಹುಡುಕಿ ಹೊಡೆದಿದ್ದಾರೆ ಆ ಮನೆಗೆ ಕರೆದುಕೊಂಡು ಹೋಗ್ತೇನೆ. ಆಸ್ಪತ್ರೆಗೆ ಕರೆದುಕೊಂಡು ಹೋಗ್ತೇನೆ ಅಂತ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಎಸ್‌ಪಿ, ನಾನು ರಾಮಲಿಂಗರೆಡ್ಡಿ ಮೂರೇ ಜ‌ನ ಕುಳಿತುಕೊಳ್ಳುತ್ತೇವೆ. ಎಸ್‌ಪಿ ಅವರು ಹೌದು ರಾಮಲಿಂಗರೆಡ್ಡಿ ಹೇಳಿದ್ದು ನಿಜ ಅಂದ್ರೆ ಅವರು ಹೇಳಿದಾಗೆ ನಾನು ಕೇಳ್ತೀನಿ. ನಾವು ಹಿಂದೂಗಳು ಮುಸ್ಲಿಂರಿಗೆ ಯಾವುದೇ ತೊಂದರೆ ಕೊಡಲು ಹೋಗಿಲ್ಲ. ಸಚಿವ ಮಧು ಬಂಗಾರಪ್ಪ ಆ ಸ್ಥಳಕ್ಕೆ ಹೋಗಿದ್ದಾರೆ. ಅವರು ಈ ಮಾತನ್ನು ಹೇಳಿದ್ದರೇ ನಾನು ಒಪ್ಪಿಕೊಳ್ಳುತ್ತೇನೆ. ಎಲ್ಲಿಯೋ ಕುಳಿತುಕೊಂಡು ರೆಡ್ಡಿ ಕತ್ತಲಲ್ಲಿ ವಿಷಯ ಬಿಟ್ಟಿದ್ದಾರೆ ಅಂತ ತಿಳಿಸಿದ್ದಾರೆ. 

Latest Videos

ಕಲ್ಲು ಹೊಡೆದ್ರು..ಆವಾಜ್ ಹಾಕಿದ್ರು..ಪೊಲೀಸರಿಗೇ ಹೆದರಿಸಿದ್ರು: ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ನಿಜಕ್ಕೂ ಆಗಿದ್ದೇನು ?

ಬಿಜೆಪಿ ಕಾರ್ಯಕರ್ತರ ರಕ್ತದ ಕಣ ಕಣ ಹೇಳ್ತದೆ ಭಾರತ ಮಾತೆ ನಮ್ಮ ತಾಯಿ ಅಂತ, ರಾಮಲಿಂಗರೆಡ್ಡಿ ಅವರು ಗೃಹ ಮಂತ್ರಿ ಆಗಿದ್ದವರು ಸುಳ್ಳು ಮಾತನ್ನು ಹೇಳಬಾರದು. ಸುಳ್ಳು ಮಾತು ಹೇಳಿರುವುದಕ್ಕೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನನಗೆ ಬುದ್ದಿ ಭ್ರಮಣೆ ಆಗಿದೆ ಅಂತೇಳಿ ಹಿಂದೂಗಳನ್ನು ಬಹಿರಂಗವಾಗಿ ‌ಕ್ಷಮೆ ಕೇಳಬೇಕು. ಪರಮೇಶ್ವರ್ ಸುಳ್ಳು ಹೇಳಿದ್ರು, ರೊಟ್ಟಿನ ಖಡ್ಗ ಅಂದ್ರು, ನಿಖರವಾದ ವರದಿ‌ ಬಂದಿಲ್ಲ ಅಂದ್ರೆ ಪೂರ್ವ ನಿಯೋಜಿತ ಕೃತ್ಯ. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆಯಲ್ಲೇ ಮಾಡಬೇಕಿತ್ತು ಅಂತಾರಲ್ಲ, ರಾಮಲಿಂಗರೆಡ್ಡಿ ಅವರಿಗೆ ಗೊತ್ತಿಲ್ವಾ, ಅವರ ಬಳಿ ಇಂಟಲಿಜೆನ್ಸ್ ವ್ಯವಸ್ಥೆ ಇಲ್ವಾ?, ಜೈಲಿಗೆ ಹೋಗಿ ಮುಸ್ಲಿಂ ಗೂಂಡಾಗಳ ಜೊತೆ ಮಾತನಾಡಲಿ. ಇದು ಪೂರ್ವ ನಿಯೋಜಿತ ಕೃತ್ಯ ಹೌದೋ, ಅಲ್ವಾ ಅಂತಾ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. 

ಗೃಹ ಸಚಿವ ಹೇಗೆ ರಾಜ್ಯವನ್ನು ರಕ್ಷಣೆ ಮಾಡ್ತಾರೋ ಗೊತ್ತಿಲ್ಲ. ನಮಗೆ ಹಿಂದೂ ಸಮಾಜ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಅಂತಾ ಗೊತ್ತಿದೆ. ಡಿಜೆ ಹಳ್ಳಿ, ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣ‌ ಕೈ ಬಿಡಿ ಅಂತಾರಲ್ಲ, ಉಪ ಮುಖ್ಯಮಂತ್ರಿ ಆಗಲು ಯೋಗ್ಯತೆ ಇದೆಯಾ?, ಇಂತಹ ಉಪ ಮುಖ್ಯಮಂತ್ರಿ ಬೇಕಾ ನಮಗೆ. ಮುಖ್ಯಮಂತ್ರಿ ಅವರು ಕೂಡಲೇ ಉಪ ಮುಖ್ಯಮಂತ್ರಿ ತೆಗೆದು ಬೇರೆಯವರನ್ನು ನೇಮಿಸಿಕೊಳ್ಳಲಿ ಎಂದು ಈಶ್ವರಪ್ಪ ಅವರು ಆಗ್ರಹಿಸಿದ್ದಾರೆ. 

ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ ಅವರು, ಇಬ್ರಾಹಿಂ ‌ಇನ್ನೂ ಡಿಎಸ್ ರಾಜ್ಯಾಧ್ಯಕ್ಷರು. ನಾನು ಈ ವಿಷಯದಲ್ಲಿ ಇಬ್ರಾಹಿಂ ಮಾತು ನಂಬಲ್ಲ. ದೇವೇಗೌಡರ ಮಾತನ್ನು ನಂಬುತ್ತೇನೆ. ಮೈತ್ರಿ‌ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಮೈತ್ರಿ ಆಗಿಯೇ ಆಗುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. 

ಸರ್ಕಾರ ಇಸ್ಲಾಮಿಕ್ ಶಕ್ತಿಗಳ ಪರ ನಿಂತರೆ, ಹಿಂದು ಸಮಾಜ ತನ್ನದೇ ದಾರಿ ಹುಡುಕಿಕೊಳ್ಳುತ್ತೆ: ಜಗದೀಶ್ ಕಾರಂತ ಎಚ್ಚರಿಕೆ

ಗೃಹ ಸಚಿವ ಪರಮೇಶ್ವರ್ ಹಿಂದೂಗಳು ಧೈರ್ಯವಾಗಿರಿ ಅಂತಾ ಹೇಳಬೇಕು

ಶಿವಮೊಗ್ಗಕ್ಕೆ ಸತ್ಯಶೋಧನಾ ಸಮಿತಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್‌ ನೇತೃತ್ವದ ಸತ್ಯ ಶೋಧನಾ ಸಮಿತಿ‌ ಬರಲಿದೆ. ಗಲಭೆಯಲ್ಲಿ ಗಾಯಗೊಂಡ ವ್ಯಕ್ತಿಗಳ ಭೇಟಿ, ಹಾನಿಗೊಳಗಾದ ಮನೆಗಳಿಗೆ ಭೇಟಿ ಕೊಡ್ತಾರೆ. ಶಿವಮೊಗ್ಗ ಎಸ್ ಪಿ ಮೇಲೆ ಕಾಂಗ್ರೆಸ್ ನವರು ಒತ್ತಡ ಹಾಕ್ತಿದ್ದಾರೆ. ಎಸ್ ಪಿ ಅವರಿಂದ ಏನೇನೋ ಹೇಳಿಸುವ ಪ್ರಯತ್ನ ಮಾಡ್ತಿದ್ದಾರೆ. ಯಾವುದೇ ಕಮ್ಯುನಿಟಿಯವನು ತಪ್ಪು‌ ಮಾಡಿದ್ರೆ ಅವನಿಗೆ ಶಿಕ್ಷೆ ಆಗಬೇಕು. ಗೃಹಮಂತ್ರಿ‌ ಪರಮೇಶ್ವರ್ ಶಿವಮೊಗ್ಗಕ್ಕೆ ಭೇಟಿ ಕೊಡಬೇಕು. ಹಿಂದೂಗಳು ಧೈರ್ಯವಾಗಿರಿ ಅಂತಾ ಹೇಳಬೇಕು. ಇಲ್ಲದಿದ್ದರೆ ಹಿಂದುಗಳ ರಕ್ಷಣೆ ನಮಗೆ ಗೊತ್ತಿದೆ. ಏನಿದು ಇಬ್ಬರು ಹುಡುಗರು ಆಡೋ ವಿಷಯದಲ್ಲಿ ನಡೆದ ಗಲಾಟೆನಾ. ಪರಮೇಶ್ವರ ಅವರೇ ‌ನೀವು ಕೇವಲ ಮುಸ್ಲಿಂರ ರಕ್ಷಣೆಗೆ ಇರೋದಲ್ಲಾ, ಹಿಂದೂ, ಕ್ರಿಶ್ಚಿಯನ್ ಅವರಿಗೂ ರಕ್ಷಣೆ ಕೊಡಬೇಕು. ನೀವು ಶಿವಮೊಗ್ಗಕ್ಕೆ ಬಂದು ಸಾಂತ್ವಾನ ಹೇಳಬೇಕು. ಇದು ಸಣ್ಣ ಘಟನೆ ಅಂತೀರಲ್ಲಾ ನೀವು ಗೃಹಮಂತ್ರಿ ಆಗಲು ಯೋಗ್ಯರೋ ಅಯೋಗ್ಯರೋ ಅಂತಾ ಜನ ತೀರ್ಮಾನಿಸಬೇಕು. ಹಿಂದೂಗಳು ಕಲ್ಲು ತೂರಾಟ ಮಾಡುವ ಜನರಲ್ಲ. ಹಿಂದೂಗಳು ಹೇಡಿಗಳಲ್ಲ. ರಾಜ್ಯದಲ್ಲಿ ಒಬ್ಬೊಬ್ಬ ಮಂತ್ರಿ ಒಂದೊಂದು ರೀತಿ‌ ಹುಚ್ಚುಚ್ಚು ಹೇಳಿಕೆ ಕೊಡ್ತಿದ್ದಾರೆ ಅಂತ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. 

ಬೆಳಗಾವಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರಿಗೆ ಬೇಕು‌ ಬೇಕಾದವರು ಸನ್ಮಾನ ಮಾಡಿದ್ದಾರೆ ನಾನು ಏಕೆ ಹೋಗಲಿ. ಈ ಸನ್ಮಾನವನ್ನು ರಾಜ್ಯ ಕುರುಬರ ಸಂಘ ಮಾಡಿದ್ದಲ್ಲ. ಅವರಿಗೆ ಬೇಕಾದವರು ಸನ್ಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಅನ್ನುವ ಕಾರಣಕ್ಕೆ ಎಲ್ಲರೂ ಸನ್ಮಾನ ಮಾಡ್ತಿರುತ್ತಾರೆ ಅದಕ್ಕೆಲ್ಲಾ ನಾನು ಹೋಗಲು ಆಗ್ತದಾ ಎಂದು ಪ್ರಶ್ನಿಸಿದ್ದಾರೆ. 

click me!