ಬಂಜಾರ ಸಮುದಾಯದ 5000 ಲಂಬಾಣಿ ತಾಂಡಾಗಳಿಗೆ ಕಂದಾಯ ಗ್ರಾಮ ಭಾಗ್ಯ: ಸಿಎಂ ಸಿದ್ದರಾಮಯ್ಯ ಘೋಷಣೆ

By Sathish Kumar KHFirst Published Oct 4, 2023, 5:30 PM IST
Highlights

ರಾಜ್ಯದಲ್ಲಿನ 5000 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ಅ.04): ರಾಜ್ಯದಲ್ಲಿ  ಸೇವಾಲಾಲ್ ಜಯಂತಿ ಮಾಡಿದ್ದೇ ನಮ್ಮ ಸರ್ಕಾರ. ಲಂಬಾಣಿ ತಾಂಡಾಗಳನ್ನು ರೆವಿನ್ಯೂ ಲ್ಯಾಂಡ್ ಮಾಡಿದ್ದು ನಮ್ಮ‌ ಸರ್ಕಾರ. ಬಿಜೆಪಿಯವರು ಮೋದಿ ಕರೆಸಿ ಹಕ್ಕು ಪತ್ರ ಕೊಡಿಸಿ ನಾವು ಮಾಡಿದ್ದೇವೆಂದು ಸುಳ್ಳು ಹೇಳಿದರು. ನಾನು ಇವತ್ತು ಘೋಷಣೆ ಮಾಡ್ತೀನಿ ಮತ್ತೆ ಕಮಿಟಿಯನ್ನು ಮಾಡಿ, 5 ಸಾವಿರ ತಾಂಡಾಗಳನ್ನು ರೆವಿನ್ಯೂ ಲ್ಯಾಂಡ್ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಿದ್ದ ಬಂಜಾರ ಭವನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಂಜಾರ ಸಮುದಾಯ ದೇಶದ ನಾನಾ ಮೂಲೆಗಳಲ್ಲಿ ಇದ್ದಾರೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದವರು ಆಗಿದ್ದಾರೆ. ಬಂಜಾರರನ್ನು ಕರ್ನಾಟಕದಲ್ಲಿ ಎಸ್‌ಸಿಗೆ ಸೇರಿಸಿದವರು ದೇವರಾಜ ಅರಸುರವರು. ಇದರಿಂದ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಸಹಕಾರಿಯಾಗಿದೆ. ಶಿಕ್ಷಣ ಇಲ್ಲದಿದ್ರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಶಿಕ್ಷಿತರಾದರೆ ನಾವು ಸ್ವಾಭಿಮಾನಿಗಳಾಗಲು ಸಾಧ್ಯವಾಗುತ್ತದೆ. ಜೊತೆಗೆ, ದೌರ್ಜನ್ಯವನ್ನು ವಿರೋಧಿಸಬಹುದು ಎಂದರು.

ಲಂಬಾಣಿ ಡ್ರೆಸ್‌ನಲ್ಲಿ ಮಿಂಚಿದ ಭರ್ಜರಿ ಬ್ಯಾಚುಲರ್ಸ್ ಹನುಮಂತನ ಜೋಡಿ ಆಸಿಯಾ ಬೇಗಂ! ಗೋರ್‌ಮಾಟಿ, ವೈನೀ ಎಂದ ಫ್ಯಾನ್ಸ್

ಬಂಜಾರ ಸಮುದಾಯದ ಎಲ್ಲ ಮಕ್ಕಳು 100ಕ್ಕೆ100 ಶಿಕ್ಷಣ ಪಡೆಯುವಂತೆ ಮಾಡಬೇಕು. ಹೀಗಾಗಿ, ಈ ಸಮುದಾಯಕ್ಕೆ ರೆಸಿಡೆನ್ಷಿಯಲ್ ಸ್ಕೂಲ್ ಮಾಡಿಕೊಡಲು ನಾವು ಕೆಲಸ ಮಾಡ್ತೀವಿ. ಸೇವಾಲಾಲ್ ಇದ್ದ ಜಾಗಕ್ಕೆ ಜಾಗ ಕೊಟ್ಟು ಅಭಿವೃದ್ಧಿ ಮಾಡಿದ್ದು ನಾನು, ನಮ್ಮ ಸರ್ಕಾರ ಇದ್ದಾಗ. ನಮ್ಮ ಸರ್ಕಾರ ಇದ್ದಾಗಲೇ ಸೇವಾ ಲಾಲ್ ಜೈನ ಪೀಠ ಆಗಿದೆ. ಸೇವಾಲಾಲ್ ಜಯಂತಿ ಮಾಡಿದ್ದೇ ನಮ್ಮ ಸರ್ಕಾರ ಇದ್ದಾಗ. ಲಂಬಾಣಿ ತಾಂಡಾಗಳನ್ನು ಕಂದಾಯ ಭೂಮಿಯಾಗಿ ಮಾಡಿದ್ದು ನಮ್ಮ‌ ಸರ್ಕಾರ ಎಂದು ಹೇಳಿದರು.

ಉಮೇಶ್‌ ಜಾದವ್ ನಮ್ಮ‌ ಆಸಾಮಿನೇ... ಆದ್ರೆ ನಮ್ಮ ಜೊತೆನೆ ಇದ್ದು ಬಿಟ್ಟು ಹೋದಾ.. ತಾಂಡಾನಲ್ಲಿ ವಾಸ ಮಾಡೋನೆ ಮನೆಯ ಒಡೆಯ ಅನ್ನೊ ಕಾನೂನು ತಿದ್ದುಪಡಿ ಮಾಡಿದ್ದು ನಾವು. ನಾನು ಇವತ್ತು ಘೋಷಣೆ ಮಾಡ್ತೀನಿ ಮತ್ತೆ ಕಮಿಟಿಯನ್ನು ಮಾಡಿ, 5 ಸಾವಿರ ತಾಂಡಾಗಳನ್ನು ಕಾಂದಾಯ ಭೂಮಿಯಾಗಿ ಮಾಡ್ತೀನಿ. ಬಂಜಾರ ಸಮುದಾಯಕ್ಕೆ ಬಿಜೆಪಿ ಏನು ಮಾಡಿಲ್ಲ. ಪ್ರಧಾನಿ ಮೋದಿ ಕರೆಸಿ ಹಕ್ಕು ಪತ್ರ ಕೊಡಿಸಿ ನಾನು ಮಾಡಿದೆ ಅಂತ ಸುಳ್ಳು ಹೇಳಿದ್ದಾರೆ. ಅಟ್ಟಿಕ್ಕಿದವರಿಗಿಂತ ಬಟ್ಟಿಕ್ಕಿದವರು ಮೇಲು ಅಂತ ನಮ್ಮಲ್ಲಿ ಗಾಧೆ ಇದೆ ಹಾಗಾಯ್ತು ಬಿಜೆಪಿದು. ಸಮುದಾಯದ ಅಭಿವೃದ್ಧಿಗೆ ಬಜೆಟ್ ನಲ್ಲಿ  ನಾನು 275 ಕೋಟಿ ರೂ. ಕೊಟ್ಟಿದ್ದೆ. ಈಗ ಜಿಲ್ಲಾ ಕೇಂದ್ರಗಳಲ್ಲಿ ಭವನ ಕಟ್ಟಲಿಕ್ಕೆ ಹಣ ಕೊಡ್ತೀವಿ. ಎಲ್ಲಾ ಚುನಾವಣೆಗಳಲ್ಲಿ ನಮಗೆ ಆಶಿರ್ವಾದ ‌ಮಾಡಿದ್ದೀರಿ, ಮುಂದೆಯೂ ಆಶಿರ್ವಾದ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಮ್ಮಲ್ಲಿರೋ ಚಾಕು ಚೂರಿ ಉಳ್ಳಾಗಡ್ಡಿ ಕಟ್ ಮಾಡೋಕೆ ಇರೋದಲ್ಲ‌: ಎಚ್ಚರಿಕೆ ರವಾನಿಸಿದ ಯತ್ನಾಳ್

ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭೆ ಉಪ ಸಭಾಪತಿಗಳಾದ ರುದ್ರಪ್ಪ ಮಾನಪ್ಪ ಲಮಾಣಿ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಶಾಸಕರಾದ ನೇಮಿರಾಜ ನಾಯ್ಕ್, ಅವಿನಾಶ್ ಜಾದವ್, ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ಸಿದ್ಯಾನಾಯ್ಕ್, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

 

click me!